ಬೆಂಗಳೂರು: ಗೃಹ ಇಲಾಖೆಗೆ ಸಲಹೆಗಾರರ ಅವಶ್ಯಕತೆ ಇಲ್ಲ. ಇಲಾಖೆಯಲ್ಲೇ ಪ್ರಾಮಾಣಿಕ ಅಧಿಕಾರಿಗಳಿದ್ದಾರೆ ಎಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡ್ತಾರೆ. ಅವರಿಗೆ ಕೆಲಸ ನಿರ್ವಹಿಸಲು ಸೂಚಿಸಿದ್ದೇನೆ. ಇವತ್ತಿನ ಪೊಲೀಸ್ ಇಲಾಖೆಯ ಸಭೆಯಲ್ಲೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಒಂದು ಕುಟುಂಬದಂತೆ ಕೆಲಸ ಮಾಡಬೇಕು. ಜನತೆಗೆ ವಿಶ್ವಾಸ ಬರುವ ರೀತಿ ಕೆಲಸ ಮಾಡಬೇಕು. ಯಾವುದೇ ಜಾತಿ ಆಧಾರದ ಮೆಲೆ ಕೆಲಸ ಮಾಡಬಾರದು ಅಂತ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
Advertisement
ಕೆಲ ಸೂಕ್ಷ್ಮ ಇಲಾಖೆಗಳಲ್ಲಿ ಸಲಹೆಗಾರರ ಅವಶ್ಯಕತೆ ವಿಚಾರವಾಗಿ ಕಾಂಗ್ರೆಸ್ ಜೊತೆ ಮಾತನಾಡಿ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು. ಹಿಂದಿನ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕೆಂಪಯ್ಯನವರು ಗೃಹ ಇಲಾಖೆ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು.
Advertisement
Advertisement
ಸಚಿವ ಸಂಪುಟ ರಚನೆ ಕುರಿತು ಮಾತನಾಡಿದ ಸಿಎಂ, ಹೊಸ ಸರ್ಕಾರ ರಚನೆ ಆಗಬೇಕಾದ್ರೆ ಚರ್ಚೆಗಳು ಅವಶ್ಯಕ. ಅನೇಕ ಜನರಿಗೆ ಮಂತ್ರಿ ಆಗಬೇಕು ಅಂತ ಆಸೆ ಇರುತ್ತೆ. ಆದ್ರೆ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬೆಂಗಳೂರಿಗೆ ಇಂದು ಬರುತ್ತಿದ್ದಾರೆ. ನಾನು, ದೇವೇಗೌಡರು ಅವರೊಂದಿಗೆ ಚರ್ಚೆ ಮಾಡಿ ಖಾತೆ ಹಂಚಿಕೆ ಹಾಗೂ ಸಮನ್ವಯ ಸಮಿತಿ ರಚನೆ ಕುರಿತು ಅಂತಿಮ ತೀರ್ಮಾನ ಮಾಡುತ್ತೇವೆ. ನಾಳೆಯೊಳಗೆ ಸ್ಪಷ್ಟವಾದ ನಿರ್ಧಾರ ಆಗುವ ಸಾಧ್ಯತೆ ಇದ್ದು, ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.
ಆಡಳಿತ ಯಂತ್ರ ಚುರುಕು ಮಾಡುವ ಕಡೆ ನನ್ನ ಗಮನವಿದ್ದು, ಸಭೆಗಳನ್ನ ಮಾಡಿದ್ದೇನೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು.