ಚಿತ್ರದುರ್ಗ: ಮೃಗಾಲಯ ಅಂದ್ರೆ ಅಲ್ಲಿ ಕಾಡು ಪ್ರಾಣಿಗಳು ಸ್ವತಂತ್ರವಾಗಿ ಇತರೆ ಪ್ರಾಣಿಗಳ ಭಯವಿಲ್ಲದೇ ಅವುಗಳದ್ದೇ ಕಾರಿಡಾರ್‍ನಲ್ಲಿ ಸ್ವತಂತ್ರವಾಗಿ ಓಡಾಡುತ್ತ, ಪ್ರವಾಸಿಗರನ್ನು ಆಕರ್ಷಿಸುತ್ತವೆ. ಆದರೆ ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯ ಮಾತ್ರ ಪ್ರಾಣಿಗಳ ಪಾಲಿಗೆ ಜೈಲು ಎನಿಸಿದೆ.
ಚಿತ್ರದುರ್ಗ ನಗರದಿಂದ 5 ಕಿಲೋಮೀಟರ್ ದೂರದ ಕಾಡಿನಲ್ಲಿರುವ ಈ ಮೃಗಾಲಯದಲ್ಲಿ ಕರಡಿ, ಚಿರತೆ, ಹೆಬ್ಬಾವು, ಜಿಂಕೆಗಳು, ನವಿಲು ಸೇರಿದಂತೆ ಅನೇಕ ವನ್ಯಜೀವಿಗಳಿವೆ. ಆದರೆ ಪ್ರಾಣಿಗಳು ಸುಮಾರು ವರ್ಷಗಳಿಂದಲೂ ಕಿಷ್ಕೆಂದೆಯಂತಹ ಕೊಠಡಿಗಳಲ್ಲಿ ಸೆರೆಮನೆ ವಾಸವನ್ನು ಅನುಭವಿಸುತ್ತಿವೆ. ಹೀಗಾಗಿ ಸರ್ಕಾರ ಈ ವನ್ಯ ಜೀವಿಗಳು ಸ್ವತಂತ್ರವಾಗಿರಲಿ ಅಂತ ವಿಶಾಲವಾದ ಮನೆಗಳನ್ನು ಕಟ್ಟಿಸಿದ್ದರೂ ಕರಡಿ ಸೇರಿದಂತೆ ಇತರೆ ಕೆಲವು ಪ್ರಾಣಿಗಳಿಗೆ ಸೆರೆಮನೆಯ ಬಿಡುಗಡೆ ಭಾಗ್ಯವೇ ದೊರೆತಿಲ್ಲ. ಇದರಿಂದಾಗಿ ಪ್ರವಾಸಿಗರು ಈ ಪ್ರಾಣಿಗಳ ಯಾತನೆ ಕಂಡು ಕೂಡಲೇ ಪ್ರಾಣಿಗಳನ್ನು ವಿಶಾಲವಾದ ಮನೆಗಳಿಗೆ ಶಿಫ್ಟ್ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿಗೆ ಏನು ಸಮಸ್ಯೆ ಅಂತ ಹಿಡಿಶಾಪ ಹಾಕುತ್ತಿದ್ದಾರೆ.
Advertisement
Advertisement
ಕಿಷ್ಕಿಂದೆಯಂತೆ ಸಣ್ಣ ಸಣ್ಣ ಮನೆಗಳಲ್ಲಿ ವಾಸಿಸುವ ಪ್ರಾಣಿಗಳ ಯಾತನೆ ಕಂಡು ಪ್ರವಾಸಿಗರು, ಪ್ರಾಣಿ ಪ್ರೀಯರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದ್ದರು. ಹೀಗಾಗಿ ಎಚ್ಚೆತ್ತ ಸರ್ಕಾರ ಪ್ರಾಣಿಗಳ ಸಂರಕ್ಷೆಣೆಗಾಗಿ ಅಗತ್ಯ ಕ್ರಮ ಕೈಗೊಂಡು ಒಂದು ಕೋಟಿ ರೂ.ಗೂ ಅಧಿಕ ಅನುದಾನವನ್ನು ಮೃಗಾಲಯದ ಅಭಿವೃದ್ಧಿಗೆ ಬಿಡುಗಡೆಮಾಡಿತ್ತು. ತರಾತುರಿಯಲ್ಲಿ ಕಾಮಗಾರಿ ಮುಗಿಸಿದ ಅಧಿಕಾರಿಗಳು ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಅವರಿಂದ ಉದ್ಘಾಟನೆ ಕೂಡ ಮಾಡಿಸಿದ್ದಾರೆ. ಆದರೆ ಉದ್ಘಾಟನೆಯಾಗಿ ಮೂರು ತಿಂಗಳುಗಳು ಕಳೆದರೂ ಸಹ ಕಿರುಮೃಗಾಲಯದಲ್ಲಿರುವ ವನ್ಯಜೀವಿಗಳಿಗೆ ಮಾತ್ರ ಸೆರೆಮನೆವಾಸದಿಂದ ಇನ್ನು ಮುಕ್ತಿ ಸಿಕ್ಕಿಲ್ಲ.
Advertisement
ಪ್ರಾಣಿಗಳು ಬೋನ್‍ಗಳಲ್ಲಿ ಕರ್ಕಶ ಶಬ್ದ ಮೂಲಕ ತಮ್ಮ ಯಾತನೆಯನ್ನು ವ್ಯಕ್ತಪಡಿಸುತ್ತವೆ. ಸಣ್ಣ ಸಣ್ಣ ಕಿಂಡಿಯಲ್ಲಿ ವೀಕ್ಷಿಸಿದಾಗ ಪ್ರಾಣಿಗಳ ನೋವು ಕಾಣಿಸುತ್ತದೆ. ಕಾಳಜಿವಹಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪ್ರಾಣಿ ಪ್ರೀಯರು ದೂರಿದ್ದಾರೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಚಿತ್ರದುರ್ಗ ಜಿಲ್ಲಾ ಸಹಾಯಕ ಅರಣ್ಯಾಧಿಕಾರಿ ರಾಘವೇಂದ್ರ ಅವರು, ಅಕ್ಟೋಬರ್ ತಿಂಗಳಲ್ಲೇ ಪ್ರವಾಸಿಗರ ವೀಕ್ಷಣೆಗಾಗಿ ಕಿರು ಮೃಗಾಲಯ ಸಿದ್ಧವಾಗಿದೆ. ಆದರೆ ಮೃಗಾಲಯದ ಅಭಿವೃದ್ಧಿ ಕಾಮಗಾರಿ ನಿರಂತರವಾಗಿರುತ್ತವೆ. ಅಲ್ಲದೆ ಕಾಮಗಾರಿಗೆ ಗಡವು ನಿಗದಿ ಪಡಿಸಿಲ್ಲ. ಕರಡಿ ಸೇರಿದಂತೆ ಇತರೆ ಕೆಲವು ಪ್ರಾಣಿಗಳು ಹೊಸ ಪರಿಸರಕ್ಕೆ ಹೊಂದಿಕೊಳ್ಳಲ್ಲ. ಹೀಗಾಗಿ ಅವುಗಳ ಭದ್ರತೆ ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಇನ್ನೂ ಶಿಫ್ಟ್ ಮಾಡಿಲ್ಲ ಎಂದು ತಿಳಿಸಿದ್ದಾರೆ.