ವಾಷಿಂಗ್ಟನ್: ಭಾರತದ ನಂ.1 ಶ್ರೀಮಂತ ವ್ಯಕ್ತಿ, ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ (Gautam Adani) ಅವರು ಇತ್ತೀಚೆಗಷ್ಟೇ ಅಮೆಜಾನ್‌ನ ಜೆಫ್ ಬೆಜೋಸ್ (Jeff Bezos) ಅವರನ್ನು ಹಿಂದಿಕ್ಕಿ, ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ (Billionaire) ವ್ಯಕ್ತಿಗಳ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಪಡೆದಿದ್ದರು. ಆದರೆ ಅದಾನಿಯವರು ಈಗ ಮತ್ತೆ ಬ್ಲೂಮ್‌ಬರ್ಗ್ ಇಂಡೆಕ್ಸ್‌ನಲ್ಲಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ (Bloomberg Billionaires Index) ಪ್ರಕಾರ ಇಂದಿನ ಹೊಸ ನವೀಕರಣದಲ್ಲಿ ಗೌತಮ್ ಅದಾನಿಯವರ ಸಂಪತ್ತಿನ ಮೌಲ್ಯ 135 ಬಿಲಿಯನ್ ಡಾಲರ್(ಸುಮಾರು 10.98 ಲಕ್ಷ ಕೋಟಿ ರೂ.)ಗಳಷ್ಟಿದೆ. 10 ದಿನಗಳ ಹಿಂದೆ ಅದಾನಿಯವರ ಸಂಪತ್ತು 154.7 ಬಿಲಿಯನ್ ಡಾಲರ್(12.33 ಲಕ್ಷ ಕೋಟಿ ರೂ.)ಗಳಷ್ಟಿತ್ತು. ಅವರು ಇತ್ತೀಚೆಗೆ 6.9 ಬಿಲಿಯನ್ ಡಾಲರ್(ಸುಮಾರು 56 ಸಾವಿರ ಕೋಟಿ ರೂ.) ಸಂಪತ್ತು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
ಇದೀಗ ಅದಾನಿಯನ್ನು ಹಿಂದಿಕ್ಕಿ ಬೆಜೋಸ್ ಅವರು ಮತ್ತೆ 2ನೇ ಸ್ಥಾನಕ್ಕೆ ಮರಳಿದ್ದಾರೆ. ಬೆಜೋಸ್ ಅವರ ಪ್ರಸ್ತುತ ನಿವ್ವಳ ಸಂಪತ್ತು 138 ಬಿಲಿಯನ್ ಡಾಲರ್ (11.23 ಲಕ್ಷ ಕೋಟಿ ರೂ.) ಆಗಿದೆ. ಟೆಸ್ಲಾ ಸಿಇಒ ಎಲೋನ್ ಮಸ್ಕ್ ಈಗ 245 ಬಿಲಿಯನ್ ಡಾಲರ್(19.92 ಲಕ್ಷ ಕೋಟಿ ರೂ) ಸಂಪತ್ತನ್ನು ಹೊಂದುವ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಹೂಡಿಕೆದಾರರಿಗೆ ಒಂದೇ ದಿನ 7 ಲಕ್ಷ ಕೋಟಿ ನಷ್ಟ
Advertisement
ಅದಾನಿಯವರು ಈ ವರ್ಷ ಫೆಬ್ರವರಿಯಲ್ಲಿ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಏಷ್ಯಾದಲ್ಲೇ ನಂ.1 ಶ್ರೀಮಂತ ವ್ಯಕ್ತಿಯಾದರು. ಕಳೆದ ತಿಂಗಳು ಮೈಕ್ರೋಸಾಫ್ಟ್ ಕಾರ್ಪೊರೇಷನ್‌ನ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ, ವಿಶ್ವದ 3ನೇ ಶ್ರೀಮಂತ ವ್ಯಕ್ತಿಯಾದರು. ಇದಾದ ಕೆಲವೇ ದಿನಗಳಲ್ಲಿ ಬೆಜೋಸ್ ಅವರನ್ನೂ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದರು. ಇದೀಗ ಅದಾನಿ ಮತ್ತೆ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.
Advertisement
ಸಂಪತ್ತು ಇಳಿಕೆಯಾಗಿದ್ದು ಯಾಕೆ?
ಕಂಪನಿಯ ಷೇರುಗಳ ಪೈಕಿ ಮಾಲೀಕರ ಬಳಿ ಇರುವ ಷೇರುಗಳ ಲೆಕ್ಕಾಚಾರದ ಆಧಾರದಲ್ಲಿ ಸಂಪತ್ತಿನ ಮೌಲ್ಯವನ್ನು ಅಂದಾಜಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ವಿಶ್ವಾದ್ಯಂತ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗುತ್ತಿದೆ. ಭಾರತದಲ್ಲೂ ಅದಾನಿ ಕಂಪನಿಯ ಷೇರುಗಳು ಇಳಿಕೆಯಾದ ಹಿನ್ನೆಲೆಯಲ್ಲಿ ಗೌತಮ್ ಅದಾನಿಯವರ ಸಂಪತ್ತಿನ ಮೌಲ್ಯವೂ ಕಡಿಮೆಯಾಗಿದೆ. ಇದನ್ನೂ ಓದಿ: ಫಸ್ಟ್ ಟೈಂ ಸುಪ್ರೀಂ ಸಾಂವಿಧಾನಿಕ ಪೀಠದ ವಿಚಾರಣೆ ಲೈವ್ – ಎಲ್ಲಿ ನೋಡಬಹುದು?