Aeroindia 2025 | ಏರ್ ಶೋ ಹಿನ್ನೆಲೆ ಬೆಂಗಳೂರಿನ 21 ಕೆರೆಗಳಲ್ಲಿ ಮೀನುಗಾರಿಕೆಗೆ ನಿಷೇಧ

Public TV
1 Min Read
air show bengaluru 2019

ಬೆಂಗಳೂರು: 2025ನೇ ಸಾಲಿನ ಏರ್ ಶೋಗೆ (ಏರೋ ಇಂಡಿಯಾ – Aeroindia 2025) ದಿನಗಣನೆ ಆರಂಭವಾಗಿದೆ. ಇದೇ ಫೆ.10 ರಿಂದ 14ರ ವರೆಗೆ ನಡೆಯಲಿರುವ ವೈಮಾನಿಕ ಪ್ರದರ್ಶನದಲ್ಲಿ ದೇಶಿಯ ಹಾಗೂ ವಿದೇಶಿ ವಿಮಾನಗಳು ಪ್ರದರ್ಶನಗೊಳ್ಳುತ್ತಿವೆ. ವಿಮಾನಗಳ ಸುರಕ್ಷತೆಯ ಹಿನ್ನೆಲೆ ಹಲವಾರು ಸುರಕ್ಷತಾ ಕ್ರಮಗಳನ್ನು ಕೈಕೊಳ್ಳಲಾಗುತ್ತಿದೆ.

Aero India 2023 AirShow

ಅದರಂತೆ ರಾಜ್ಯ ಮೀನುಗಾರಿಕೆ ಇಲಾಖೆ ಕಳೆದ ಜ.23 ರಿಂದ ಫೆ.17ರ ವರೆಗೆ, ಬೆಂಗಳೂರು ಉತ್ತರ, ಯಲಹಂಕ ಸುತ್ತಮುತ್ತಲಿನ 21 ಕರೆಗಳಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ (Fishing Ban) ಎಂದು ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಮುಡಾ ಕೇಸಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್‌ ರಿಲೀಫ್‌ – CBI ತನಿಖೆಗೆ ವಹಿಸಲು ಹೈಕೋರ್ಟ್‌ ನಕಾರ

Air show 3

ಮೀನುಗಳು ಹೊರಗೆ ಬಂದ್ರೆ, ಪಕ್ಷಿಗಳ ಹಾರಾಟ ಹೆಚ್ಚಾಗಲಿದೆ‌. ಹೀಗಾಗಿ ವಿಮಾನಗಳ ಹಾರಾಟಕ್ಕೆ ತೊಂದರೆಯಾಗಲಿದೆ. ಆದ್ದರಿಂದ ಯಲಹಂಕ ವಾಯುನೆಲೆಯ ಸುತ್ತಮುತ್ತ ಹಾಗೂ ದೇವನಹಳ್ಳಿ ವ್ಯಾಪ್ತಿಗೆ ಬರುವ ಎಲ್ಲಾ ಕೆರೆಗಳಲ್ಲಿ ಮೀನು ಹಿಡುವಳಿ ಹಾಗೂ ಮೀನು ಮಾರಾಟವನ್ನು ಸ್ಥಗತಗೊಳಿಸಲು ಎಲ್ಲಾ ಟೆಂಡರ್ ಹಾಗೂ ಗುತ್ತಿಗೆದಾರರಿಗೆ ಮೀನುಗಾರಿಕಾ ಇಲಾಖೆ ಸೂಚಿಸಿದೆ. ಇದನ್ನೂ ಓದಿ: ಮುಡಾ ಕೇಸಲ್ಲಿ ಸಿದ್ದರಾಮಯ್ಯ‍ ‍& ಕುಟುಂಬ ನಿರಪರಾಧಿ ಅಂತ ಕೋರ್ಟ್‌ ಹೇಳಿಲ್ಲ: ವಿಜಯೇಂದ್ರ

Share This Article