ಚಿತ್ರರಂಗದಲ್ಲಿ ಸೆಲೆಬ್ರಿಟಿಗಳ ಡಿವೋರ್ಸ್ (Divorce) ವಿಚಾರ ಭಾರೀ ಸದ್ದು ಮಾಡುತ್ತಿದೆ. ಸಮಂತಾ ಮತ್ತು ನಾಗಚೈತನ್ಯ, ಚಂದನ್ ಶೆಟ್ಟಿ ಮತ್ತು ನಿವೇದಿತಾ, ನತಾಶಾ ಮತ್ತು ಹಾರ್ದಿಕ್ ಪಾಂಡ್ಯ ಹೀಗೆ ಒಬ್ಬರ ಹಿಂದೆ ಒಬ್ಬರು ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿದ್ದಾರೆ. ಈ ಬೆನ್ನಲ್ಲೇ ನಟಿ ವರ್ಷಾ ಬೊಳ್ಳಮ್ಮ (Varsha Bollamma) ಡಿವೋರ್ಸ್ ಕುರಿತು ಶಾಕಿಂಗ್ ರಿಪ್ಲೈ ಕೊಟ್ಟಿದ್ದಾರೆ.
ಸೌತ್ ನಟಿ ವರ್ಷಾ ಬೊಳ್ಳಮ್ಮ ಇನ್ನೂ ಸಿಂಗಲ್ ಆದರೆ ಅವರು ಈಗ ಮದುವೆ ಮತ್ತು ಡಿವೋರ್ಸ್ ಕುರಿತು ನೀಡಿರುವ ಹೇಳಿಕೆ ಸಖತ್ ಸದ್ದು ಮಾಡುತ್ತಿದೆ. ದೀಪಿಕಾ ನಾರಾಯಣ್ ಭಾರದ್ವಾಜ್ ಎಂಬುವವರು ವರ್ಷಾಗೆ ಡಿವೋರ್ಸ್ ಕುರಿತು ಪ್ರಶ್ನೆ ಕೇಳಿದ್ದಾರೆ. ನಿಮ್ಮ ಪ್ರಕಾರ, ಡಿವೋರ್ಸ್‌ಗೆ ಕಾರಣವೇನು? ಎಂದು ಕೇಳಿದ್ದಕ್ಕೆ, ಮದುವೆಯೇ ವಿಚ್ಛೇದನಕ್ಕೆ ಪ್ರಮುಖ ಕಾರಣ ಎಂದು ನಟಿ ಉತ್ತರಿಸಿದ್ದಾರೆ.
ಈ ಬೆನ್ನಲ್ಲೇ, ನಟಿಗೆ ಮದುವೆ ಕುರಿತು ಆಸಕ್ತಿ ಇಲ್ಲ ಎಂದೆಲ್ಲಾ ಬಗೆ ಬಗೆಯ ಕಾಮೆಂಟ್‌ಗಳು ನೆಟ್ಟಿಗರಿಂದ ಹರಿದು ಬರುತ್ತಿವೆ. ಇನ್ನೂ ಕೆಲವರು ನೀವು ಮದುವೆ ಆಗಲ್ವಾ? ಎಂದು ಕೇಳಿದ್ದಾರೆ. ಇದನ್ನೂ ಓದಿ:ವಿನೋದ್ ಇಲ್ಲದೇ ಇರೋದು ಕಿರುತೆರೆಗೆ ದೊಡ್ಡ ನಷ್ಟ: ನಟ ಅಭಿಜಿತ್ ಭಾವುಕ
ಅಂದಹಾಗೆ, ವರ್ಷಾ ಬೊಳ್ಳಮ್ಮ ಮೂಲತಃ ಕೊಡಗಿನ ಬೆಡಗಿ ಕನ್ನಡ ಸಿನಿಮಾದಲ್ಲೂ ಅವರು ನಟಿಸಿದ್ದಾರೆ. ಆದರೆ ಸೌತ್ ಸಿನಿಮಾಗಳಿಂದ ಅವರಿಗೆ ಜನಪ್ರಿಯತೆ ಸಿಕ್ಕಿದೆ. ಬಿಜಿಲ್, 96 ಸಿನಿಮಾ, ಭೈರವ ಕೋಣ, ಸೆಲ್ಫಿ ಸೇರಿದಂತೆ ಹಲವು ಚಿತ್ರಗಳಲ್ಲಿ ವರ್ಷಾ ನಟಿಸಿದ್ದಾರೆ.