ಬೆಂಗಳೂರು: ವಿಶ್ವದ ಗಮನ ಸೆಳೆಯುವ ಏರೋ ಇಂಡಿಯಾ-2023 (Aero India 2023) ಏರ್‌ಶೋ ಇಂದಿನಿಂದ (ಫೆ.13) ಆರಂಭಗೊಳ್ಳುತ್ತಿದೆ. ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ (Bengaluru Yalahanka Airfield) 5 ದಿನಗಳ ಕಾಲ ನಡೆಯುವ ವೈಮಾನಿಕ ಪ್ರದರ್ಶನಕ್ಕಿಂದು ಪ್ರಧಾನಿ ಮೋದಿ (Narendra Modi) ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
Advertisement
ವಿಶ್ವದ ಗಮನ ಸೆಳೆಯುವ 14ನೇ ಆವೃತಿಯ ಏರ್ ಶೋಗೆ (Air Show) ಕೌಂಟ್ ಡೌನ್ ಶುರುವಾಗಿದೆ. 5 ದಿನಗಳ ಕಾಲ ನಡೆಯಲಿರುವ ಏರೋ ಇಂಡಿಯಾ ಪ್ರದರ್ಶನಕ್ಕೆ ಈಗಾಗಲೇ ಯಲಹಂಕ ವಾಯನೆಲೆ ಸಜ್ಜಾಗಿದ್ದು, ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಸೇರಿ ಹಲವು ಗಣ್ಯರು ಬೆಂಗಳೂರಿಗೆ ಆಗಮಿಸಿದ್ದಾರೆ. ಏರ್ ಶೋ ಹಿನ್ನೆಲೆ ಫೆ.14ರಂದು ಬೆಳಗ್ಗೆ 7.30 ರಿಂದ ಏರ್ ಪೋರ್ಟ್ ಮೇಲ್ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ನಿರ್ಭಂಧ ವಿಧಿಸಲಾಗಿದೆ. ಇದನ್ನೂ ಓದಿ: ರಾಜಭವನದಲ್ಲಿ ಮೋದಿ ರಾತ್ರಿ ವಾಸ್ತವ್ಯ – 800ಕ್ಕೂ ಹೆಚ್ಚು ಪೊಲೀಸರಿಂದ ಬಿಗಿಭದ್ರತೆ
Advertisement
Advertisement
ಈ ಬಾರಿಯ ಏರ್ ಶೋನಲ್ಲಿ 35,000 ಚದರ ಅಡಿಗಳಲ್ಲಿ ಎಕ್ಸಿಬಿಷನ್ ಆಯೋಜನೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಜಿಕೆವಿಕೆ ಹಾಗೂ ಜಕ್ಕೂರಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಫೆಬ್ರವರಿ 14ರಂದು ನಡೆಯುವ ಕಾರ್ಯಕ್ರಮಕ್ಕೆ 4 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಇಂಡಿಯಾ ಪೆವಿಲಿಯನ್ನಲ್ಲಿ 115 ಕಂಪನಿಗಳು ಭಾಗಿಯಾಗುತ್ತಿದ್ದು, 227 ಉತ್ಪನ್ನಗಳ ಪ್ರದರ್ಶನ ಇರಲಿದೆ.
Advertisement
ಏರ್‌ಶೋಗೆ ಏನೇನು ಸಿದ್ಧತೆ?: 35 ಸಾವಿರ ಚದರ ಅಡಿಯಲ್ಲಿ ಎಕ್ಸಿಬಿಷನ್ ಆಯೋಜನೆ ಮಾಡಲಾಗಿದೆ. 67 ಫ್ಲೈಯಿಂಗ್ ಡಿಸ್‌ಪ್ಲೇ, 36 ಸ್ಟ್ಯಾಂಡಿಂಗ್ ಡಿಸ್‌ಪ್ಲೇ ಅಳವಡಿಕೆ ಮಾಡಲಾಗಿದೆ. 809 ಪ್ರದರ್ಶಕರು, 98 ವಿದೇಶಿ ಕಂಪನಿಗಳು ಭಾಗಿಯಾಗಿವೆ. ಫೆಬ್ರವರಿ 14 ರಂದು 32 ದೇಶಗಳ ರಕ್ಷಣಾ ಸಚಿವರು ಏರ್‌ಶೋ ನಲ್ಲಿ ಭಾಗಿಯಾಗಲಿದ್ದಾರೆ.
ದೇಶಿಯ, ಅಂತರಾಷ್ಟ್ರೀಯ ಯುದ್ಧ ವಿಮಾನಗಳ ಸಾಹಸ ಪ್ರದರ್ಶನ ಹಾಗೂ ವಿಮಾನಯಾನ ಉದ್ಯಮಕ್ಕೆ ಉತ್ತೇಜನ ಕೊಡುವ ವಿವಿಧ ಸ್ಟಾಲ್ ಗಳು ಕೂಡ ಜನರನ್ನ ಆಕರ್ಷಿಸಲಿವೆ. ಇದನ್ನೂ ಓದಿ: ಜೆಡಿಎಸ್‍ನಲ್ಲಿ ಮುಗಿಯದ ಟಿಕೆಟ್ ಗೊಂದಲ- ಅರಸೀಕೆರೆಗೆ ಬಾಣಾವರ ಅಶೋಕ್ ಫಿಕ್ಸ್
ಏರ್ ಶೋ ನಲ್ಲಿ 100ಕ್ಕೂ ಅಧಿಕ ಮಿತ್ರ ರಾಷ್ಟ್ರಗಳು ಭಾಗಿಯಾಗಲಿದ್ದು, ಕಳೆದ ಎಲ್ಲಾ ವರ್ಷಗಳ ದಾಖಲೆಯನ್ನ ಈ ಬಾರಿ ಏರ್ ಶೋ ಮುರಿಯುವ ವಿಶ್ವಾಸವಿದೆ ಅಂತಾ ರಕ್ಷಣಾ ಸಚಿವರು ಹೇಳಿದ್ದಾರೆ. ಒಟ್ಟಿನಲ್ಲಿ 5 ದಿನಗಳ ಕಾಲ ಬಾನಂಗಳದಲ್ಲಿ ಲೋಹದ ಹಕ್ಕಿಗಳು ಚಮತ್ಕಾರ, ಕಮಾಲ್ ನೋಡಿ, ಪ್ರೇಕ್ಷಕರ ಮಸ್ತ್ ಎಂಜಾಯ್ ಮಾಡಬಹುದು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k