LatestLeading NewsMain PostNational

ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಹೂಡಿಕೆದಾರರಿಗೆ ಒಂದೇ ದಿನ 7 ಲಕ್ಷ ಕೋಟಿ ನಷ್ಟ

ಮುಂಬೈ: ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಷೇರು ಮಾರುಕಟ್ಟೆಯಲ್ಲಿ(Share Market) ರಕ್ತಪಾತವಾಗಿದೆ.

ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌(Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ(NSE) ಸೂಚಂಕ್ಯ ನಿಫ್ಟಿ(Nifty) ಅಂಕಗಳು ಭಾರೀ ಇಳಿಕೆಯಾಗಿದ್ದರಿಂದ ಒಂದೇ ದಿನ ಹೂಡಿಕೆದಾರರು ಸುಮಾರು 7 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ.

ಶುಕ್ರವಾರ 58,098 ಅಂಕದಲ್ಲಿ  ಕೊನೆಯಾಗಿದ್ದ ಸೆನ್ಸೆಕ್ಸ್‌ ಇಂದು ಆರಂಭದ ಎರಡು ಗಂಟೆಯಲ್ಲಿ 1 ಸಾವಿರ ಅಂಕ ಇಳಿಕೆಯಾಗಿತ್ತು. ಬಳಿಕ ನಿಧನವಾಗಿ ಚೇತರಿಕೆ ಕಂಡಿತು. ಅಂತಿಮವಾಗಿ 953 ಅಂಕ ಇಳಿಕೆಯಾಗಿ ದಿನದ ಕೊನೆಯಲ್ಲಿ 57,145 ಅಂಕಗಳಿಗೆ ವ್ಯವಹಾರವನ್ನು ಕೊನೆಗೊಳಿಸಿತು.

ಶುಕ್ರವಾರ 17,327 ಅಂಕದಲ್ಲಿ ಕೊನೆಯಾಗಿದ್ದ ನಿಫ್ಟಿ ಇಂದು 311ಅಂಕ ಇಳಿಕೆಯಾಗಿ 17,016 ಅಂಕಗಳಿಗೆ ಕೊನೆಯಾಯಿತು. ಇದನ್ನೂ ಓದಿ: ಯುಪಿಎ ಅವಧಿಯಲ್ಲಿ ಆರ್ಥಿಕ ಚಟುವಟಿಕೆ ಸ್ಥಗಿತ – ಇನ್ಫಿ ನಾರಾಯಣ ಮೂರ್ತಿ

ರಕ್ತಪಾತಕ್ಕೆ ಕಾರಣ ಏನು?
ಅಮೆರಿಕದ ಫೆಡರಲ್‌ ರಿಸರ್ವ್‌(Federal Reserve) ಬಡ್ಡಿ ದರವನ್ನು ಏರಿಸಿದ ಪರಿಣಾಮ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಪರಿಣಾಮ ವಿಶ್ವಾದ್ಯಂತ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.

ಡಾಲರ್‌ ಮುಂದೆ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತವಾಗಿದೆ. ಸೋಮವಾರ 81.55ಕ್ಕೆ ಇಳಿಕೆಯಾಗಿದೆ.

ಹಣದುಬ್ಬರ ನಿಯಂತ್ರಿಸಲು ಆರ್‌ಬಿಐ ಬಡ್ಡಿದರವನ್ನು ಮತ್ತಷ್ಟು ಏರಿಸುವ ಸಾಧ್ಯತೆಯಿದೆ. ಈ ಬಾರಿ 35 ಬೇಸಿಸ್‌ ಪಾಯಿಂಟ್‌ ಏರಿಸಬಹುದು ಎಂಬ ನಿರೀಕ್ಷೆಯಿದೆ.

ಜಪಾನ್‌ನಲ್ಲಿ 20 ತಿಂಗಳಿನಲ್ಲೇ ಕಡಿಮೆ ಪ್ರಮಾಣದಲ್ಲಿ ಕೈಗಾರಿಕ ಪ್ರಗತಿ ದಾಖಲಾಗಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ, ವಿಶ್ವಾದ್ಯಂತ ಆರ್ಥಿಕ ಬೆಳವಣಿಗೆ ಕುಸಿದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಗಳಲ್ಲಿ ರಕ್ತಪಾತ ಆಗುತ್ತಿದೆ.

Live Tv

Leave a Reply

Your email address will not be published. Required fields are marked *

Back to top button