ಬೆಂಗಳೂರು: ನಾಳೆಯಿಂದ (ಫೆ.10) 15ನೇ ಆವೃತ್ತಿಯ ಏರೋ ಇಂಡಿಯಾ ಶೋ (Aero India Show) ಆರಂಭವಾಗಲಿದೆ. ಯಲಹಂಕದ (Yelahanka) ವಾಯು ನೆಲೆಯಲ್ಲಿ ನಡೆಯಲಿರುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಈ ಬಾರಿ ಹಲವು ದಾಖಲೆಗಳ ನೀರಿಕ್ಷೆಗಳನ್ನ ಹುಟ್ಟಿಸಿದೆ.
ರನ್ ಟು ಎ ಬಿಲಿಯನ್ ಆಪರ್ಚುನಿಟೀಸ್ ಎಂಬ ವಿಶಾಲ ಧ್ಯೇಯದೊಂದಿಗೆ 5 ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಯಲಹಂಕ ವಾಯುನೆಲೆ ಸಿದ್ಧವಾಗಿದೆ. ಫೆಬ್ರವರಿ 10 ರಿಂದ 14ರವರೆಗೆ ನಡೆಯಲಿರುವ ಏರ್ ಶೋಗೆ ದೇಶ, ವಿದೇಶದ ಗಣ್ಯರು ಆಗಮಿಸಲಿದ್ದಾರೆ. ದೇಶ, ವಿದೇಶದ ವಾಯುಪಡೆಯ ವಿಮಾನಗಳು ಬಾನಂಗಳದಲ್ಲಿ ಮೋಡಿ ಮಾಡಲು ರೆಡಿಯಾಗಿವೆ. ಇದನ್ನೂ ಓದಿ: ಅಬ್ಬಬ್ಬಾ.. ಮೊದಲ ಚಿತ್ರಕ್ಕೆ ಇಷ್ಟೊಂದು ಸಂಭಾವನೆ ಪಡೆದಿದ್ದಾರಾ ಮೊನಾಲಿಸಾ?
Advertisement
Advertisement
ಕಾರ್ಯಕ್ರಮವನ್ನು ಭಾರತೀಯ ರಕ್ಷಣಾ ಇಲಾಖೆಯ ಸಚಿವ ರಾಜನಾಥ್ ಸಿಂಗ್ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಮೊದಲ ಮೂರು ದಿನ ಅಂದರೆ ಫೆಬ್ರವರಿ 10, 11, 12ರವರೆಗೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಹಾರ ದಿನಗಳಾಗಿರುತ್ತವೆ. 13 ಮತ್ತು 14ರಂದು ಸಾರ್ವಜನಿಕ ವೀಕ್ಷಣೆಗೆ ಅವಕಾಶವನ್ನ ಕಲ್ಪಿಸಲಾಗಿದೆ. ಏರೋಸ್ಪೇಸ್ ವಲಯದಿಂದ ದೊಡ್ಡ ಶ್ರೇಣಿಯ ಮಿಲಿಟರಿ ವೇದಿಕೆಗಳ ವಾಯು ಪ್ರದರ್ಶನ, ವಸ್ತು ಪ್ರದರ್ಶನಗಳನ್ನು ಒಳಗೊಂಡಿದೆ. ಇದನ್ನೂ ಓದಿ: ಐಶ್ವರ್ಯ ಕೇಸಲ್ಲೀಗ ಪೊಲೀಸರಿಗೆ ಸಿಡಿಆರ್ ಸಂಕಷ್ಟ – ಎಸಿಪಿ ಚಂದನ್‌ಗೆ ಹೆಗಲಿಗೆ ತನಿಖೆ ಹೊಣೆ
Advertisement
Advertisement
ಏರೋ ಇಂಡಿಯಾ ಶೋ ಹೈಲೈಟ್ಸ್:
* ರಕ್ಷಣಾ ಸಚಿವರುಗಳ ಸಮಾವೇಶ, ದೇಶ ವಿದೇಶದ ರಕ್ಷಣಾ ಇಲಾಖೆಯ ಉನ್ನತ ಶ್ರೇಣಿಯ ಅಧಿಕಾರಿಗಳು ಭಾಗಿ.
* ಮೊದಲ ಮೂರು ದಿನ ಉದ್ಯಮದ ವೃತ್ತಿಪರರು, ನೀತಿ ನಿರೂಪಕರು, ಹೂಡಿಕೆದಾರರಿಗೆ ಮೀಸಲು.
* ಸಿಇಒ ದುಂಡು ಮೇಜಿನ ಸಭೆ, ಮಂಥನ್ ಸ್ಟಾರ್ಟ್ಅಪ್ ಕಾರ್ಯಕ್ರಮ.
* ಏರೋಸ್ಪೇಸ್ ಕಂಪನಿಗಳ ವ್ಯಾಪಾರ ಮೇಳ.
* ಆತ್ಮನಿರ್ಭರ್ ಯೋಜನೆಯಡಿ ಭಾರತೀಯ ರಕ್ಷಣಾ ಉತ್ಪಾದನೆ ಜಗತ್ತಿಗೆ ಪರಿಚಯಿಸುವುದು.
* ಭಾರತದಲ್ಲಿ ಉತ್ಪಾದನೆಯ ಉಪಕರಣಗಳನ್ನ ಇತರ ದೇಶಗಳಿಗೆ ಮಾರಾಟ ಮಾಡುವ ಕುರಿತು ಒಡಂಬಡಿಕೆಗಳು.
* ಭಾರತೀಯ ನವೋಧ್ಯಮಗಳ ಪ್ರಚಾರಕ್ಕಾಗಿ, ಅಭಿವೃದ್ಧಿಗಾಗಿ ಉತ್ಪನ್ನಗಳನ್ನ ವಿಶೇಷ ಐಡೆಕ್ಸ್ ಪೆವಿಲಿಯನ್‌ನಲ್ಲಿ ಪ್ರದರ್ಶನ
* ದೇಶಿಯ ನಿರ್ಮಿತ ಯುದ್ಧ ವಿಮಾನಗಳ ಪ್ರದರ್ಶನ
* ಡೈನಾಮಿಕ್ ಏರೋಬ್ಯಾಟಿಕ್ ಪ್ರದರ್ಶನಗಳು, ಲೈವ್ ತಂತ್ರಜ್ಞಾನ ಪ್ರದರ್ಶನಗಳು
* ರಕ್ಷಣಾ ವೈಮಾನಿಕ ಕ್ಷೇತ್ರದಲ್ಲಿ ಯುದ್ಧ ವಿಮಾನಗಳು, ಉಪಕರಣಗಳು ಸೇರಿ ಉತ್ಪನ್ನಗಳ ಖರೀದಿಗೂ ಹಲವು ದೇಶಗಳೊಂದಿಗೆ ಒಪ್ಪಂದಗಳಾಗುವ ನಿರೀಕ್ಷೆ.
ಏರೋಸ್ಪೇಸ್ ಮತ್ತು ರಕ್ಷಣೆಯಲ್ಲಿ ಸ್ವದೇಶಿಕರಣವನ್ನ ಉತ್ತೇಜಿಸುವುದು, ಅತ್ಯಾಧುನಿಕ ತಂತ್ರಜ್ಞಾನಗಳು, ಉತ್ಪನ್ನಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಇಗಾಗಲೇ 700ಕ್ಕೂ ಪ್ರದರ್ಶಕರು ನೋಂದಣಿ ಮಾಡಿಕೊಂಡಿದ್ದು, ರಕ್ಷಣಾ ವ್ಯವಸ್ಥೆಗೆ ಸಂಬಂಧಪಟ್ಟಂತೆ ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಮಾಡಲು ತಯಾರಿಗಳು ನಡೆಯುತ್ತಿವೆ. ಏರ್ ಶೋನಲ್ಲಿ ಯಾವುದೇ ಸಮಸ್ಯೆಗಳಾಗದಂತೆ ಪಾಲಿಕೆ, ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ತೆರಳಿದ ಡಿಕೆಶಿ