ಬಾಲಿವುಡ್‌ನಲ್ಲಿ ಸಾಕಷ್ಟು ಹಾಡುಗಳಿಗೆ ಧ್ವನಿ ನೀಡಿರುವ ಅದ್ನಾನ್ ಸಮಿ ಹಾಕಿರುವ ಈ ಒಂದು ಪೋಸ್ಟ್‌ನಿಂದ ಸಖತ್ ಚರ್ಚೆಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ `ಗುಡ್ ಬೈ’ ಅಂತಾ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ನೋಡಿರುವ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಅಷ್ಟಕ್ಕೂ ಆಗಿದ್ದೇನು ಅಂತಾ ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ.
ಹಿಂದಿ ಮತ್ತು ಸಾಕಷ್ಟು ಭಾಷೆಗಳಲ್ಲಿ ಹಾಡಿ ಸೈ ಎನಿಸಿಕೊಂಡಿರುವ ಖ್ಯಾತ ಗಾಯಕ ಅದ್ನಾನ್ ಮೂಲತಃ ಪಾಕಿಸ್ತಾನದವರು. 2016ರಲ್ಲಿ ಅವರು ಭಾರತದ ಪೌರತ್ವ ಪಡೆದರು. ಇನ್ನು ತಮ್ಮ ವೃತ್ತಿಜೀವನ ಆರಂಭಿಸುವಾಗ 230 ಕೆ.ಜಿ ಇದ್ದರು. ಜಿಮ್, ಫಿಟ್‌ನೆಸ್ ವರ್ಕೌಟ್ ಬಳಿಕ ಫಿಟ್ ಆಗಿ ಬಂದರು.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದ ಗಾಯಕ ಅದ್ನಾನ್ ಸಮಿ ಸಡನ್ ಆಗಿ ʻಗುಡ್ ಬೈʼ ಪೋಸ್ಟ್ ಅಂತಾ ಹಾಕಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಕೆಲವರು ಸೋಷಿಯಲ್ ಮೀಡಿಯಾ ತೊರೆಯುತ್ತಿದ್ದಾರೆ ಅಂತಾ ಪ್ರಶ್ನೆ ಮಾಡಿದ್ರೆ, ಕೆಲವರು ಪಾಸಿಟಿವ್ ಆಗಿ ಯೋಚಿಸಿ ಕೆಲ ಸಮಯದ ನಂತರ ಕಂಬ್ಯಾಕ್ ಆಗಲಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಎಲ್ಲಾ ವದಂತಿಗೂ ಅದ್ನಾನ್ ಸಮಿ, ಉತ್ತರ ಕೊಡುವವರೆಗೂ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]