ಬೆಂಗಳೂರು: ರಾಜಧಾನಿ ಬೆಂಗಳೂರಿನ ಟ್ರಾಫಿಕ್‍ನಲ್ಲಿ ಅಂಬುಲೆನ್ಸ್ (Ambulance) ಸಿಕ್ಕಾಕಿಕೊಂಡು ದಾರಿ ಮಧ್ಯದಲ್ಲಿ ಎಷ್ಟೋ ಜೀವಗಳು ಕೊನೆ ಉಸಿರು ಬಿಟ್ಟಿರೋ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಸಂಚಾರ ದಟ್ಟಣೆಯಲ್ಲಿ ಅಂಬುಲೆನ್ಸ್ ಸಿಲುಕಿಕೊಂಡಿರುವಾಗ ಸಂಚಾರಿ ಪೊಲೀಸರು ಕೂಡಲೇ ಟ್ರಾಫಿಕ್ (Traffic) ಕ್ಲಿಯರ್ ಮಾಡಿ ಅಂಬುಲೆನ್ಸ್‍ಗೆ ದಾರಿ ಮಾಡಿಕೊಡೋದಕ್ಕೆ ಕಷ್ಟ ಸಾಧ್ಯವಾಗುವ ಪರಿಸ್ಥಿತಿ ಬೆಂಗಳೂರಿನಲ್ಲಿದೆ.
Advertisement
ಸಂಚಾರ ದಟ್ಟಣೆಯಿಂದ ಅಂಬುಲೆನ್ಸ್ ಗೆ ಆಗುತ್ತಿರೋ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೆಂಗಳೂರು ಸಂಚಾರಿ ಪೊಲೀಸರು ಅಡಾಪ್ಟಿವ್ ಸಿಗ್ನಲ್ (Adaptive Signal) ಮೊರೆ ಹೋಗುತ್ತಿದ್ದಾರೆ. ಬೆಂಗಳೂರಿನಂತಹ ಸಂಚಾರ ದಟ್ಟಣೆಯ ಸ್ಥಳಗಳಲ್ಲಿ ಅಡಾಪ್ಟಿವ್ ಸಿಗ್ನಲ್ ಪರಿಹಾರವಾಗುತ್ತೆ ಎಂದು ಟ್ರಾಫಿಕ್ ಸ್ಪೆಷಲ್ ಕಮಿಷನರ್ ಸಲೀಂ ಹೇಳುತ್ತಾರೆ. ಇದನ್ನೂ ಓದಿ: ದಟ್ಟ ಮಂಜಿನ ನಡುವೆ ಗ್ರಾಮಕ್ಕೆ ಎಂಟ್ರಿ ಕೊಟ್ಟ ಒಂಟಿ ಸಲಗ
Advertisement
Advertisement
ಅಡಾಪ್ಟಿವ್ ಸಿಗ್ನಲ್ ಬೆಂಗಳೂರಿನ ಸಿಗ್ನಲ್‍ಗಳಲ್ಲಿ ಅಳವಡಿಸುವುದರಿಂದ ಅಂಬುಲೆನ್ಸ್ 200 ಮೀಟರ್ ದೂರದಲ್ಲಿ ಬರುತ್ತಿರುವಾಗ ಸಿಗ್ನಲ್‍ಗಳಲ್ಲಿ ಸಂಚಾರಿ ಪೊಲೀಸರು ಇರಲಿ ಇರದೇ ಇರಲಿ ಆಟೋಮಿಟಿಕ್ ಆಗಿ ಸಿಗ್ನಲ್ ಫ್ರೀ ಆಗುತ್ತೆ. 200 ಮೀಟರ್ ದೂರದಲ್ಲಿ ಅಂಬುಲೆನ್ಸ್ ಇರುವಾಗಲೇ ಸಿಗ್ನಲ್ ಫ್ರೀ ಆಗುವುದುರಿಂದ ಸಂಚಾರದಟ್ಟಣೆಯಲ್ಲಿ ಅಂಬುಲೆನ್ಸ್‍ಗಳು ಸಿಲುಕಿಕೊಂಡು ರೋಗಿಗಳು ಒದ್ದಾಡೋದು ತಪ್ಪುತ್ತೆ.
Advertisement
ಸಂಚಾರಿ ಪೊಲೀಸರು ನಗರದ ಪ್ರಮುಖ 160 ಸಿಗ್ನಲ್‍ಗಳಲ್ಲಿ ಚಿಜಚಿಠಿಣive sigಟಿಚಿಟ ಫಿಕ್ಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. 160 ಅಡಾಪ್ಟಿವ್ ಸಿಗ್ನಲ್‍ಗಳಗಳು ಖರೀದಿ ಮಾಡಲು ಅನುಮತಿ ಕೂಡ ಪಡೆದಿದುಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಬೆಂಗಳೂರಿನಲ್ಲಿ ಅಂಬುಲೆನ್ಸ್‍ಗಳಿಗೆ ಸಿಗ್ನಲ್ ಫ್ರೀ ಮಾಡಿಕೊಡಲು ಒಂದೊಳ್ಳೆ ಅವಕಾಶ ಓದಗಿಬರುವುದರಲ್ಲಿ ಅನುಮಾನವೇ ಇಲ್ಲ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k