ಬೆಂಗಳೂರು: ಕೃತಜ್ಞತೆ ಇಲ್ಲದವಳ ರೀತಿಯಲ್ಲಿ ನನ್ನನ್ನು ಬಿಂಬಿಸುತ್ತಿದ್ದಾರೆ. ಯೋಗೇಶ್ ಖಾತೆಯಲ್ಲಿನ ಹಣ ನನ್ನ ಕೈಸೇರಿಲ್ಲ ಎಂದು ನಟಿ ವಿಜಯಲಕ್ಷ್ಮಿ ಕಣ್ಣೀರು ಹಾಕುತ್ತಾ ವೀಡಿಯೋವನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಜನರ ಎದುರಿನಲ್ಲಿ ನನ್ನನ್ನು ಕೆಟ್ಟವಳಂತೆ ಬಿಂಬಿಸುವ ಸಂಚು ನಡೆದಿದೆ. ಮೊನ್ನೆ ವಾಣಿಜ್ಯ ಮಂಡಳಿಗೆ ನನ್ನನ್ನು ಕರೆದಿದ್ದು. ಯೋಗೇಶ್ ಅಕೌಂಟ್‍ನಲ್ಲಿ ಇರುವ ಹಣವನ್ನು ಕೊಡುತ್ತೇವೆ ಅಂತ ಹೇಳಿದ್ದರು. ಇವತ್ತಿನವರೆಗೂ ನನಗೆ ಆ ಹಣ ಸಿಕ್ಕಿಲ್ಲ. ನಿನ್ನೆ ಯಾರೋ ಲಯನ್ ಜಯರಾಜ್ ಎಂಬುವವರು ವೀಡಿಯೋದಲ್ಲಿ ನನಗೆ ಬೈಯ್ಯುತ್ತಿದ್ದರು. ನನ್ನ ಬಗ್ಗೆ ಅಸಹ್ಯವಾಗಿ ಮಾತನಾಡುತ್ತಿದ್ದಾರೆ ಎಂದು ತಮಗಾಗಿರುವ ನೋವನ್ನು ಹೇಳಿಕೊಂಡಿದ್ದಾರೆ.ಇದನ್ನೂ ಓದಿ: ಮತ್ತೆ ಹಳೆಯ ವಿಜಯಲಕ್ಷ್ಮಿಯಾಗಿ ತೆರೆ ಮೇಲೆ ಬರ್ತೇನೆ: ನಾಗಮಂಡಲ ನಟಿ
- Advertisement
ನಾನು ಭಿಕ್ಷುಕಿನೆ. ಪಾಪ ಆ ಹುಡುಗ ಭಿಕ್ಷುಕಿ ಎತ್ತಿದ್ದಾನೆ ನಿಮಗಾಗಿ ಎಂದಿದ್ದೀರ. ಆದರೆ ನನಗೆ ಬಂದಿರುವ ದುಡ್ಡನ್ನು ಯಾಕೆ ಇನ್ನುವರೆಗೂ ಬಂದಿಲ್ಲ. ನನ್ನ ಹುಚ್ಚಿ ಮಾಡುತ್ತಿದ್ದೀರ. ಅಭಿಮಾನಿಗಳು ನೋಡುತ್ತಿದ್ದಾರೆ. ಕೃತಜ್ಞತೆ ಇಲ್ಲದವಳ ರೀತಿಯಲ್ಲಿ ನನ್ನನ್ನು ಬಿಂಬಿಸುತ್ತಿದ್ದಾರೆ. ಈ ವೀಡಿಯೋ ಮೂಲಕ ನಾನು ಆಣೆ ಮಾಡಿ ಹೇಳುತ್ತೇನೆ. ಯೋಗೇಶ್ ಖಾತೆಯಲ್ಲಿನ ಹಣ ನನ್ನ ಕೈಸೇರಿಲ್ಲ. ಅದನ್ನು ನಾನು ತೆಗೆದುಕೊಳ್ಳುವುದೂ ಇಲ್ಲ. ನನ್ನ ಹೆಸರು ಹೇಳಿಕೊಂಡು ಜನರಿಂದ ಅವರು ಸಂಗ್ರಹಿಸಿದ ಹಣ ನನಗೆ ಬೇಕಿಲ್ಲ. ನನ್ನ ಖಾತೆಗೆ ಎಷ್ಟೋ ದುಡ್ಡು ಬಂದಿದೆ. ಅದು ಸಾಕು. ನನಗೆ ನೆಮ್ಮದಿ ಬೇಕು. ಅಕ್ಕನನ್ನು ಕರೆದುಕೊಂಡು ನಾನು ಎಲ್ಲಾದರೂ ಹೊರಟು ಹೋಗುತ್ತೇನೆ. ನಾನು ಕಣ್ಣಿಗೆ ಕಾಣದ ರೀತಿಯಲ್ಲಿ ಇದ್ದುಕೊಂಡು ಹೋರಾಟ ಮಾಡುತ್ತೇನೆ. ನಾನು ಕರ್ನಾಟಕ ಬಿಟ್ಟು ಹೋಗುತ್ತೇನೆ ಎಂದು ಈ ಹಿಂದಿನ ವೀಡಿಯೋದಲ್ಲಿ ಹೇಳಿದ್ದೇ. ಆದರೆ ನಾನು ಎಲ್ಲಿಗೂ ಹೋಗುವುದಿಲ್ಲ. ಯಾರ ಕಣ್ಣಿಗೂ ಕಾಣದ ಒಂದು ಜಾಗದಲ್ಲಿ ಕುಳಿತು ಹೊರಾಟ ಮಾಡುತ್ತೇನೆ. ಎಲ್ಲರೂ ನನ್ನನ್ನೂ ಟಾರ್ಚರ್ ಮಾಡುತ್ತಿದ್ದೀರ, ನನ್ನ ಮರ್ಯಾದೆಯನ್ನು ಕಳೆಯುತ್ತಿದ್ದೀರ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ: ನಟಿ ವಿಜಯಲಕ್ಷ್ಮಿ
- Advertisement
ವಾಣಿಜ್ಯ ಮಂಡಳಿ ಕಡೆಯಿಂದ ಆತನ ವಿಷಯ ಬಂದಿದ್ದು. ಶುಕ್ರವಾರ (ಸೆ.1) ನಾನು ವಾಣಿಜ್ಯ ಮಂಡಳಿಗೆ ಹೋಗಿದ್ದೆನು. ದುಡ್ಡು ಕೊಡುವುದಾದರೆ ಅಂದೇ ಕೊಡಬಹುದಿತ್ತು. ಯಾಕೆ ಇನ್ನೂ ಕೊಟ್ಟಿಲ್ಲ? ಚೆನ್ನಾಗಿ ತಿಳಿದುಕೊಳ್ಳಿ. ಆ ದುಡ್ಡಿಗೋಸ್ಕರವೇ ನನಗೆ ಟಾರ್ಚರ್ ಮಾಡುತ್ತಿದ್ದಾರೆ ಎಂದು ಈ ಹಿಂದಿನ ವೀಡಿಯೋದಲ್ಲಿ ವಿಜಯಲಕ್ಷ್ಮಿ ಹೇಳಿದ್ದರು.
ವಿಜಯಲಕ್ಷ್ಮಿ ತಮಗೆ ಅಭಿಮಾನಿಗಳು ಹಾಕಿರುವ ಹಣ ಇನ್ನು ನನ್ನ ಕೈಗೆ ಬಂದಿ ಸೇರಿಲ್ಲ. ನನ್ನ ಕುರಿತಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಅನ್ಯಾಯವಾಗುತ್ತಿದೆ ಎಂದು ಕಣ್ಣೀರು ಹಾಕುತ್ತಾ ಸೋಶಿಯಲ್ ಮೀಡಿಯಾದಲ್ಲಿ ಹಲವು ವೀಡಿಯೋಗಳನ್ನು ಹರಿಬಿಟ್ಟಿದ್ದಾರೆ.