ಎಡಿನ್‍ಬರ್ಗ್: `ಐ ಲವ್ ಯೂ ಮಮ್’ ಅಂತ 13 ವಾರದ ಮಗು ಹೇಳಿದರೆ ಯಾವ ತಾಯಿಗೆ ತಾನೆ ಆಶ್ಚರ್ಯ ಆಗಲ್ಲ ಹೇಳಿ. ಹೌದು ಸ್ಕಾಟ್‍ಲ್ಯಾಂಡ್‍ನ ಕ್ಲೇರಿ ರಿಡ್ ಎಂಬವರ ಪುಟ್ಟ ಮಗಳು ಐ ಲವ್ ಯೂ ಎಂದು ಹೇಳಿರುವ ವಿಡಿಯೋ ಈಗ ವೈರಲ್ ಆಗಿದೆ.
ಸೌಂದರ್ಯ ತಜ್ಞೆ ಕ್ಲೇರ್ ತನ್ನ ಮಗು ಯೆಲ್ಲಿಗೆ ಐ ಲವ್ ಯೂ ಎಂದು ಹೇಳಿದಾಗ ಮಗು ತನ್ನ ತಾಯಿಯ ಮಾತನ್ನು ಕೇಳಿ ಪುನಃ ರಿಪೀಟ್ ಮಾಡುತ್ತಿದೆ.
Advertisement
Advertisement
ಈ ವಿಡಿಯೋವನ್ನು ಕ್ಲೇರ್ ತನ್ನ ಗಂಡ ಗ್ರ್ಯಾಂಟ್‍ಗೆ ವಾಟ್ಸಪ್ ಮೂಲಕ ಕಳುಹಿಸಿದಾಗ ಅವರು ಆಶ್ಚರ್ಯಚಕಿತಗೊಂಡು “ಕ್ಲೇರ್ ನನಗೆ ವಿಡಿಯೋ ಕಳುಹಿಸಿದಾಗ ನಾನು ಕೆಲಸ ಮಾಡುತ್ತಿದ್ದೆ. ನನಗೆ ನಂಬಲು ಸಾಧ್ಯವಾಗಲಿಲ್ಲ. ಎಲಿಯ 13 ವಾರದ ವಿಡಿಯೋ ನೋಡಿದಾಗ ನನಗೆ ನಿಜವಾಗಿಯೂ ನಂಬಲಾಗಲಿಲ್ಲ. ಕ್ಲೇರ್ ಏನು ಹೇಳುತ್ತಿದ್ದಾಳೆ ಅದನ್ನು ಸ್ಪಷ್ಟವಾಗಿ ರಿಪೀಟ್ ಮಾಡಲು ಪ್ರಯತ್ನಿಸುವುದನ್ನು ನೀವು ನೋಡಬಹುದು. ನಾನು ವಿಡಿಯೋವನ್ನು ನನ್ನ ಗೆಳೆಯರಿಗೆ ಮತ್ತು ಕುಟುಂಬದವರಿಗೆ ಕಳುಹಿಸಿದಾಗ ಅವರಿಗೂ ಸಹ ನಂಬಲಿಕ್ಕೆ ಆಗಿರಲಿಲ್ಲ ” ಎಂದಿದ್ದಾರೆ.
Advertisement
Advertisement
ಮಕ್ಕಳು ಮೊದಲ ತೊದಲು ಮಾತು ಶುರು ಮಾಡುವುದೇ 12ರಿಂದ 18 ತಿಂಗಳಲ್ಲಿ ಅದು `ಅಮ್ಮ’ `ಅಪ್ಪ’ ಅಷ್ಟೇ ತೊದಲು ಮಾತುಗಳು. ಕೆಲವು ಮಕ್ಕಳು ಒಂದೂವರೆ ಎರಡು ವರ್ಷವಾಗುವವರೆಗೂ ಪೂರ್ಣವಾಕ್ಯಗಳನ್ನೇ ಮಾತನಾಡುವುದಿಲ್ಲ ಎನ್ನುತ್ತಾರೆ ಮಕ್ಕಳ ತಜ್ಞರು.