ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ‘ಬಿಗ್‍ಬಾಸ್’ ಸೀಸನ್ 6 ಭಾನುವಾರ ಆರಂಭವಾಗಿದ್ದು, ಸಾಮಾನ್ಯ ಸ್ಪರ್ಧಿಗಳು ಸೇರಿದಂತೆ 18 ಮಂದಿ ಬಿಗ್‍ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
ಈ ಬಾರಿ ಬಿಗ್‍ಬಾಸ್ ನಲ್ಲಿ ಒಂದು ವಿಶೇಷ ಇದ್ದು, ಅದು ಏನೆಂದರೆ ಬಿಗ್ ಮನೆಯಲ್ಲಿ ಎಲ್ಲ ರೀತಿ ಜನರಿಗೂ ಅವಕಾಶ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಈ ಬಾರಿ ತೃತೀಯ ಲಿಂಗಿಯರಿಗೂ ಅವಕಾಶ ಮಾಡಿಕೊಟ್ಟಿದೆ. ಇದು ಈ ಬಾರಿಯ ಬಿಗ್‍ಬಾಸ್ ಶೋನ ವಿಶೇಷವಾಗಿದೆ.
Advertisement
Advertisement
9ನೇ ಸ್ಪರ್ಧಿಯಾಗಿ ವಿಭಿನ್ನ ಶೈಲಿಯ ನೃತ್ಯ ಮಾಡುವ ಆಡಮ್ ಪಾಶಾ ದೊಡ್ಡ ಮನೆಗೆ ಪ್ರವೇಶ ಪಡೆದಿದ್ದಾರೆ. ಡ್ರ್ಯಾಗ್ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ಆಡಮ್ ಪಾಶಾ ಬೆಂಗಳೂರಿನ ಫಸ್ಟ್ ಡ್ರ್ಯಾಗ್ ಕ್ವೀನ್ ಹೆಗ್ಗಳಿಕೆ ಹೊಂದಿದ್ದಾರೆ. ಆಡಮ್ ಪಾಶಾ ಬೆಂಗಳೂರಿನಲ್ಲಿ ಹುಟ್ಟಿದ್ದು, ಇಂಗ್ಲೆಂಡ್ ನಲ್ಲಿ ಬೆಳೆದಿದ್ದಾರೆ. ಇವರಿಗೆ ಈಗ 35 ವರ್ಷವಾಗಿದ್ದು, ತಮ್ಮ 13ನೇ ವಯಸ್ಸಿನಲ್ಲಿ ತಾವು ತೃತೀಯ ಲಿಂಗಿ ಅನ್ನೋದು ಗೊತ್ತಾಗಿದೆ. ಇದೀಗ ತೃತೀಯ ಲಿಂಗಿಯೊಬ್ಬರು ‘ಬಿಗ್ ಬಾಸ್’ ಮನೆಗೆ ಎಂಟ್ರಿಕೊಟ್ಟಿರುವುದು ಇದೇ ಮೊದಲು.
Advertisement
Advertisement
ಬಿಗ್‍ಬಾಸ್ ವೇದಿಕೆಯಲ್ಲಿ ಆಡಮ್ ಪಾಶಾ ಮಾತು
ನನ್ನನ್ನು ಡ್ರ್ಯಾಗ್ ಕ್ವೀನ್ ಅಂತ ಕರೆಯುತ್ತಾರೆ. ಯಾಕೆಂದರೆ ನಾನು ನೋಡಲು ಹುಡುಗನ ತರ ಇದ್ದೀನಿ. ಆದರೆ ನಾನು ಹುಡುಗ ಅಲ್ಲ. ನಾನು ವೇದಿಕೆಯ ಮೇಲೆ ಹುಡುಗಿಯಾಗಿ ಹೋಗುತ್ತೇನೆ. ಹುಡುಗಿಯ ರೀತಿ ಡ್ಯಾನ್ಸ್ ಮಾಡಿ ಎಲ್ಲರನ್ನು ನಗಿಸಿ ಬರುತ್ತೇನೆ. ನಾನು 2018ರಲ್ಲಿ ಬೆಂಗಳೂರಿಗೆ ಬಂದಿದ್ದೆ. ಬ್ಯಾಂಕಾಕ್ ನಲ್ಲಿ ಡ್ರ್ಯಾಗ್ ಕ್ವೀನ್ ಶಾಲೆ ಇದೆ. ಅಲ್ಲಿ ನಾನು ಅಭಿನಯಿಸುವುದು, ಡ್ಯಾನ್ಸ್ ಮಾಡುವುದನ್ನು ಕಲಿತಿದ್ದೇನೆ. ಈಗ ನಾನು ಟ್ರೈನಿ ಕೂಡ ಆಗಿದ್ದೇನೆ. ನಾನು ಯೂರೋಪ್ ಮತ್ತು ಇಂಗ್ಲೆಂಡ್ ನಲ್ಲಿ ಡ್ಯಾನ್ಸ್ ಮಾಡುತ್ತೇನೆ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನನ್ನಂತವರಿಗೆ ಅವಕಾಶ ಕೊಟ್ಟಿದ್ದಕ್ಕೆ ವಾಹಿನಿಗೆ ಧನ್ಯವಾದಗಳು. ಸಾಮಾನ್ಯ ಜನರ ಮಧ್ಯೆ ನಮ್ಮಂತವರು ಇರುತ್ತಾರೆ. ನಾವು ಎಲ್ಲಾ ಕೆಲಸ ಮಾಡುತ್ತೇವೆ ಎಂದು ಜನರಿಗೆ ತೋರಿಸುವುದೇ ನಮ್ಮ ಉದ್ದೇಶವಾಗಿದೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್ ತೃತೀಯ ಲಿಂಗಗಳಿಗೆ ಅಂತ ಸೆಕ್ಷನ್ 377 ಕಾಯ್ದೆಯನ್ನು ಜಾರಿಗೆ ತಂದಿದೆ. ನಮ್ಮಂತವರು ನಾನು ಈ ರೀತಿ ಇದ್ದೇನೆ ಎಂದು ಮನೆಯಿಂದ ಹೊರಗೆ ಬರಲು ಭಯಪಡುತ್ತಾರೆ. ನಾನು ಧೈರ್ಯವಾಗಿ ಬಂದಿದ್ದೇನೆ. ನನ್ನನ್ನು ನೋಡಿ ನಮ್ಮ ಸಮುದಾಯದವರು ಇನ್ನು ಮುಂದೆ ಧೈರ್ಯವಾಗಿ ಮನೆಯಿಂದ ಹೊರಗೆ ಬರುತ್ತಾರೆ. ನಮ್ಮನ್ನು ನಾವು ಪ್ರೀತಿಸದಿದ್ದರೆ ಬೇರೆಯವರು ನಮ್ಮನ್ನು ಪ್ರೀತಿಸುವುದಿಲ್ಲ ಎಂದು ಹೇಳಿದ್ದಾರೆ.
ಕುಟುಂಬ:
ನನಗೆ ಕುಟುಂಬ ಇಲ್ಲ, 2010ರಲ್ಲಿ ಅಮ್ಮ ನಿಧರಾದರು. ನಾನು ಅಮ್ಮ ಮೃತಪಟ್ಟ ನಂತರ ಬ್ಯಾಂಕಾಕಿಗೆ ಹೋದೆ. ಯಾಕೆಂದರೆ ನಮ್ಮ ತಂದೆಗೆ ಒಬ್ಬ ಮಗಬೇಕಿತ್ತು. ನಾನು ಗೆ ಅಂತ ಗೊತ್ತಿದ್ದರೂ, ಹುಡುಗನ ರೀತಿ ಇರಲು ಹೇಳುತ್ತಿದ್ದರು. ನನ್ನಿಂದ ನಮ್ಮ ತಂದೆ ಸಂತಸದಿಂದ ಇರುತ್ತಿರಲಿಲ್ಲ. ನನಗೂ ನನ್ನ ತಂದೆಯ ಮಧ್ಯೆ ತುಂಬಾ ಅಂತರ ಇತ್ತು. ಆದ್ದರಿಂದ ನಾನು ಬೆಂಗಳೂರು ಬಿಟ್ಟು ಬ್ಯಾಂಕಾಕಿಗೆ ಹೋದೆ. ನನಗೆ ಇಬ್ಬರು ಸಹೋದರಿಯರು ಇದ್ದಾರೆ.
https://www.facebook.com/ColorsSuper/videos/2032446550134671/
ಒಮ್ಮೆ ನನ್ನ ಅಕ್ಕ ಫೋನ್ ಮಾಡಿ ತಂದೆಗೆ ಆರೋಗ್ಯ ಸರಿಯಿಲ್ಲ ಬಾ ಎಂದು ಕರೆದರು. ನಾನು ತಕ್ಷಣ ಬೆಂಗಳೂರಿಗೆ ಬಂದೆ ಆದರೆ ನಮ್ಮ ತಂದೆಯವರಿಗೆ ಕ್ಯಾನ್ಸರ್ ಕೊನೆಯ ಹಂತ ತಲುಪಿತ್ತು. ನಮ್ಮ ತಂದೆ ಸಾಯುವ ಸ್ಥಿತಿಯಲ್ಲಿ ಇದ್ದಾಗಲೂ, ನೀನು ಹಿಜಡಾ ಯಾಕೆ ನನ್ನನ್ನು ನೋಡಲು ಬಂದೆ ಎಂದು ಬೈದರು. ಇತ್ತ ನನ್ನ ಅಕ್ಕ ನನ್ನ ಬಳಿ ಹೆಬ್ಬೆಟ್ಟು ಮಾಡಿಕೊಂಡು ಆಸ್ತಿಯಲ್ಲವನ್ನು ಮಾರಾಟ ಮಾಡಿ ಮೋಸ ಮಾಡಿ ಹೋದರು.
ನನ್ನನ್ನು ಒಳಗಿನ ಸ್ಪರ್ಧಿಗಳು ಒಪ್ಪಿಕೊಳ್ಳಬೇಕು ಎಂದು ಭಯಸುತ್ತೇನೆ ಎಂದು ಹೇಳಿ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv