ಇದು ನಿಜಕ್ಕೂ ಸಮಂತಾ (Samantha) ಅಭಿಮಾನಿಗಳಿಗೆ ಕಹಿ ಸಮಾಚಾರ. ಇದ್ದಕ್ಕಿದ್ದಂತೆಯೇ ಸಮಂತಾ ಸಿನಿಮಾ ರಂಗದಿಂದ ದೂರ (Goodbye) ಉಳಿಯುವ ಆಲೋಚನೆ ಮಾಡಿದ್ದಾರಂತೆ. ಕೈಯಲ್ಲಿರುವ ಎರಡು ಪ್ರಾಜೆಕ್ಟ್ ಗಳನ್ನು ಶೀಘ್ರವಾಗಿ ಮುಗಿಸಿಕೊಟ್ಟು, ಒಂದು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಇರುವ ಪ್ಲ್ಯಾನ್ ಮಾಡಿದ್ದಾರಂತೆ.
Advertisement
ಸದ್ಯ ವಿಜಯ್ ದೇವರಕೊಂಡ ಜೊತೆ ಖುಷಿ (Khushi,) ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಸಮಂತಾ. ಈ ಸಿನಿಮಾದ ಶೂಟಿಂಗ್ ನಾಲ್ಕೈದು ದಿನಗಳ ಬಾಕಿಯಷ್ಟೇ ಇದೆಯಂತೆ. ಅಲ್ಲದೇ, ಸಿಟಾಡೆಲ್ (Citadel) ಪ್ರಾಜೆಕ್ಟ್ ಅನ್ನೂ ಬಹುತೇಕ ಮುಗಿಸಿದ್ದಾರಂತೆ ಸಮಂತಾ. ಈಗಾಗಲೇ ಒಪ್ಪಿಕೊಂಡಿದ್ದ ಕೆಲವು ಪ್ರಾಜೆಕ್ಟ್ ಗಳ ನಿರ್ಮಾಪಕರಿಗೆ ಹಣ ವಾಪಸ್ಸು ಮಾಡಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಇದನ್ನೂ ಓದಿ:‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ: ರೆಟ್ರೋ ಲುಕ್ ಫೋಟೋ ಲೀಕ್
Advertisement
Advertisement
ಸಮಂತಾ ಇಂಥದ್ದೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣ ಅವರಿಗಿರುವ ಅನಾರೋಗ್ಯ. ಆಟೋಇಮ್ಯೂನ್ ಎನ್ನುವ ಅಪರೂಪದ ಕಾಯಿಲೆಯಿಂದ ಸಮಂತಾ ಬಳಲುತ್ತಿದ್ದಾರೆ. ಕಳೆದ ವರ್ಷದಿಂದ ಅದಕ್ಕಾಗಿ ಅವರು ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುವಾಗಲೂ ಅವರು ಚಿತ್ರರಂಗದಿಂದ ದೂರವಿದ್ದರು. ಇದೀಗ ಹೆಚ್ಚುವರಿಯಾಗಿ ಮತ್ತೆ ಅವರು ಚಿಕಿತ್ಸೆ ಪಡೆದುಕೊಳ್ಳಲಿದ್ದಾರಂತೆ.
Advertisement
ಈ ಕಾಯಿಲೆಗೆ ಹೆಚ್ಚು ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿರುವ ಹಿನ್ನೆಲೆಯಲ್ಲಿ ಒಂದು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದು ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆಯಲು ಸಮಂತಾ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
Web Stories