ಬ್ರಿಟನ್: ಬ್ರಿಟಿಷ್ ವನ್ಯಜೀವಿ ತಜ್ಞನೊಬ್ಬ ಸುಮಾರು 40 ಕ್ಕೂ ಹೆಚ್ಚು ನಾಯಿಗಳ ಮೇಲೆ ಅತ್ಯಾಚಾರ, ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
ಪ್ರಾಣಿಗಳ ಮೇಲೆ ದೌರ್ಜನ್ಯ ಎಸಗಿದ ಆರೋಪದಲ್ಲಿ 2022ರಲ್ಲಿ ವನ್ಯಜೀವಿ ತಜ್ಞ ಹಾಗೂ ಖ್ಯಾತ ಮೊಸಳೆ ತಜ್ಞ ಆ್ಯಡಮ್ ಬ್ರಿಟನ್ (Adam Britton) ಎಂಬಾತನನ್ನು ಬಂಧಿಸಲಾಗಿತ್ತು. ಆತನ ವಿರುದ್ಧ ಪೊಲೀಸರು 60 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಇದನ್ನೂ ಓದಿ: ಬಲೂಚಿಸ್ತಾನದ ಮಸೀದಿ ಬಳಿ ಭಾರೀ ಸ್ಫೋಟ – 52 ಜನ ದುರ್ಮರಣ
Advertisement
Advertisement
ಹತ್ತಾರು ಶ್ವಾನಗಳನ್ನು ಸಾಯುವವರೆಗೂ ಹಿಂಸಿಸುತ್ತಿದ್ದ. ಅಷ್ಟೇ ಅಲ್ಲ, ಪ್ರಾಣಿಗಳ ಮೇಲೆ ಎಸಗುತ್ತಿದ್ದ ದೌರ್ಜನ್ಯದ ದೃಶ್ಯಗಳನ್ನು ವೀಡಿಯೋ ಮಾಡಿ ಆನ್‌ಲೈನ್‌ನಲ್ಲಿ ಹರಿಬಿಡುತ್ತಿದ್ದ. ಈ ವಿಚಾರವಾಗಿ ಆ್ಯಡಮ್ ತಪ್ಪೊಪ್ಪಿಕೊಂಡಿದ್ದಾನೆ.
Advertisement
ಆಡಮ್ 18 ತಿಂಗಳ ಅವಧಿಯಲ್ಲಿ ಸುಮಾರು 42 ಶ್ವಾನಗಳ ಮೇಲೆ ದೌರ್ಜನ್ಯ ಎಸಗಿದ್ದಾನೆ. ಅವುಗಳ ಪೈಕಿ 39 ಶ್ವಾನಗಳು ಮೃತಪಟ್ಟಿವೆ. ಪ್ರಕರಣ ಸಂಬಂಧ ನಾರ್ದರ್ನ್ ಟೆರಿಟರಿ (ಎನ್‌ಟಿ) ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಯಿತು. ಇದನ್ನೂ ಓದಿ: ಟಿವಿ ಸ್ಟುಡಿಯೋದಲ್ಲೇ ಹೊಡೆದಾಡಿಕೊಂಡ ರಾಜಕಾರಣಿಗಳು
Advertisement
ಬಿಬಿಸಿ ಮತ್ತು ನ್ಯಾಷನಲ್ ಜಿಯಾಗ್ರಫಿಕ್ ಪ್ರೊಡಕ್ಷನ್‌ಗಳಲ್ಲಿ ಈತ ಕೆಲಸ ಮಾಡಿದ್ದ. ಮೊಸಳೆಗಳ ಬಗ್ಗೆ ಅಧ್ಯಯನಕ್ಕೆ 20 ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ಹೋಗಿದ್ದ.
Web Stories