– ನನ್ನ ಜೀವನದಲ್ಲಿ ಊಹೆಗೂ ನಿಲುಕದ ಘಟನೆಯಾಗುತ್ತೆ ಅನ್ಕೊಂಡಿರಲಿಲ್ಲ
ಬೆಂಗಳೂರು: ನನ್ನ ಜೀವನದಲ್ಲಿ ಊಹೆಗೂ ನಿಲುಕದ ಘಟನೆಯಾಗುತ್ತೆ ಅಂದುಕೊಂಡಿರಲಿಲ್ಲ. ದಯವಿಟ್ಟು ನನ್ನನ್ನು ದುಃಖಿತ ತಂದೆ ಎಂದು ಗುರುತಿಸಿ ಎಂದು ರನ್ಯಾ ಮಲತಂದೆ ಎಡಿಜಿಪಿ ಕೆ.ರಾಮಚಂದ್ರ ರಾವ್ (K Ramachandra Rao) ಪ್ರತಿಕ್ರಿಯೆ ನೀಡಿದ್ದಾರೆ.
ರನ್ಯಾ ರಾವ್ ಚಿನ್ನದ ಕಳ್ಳಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿರುವ ಅವರು, ಈ ವಿಷಯದಿಂದ ಪೋಷಕನಾಗಿ ನನ್ನ ಹೃದಯ ಒಡೆದು ಹೋಗಿದೆ, ನನಗೆ ಆಗಿರುವ ಆಘಾತದ ಕುರಿತು ಹೇಳಲು ಪದಗಳೇ ಸಿಗುತ್ತಿಲ್ಲ. ಇತ್ತೀಚಿನ ಬೆಳವಣಿಗೆಯಿಂದ ನನ್ನ ಮನಸಿಗೆ ತುಂಬಾ ನೋವಾಗಿದೆ. ಈ ಪ್ರಕರಣದಿಂದಾಗಿ ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ಕಷ್ಟದ ಸಮಯ. ಈ ಸಂದರ್ಭವನ್ನು ಎದುರಿಸಲು ನಾವು ಕಷ್ಟಪಡುತ್ತಿದ್ದೇವೆ ಎಂದು ಅಸಮಾಧಾನ ಹೊರಹಾಕಿದರು.ಇದನ್ನೂ ಓದಿ: ನನ್ನನ್ನು ಎಲ್ಲರೂ ಸೇರಿ ಟ್ರ್ಯಾಪ್ ಮಾಡಿದ್ರು.. ಅದ್ಕೆ ಈ ರೀತಿ ಕೆಲಸ ಮಾಡಿದ್ದೇನೆ: ನಟಿ ರನ್ಯಾ ಅಳಲು
ರನ್ಯಾ ಹಾಗೂ ಜತಿನ್ ಹುಕ್ಕೇರಿ 2024ರಲ್ಲಿ ಮದುವೆಯಾದರು. ನಂತರ ತಮ್ಮ ಖಾಸಗಿತನ ಹಾಗೂ ಸ್ವಾತಂತ್ರ‍್ಯವನ್ನು ಕಾಪಾಡಿಕೊಂಡಿದ್ದಾರೆ. ಮದುವೆಯಾದ ಬಳಿಕ ಅವಳು ನಮ್ಮ ಮನೆಗೆ ಬರುವುದನ್ನು ನಿಲ್ಲಿಸಿದ್ದಳು. ಜೊತೆಗೆ ಭೇಟಿಯಾಗಲು ಅವಕಾಶವೂ ನೀಡುತ್ತಿರಲಿಲ್ಲ. ಇದರಿಂದ ನಮ್ಮ ಹಾಗೂ ಅವರ ನಡುವೆ ಅಂತರ ಬೆಳೆದಿತ್ತು ಎಂದರು.
ನಾನು ಕೆಲಸದಲ್ಲಿ ಪ್ರಾಮಾಣಿಕನಾಗಿದ್ದೇನೆ, ನನ್ನದೇ ಆದ ಶಿಸ್ತಿನ ಜೀವನ ನಡೆಸಿದ್ದೇನೆ. ಈ ಕೇಸ್‌ನಿಂದಾಗಿ ನಮ್ಮ ಕುಟುಂಬಕ್ಕೆ ಕಳಂಕ ಬಂದಿದೆ. ನನ್ನನ್ನು ಒಬ್ಬ ದುಃಖಿತ ತಂದೆ ಎಂದು ಗುರುತಿಸಿ ಎಂದು ಕೇಳಿಕೊಳ್ಳುತ್ತೇನೆ. ನನ್ನ ಜೀವನದಲ್ಲಿ ಊಹೆಗೂ ನಿಲುಕದ ಘಟನೆ ನಡೆಯುತ್ತದೆ ಎಂದು ಅಂದುಕೊಂಡಿರಲಿಲ್ಲ. ರನ್ಯಾ ವಿಚಾರದಲ್ಲಿ ನಾನು ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಿ ಎಂದು ಉಲ್ಲೇಖಿಸಿದ್ದಾರೆ.
ಪ್ರಕರಣ ಏನು?
ಮೂಲತಃ ಚಿಕ್ಕಮಗಳೂರಿನವರಾದ ಎಡಿಜಿಪಿ ರಾಮ್‌ಚಂದ್ರರಾವ್ ಅವರ 2ನೇ ಪತ್ನಿಯ ಮೊದಲ ಗಂಡನ ಮಗಳು ರನ್ಯಾ ರಾವ್. ಮಾ 04 ರಂದು ನಟಿ ರನ್ಯಾ ರಾವ್ ಬಳಿ 12 ಕೋಟಿ ಮೌಲ್ಯದ 14.8 ಕೆಜಿ ಚಿನ್ನ ಪತ್ತೆಯಾಗಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ವಿಶೇಷ ಆರ್ಥಿಕ ಅಪರಾಧಗಳ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.ಇದನ್ನೂ ಓದಿ: 1 ಕೆಜಿ ಚಿನ್ನ ಸಾಗಾಟಕ್ಕೆ ರನ್ಯಾಗೆ 4ರಿಂದ 5 ಲಕ್ಷ ಕಮಿಷನ್ – ನಟಿ ಕೇವಲ ಪಾತ್ರಧಾರಿ, ಅಸಲಿ ಕಿಂಗ್‌ಪಿನ್ ಬೇರೆ!