‘ಮಾಣಿಕ್ಯ’ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಅವರು ಸಿನಿಮಾಗಿಂತ ವೈಯಕ್ತಿಕ ಕಾರಣಗಳಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗೆ ಅದ್ಧೂರಿಯಾಗಿ ನಿಕೋಲಾಯ್ ಜೊತೆ ಎಂಗೇಜ್‌ಮೆಂಟ್ ಆಗಿತ್ತು. ಈ ಬೆನ್ನಲ್ಲೇ ನಟಿಯ ಭಾವಿ ಪತಿ ನೆಗೆಟಿವ್ ಆಗಿ ಟ್ರೋಲ್ ಕೂಡ ಆಗಿತ್ತು. ಈ ವಿಚಾರವಾಗಿ ನಟಿ ಪ್ರತಿಕ್ರಿಯೆ ನೀಡಿದ್ದಾರೆ.
ಡಿವೋರ್ಸ್ ಆಗಿರುವ ನಿಕೋಲಾಯ್ ಸಚ್‌ದೇವ್ (Nicholai Sachdev) ಜೊತೆ ವರಲಕ್ಷ್ಮಿ 2ನೇ ಮದುವೆ ಆಗಲು ಸಜ್ಜಾಗಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ನಟಿ ಮಾತನಾಡಿದ್ದಾರೆ. ನನ್ನ ತಂದೆ (Sarathkumar) ಕೂಡ 2ನೇ ಮದುವೆ ಆದರು. ಅದರಲ್ಲಿ ಯಾವ ತಪ್ಪು ಇಲ್ಲ. ನನ್ನ ಕಣ್ಣಿಗೆ ನಿಕ್ ಅವರು ಹ್ಯಾಂಡ್ಸಮ್ ಆಗಿದ್ದಾರೆ. ನಮ್ಮ ಸಂಬಂಧದ ಬಗ್ಗೆ ನೆಗೆಟಿವ್ ಆಗಿ ಮಾತನಾಡುವವರ ಬಗ್ಗೆ ನಾನು ಎಂದೂ ಕೇರ್ ಮಾಡುವುದಿಲ್ಲ ಹೇಳಿದ್ದಾರೆ. ಇದನ್ನೂ ಓದಿ:ಕಾಮಾಕ್ಯ ದೇವಿಯ ದರ್ಶನ ಪಡೆದ ‘ಗಾಳಿಪಟ 2’ ನಟಿ
View this post on Instagram
ಬೇರೆಯವರಿಗೆ ನಾನು ಯಾಕೆ ಉತ್ತರ ಕೊಡಬೇಕು. ನಿಕ್ ತಂದೆ-ತಾಯಿ ಒಂದು ಆರ್ಟ್ ಗ್ಯಾಲರಿ ನಡೆಸುತ್ತಾರೆ. ನಿಕ್ ಮತ್ತು ಅವರ ಪುತ್ರಿ ಪವರ್ ಲಿಫ್ಟಿಂಗ್‌ನಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ. ಅವರ ಮಾಜಿ ಪತ್ನಿ ಜೊತೆಗೂ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ. ನಮ್ಮ ನಡುವೆ ಎಲ್ಲವೂ ಚೆನ್ನಾಗಿದೆ ಎಂದಿದ್ದಾರೆ.
ಅಂದಹಾಗೆ, ‘ಮಾಣಿಕ್ಯ’ ಸಿನಿಮಾದ ಬಳಿಕ ಮತ್ತೆ ವರಲಕ್ಷ್ಮಿ ಸುದೀಪ್ ಜೊತೆ ಕೈಜೋಡಿಸಿದ್ದಾರೆ. ಮಾಕ್ಸ್ ಸಿನಿಮಾದಲ್ಲಿ ಅವರು ನಟಿಸಿದ್ದಾರೆ.