‘ಬಿಗ್ ಬಾಸ್’ (Bigg Boss) ಖ್ಯಾತಿಯ ವನಿತಾ ವಿಜಯ್‌ಕುಮಾರ್ ಸಿನಿಮಾಗಿಂತ ವೈಯಕ್ತಿಕ ಜೀವನದ ವಿಷ್ಯವಾಗಿ ಹೆಚ್ಚು ಸುದ್ದಿಯಾಗುತ್ತಲೇ ಇರುತ್ತಾರೆ. ಈಗಾಗಲೇ 3 ಬಾರಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವ ನಟಿ 4ನೇ ಬಾರಿ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ತೆಲುಗಿನಲ್ಲಿ ಬಿಗ್ ಚಾನ್ಸ್- ಪ್ರಭಾಸ್‌ಗೆ ಮೃಣಾಲ್ ಠಾಕೂರ್ ಜೋಡಿ
Advertisement
ತಮಿಳು ನಟಿ ವನಿತಾ ವಿಜಯ್‌ಕುಮಾರ್ ಅವರದ್ದು ಕಲಾವಿದರ ಕುಟುಂಬ. ಸಿನಿಮಾಗಳ ಮೂಲಕ ಖ್ಯಾತಿ ಪಡೆದಿರೋದಕ್ಕಿಂತ ವಿವಾದಗಳ ಮೂಲಕ ಸದ್ದು ಮಾಡಿದ್ದೇ ಜಾಸ್ತಿ. ಮತ್ತೆ ಈಗ 4ನೇ ಬಾರಿ ವೈವಾಹಿಕ ಬದುಕಿಗೆ ಕಾಲಿಡಲು ರೆಡಿಯಾಗಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ವರ ಯಾರು? ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.
Advertisement
ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ನಟಿ ರಿಯಾಕ್ಟ್ ಮಾಡಿದ್ದಾರೆ. ಮದುವೆ ಬಗ್ಗೆ ಅಭಿಮಾನಿಯೊಬ್ಬ ಕೇಳಲಾದ ಪ್ರಶ್ನೆಗೆ ‘ಒಂದು ಅನಿರೀಕ್ಷಿತ ತಿರುವಿಗಾಗಿ ಕಾಯಿರಿ’ ಎಂದು ವನಿತಾ ಉತ್ತರಿಸಿದ್ದಾರೆ. ಇದು ಮದುವೆ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಹಾಗಾದ್ರೆ ನಟಿ ಸದ್ಯದಲ್ಲೇ ಗುಡ್ ನ್ಯೂಸ್ ಕೊಡುತ್ತಾರಾ? ಕಾಯಬೇಕಿದೆ.
Advertisement
ಅಂದಹಾಗೆ, ವನಿತಾ ಅವರು 2000ರಲ್ಲಿ ಆಕಾಶ್ ಎಂಬುವವರ ಜೊತೆಗೆ ದಾಂಪತ್ಯ ಬದುಕಿಗೆ ಕಾಲಿಟ್ಟರು. ಆದರೆ 2005ರಲ್ಲಿ ಡಿವೋರ್ಸ್ ಪಡೆದು ಆಕಾಶ್ ಅವರಿಂದ ದೂರವಾದರು. ನಂತರ 2007ರಲ್ಲಿ ಉದ್ಯಮಿ ರಂಜನ್ ಆನಂದ್ ಎಂಬುವವರ ಜೊತೆಗೆ ವನಿತಾ ಎರಡನೇ ಮದುವೆಯಾದರು. ಆದರೆ 2012ರಲ್ಲಿ ಅವರೊಂದಿಗೂ ಹೊಂದಾಣಿಕೆ ಕೊರತೆಯಿಂದ ದಾಂಪತ್ಯಕ್ಕೆ ಕೊನೆ ಹಾಡಿದರು. ಬಳಿಕ 2020ರಲ್ಲಿ ಫೋಟೋಗ್ರಾಫರ್ ಪೀಟರ್ ಪೌಲ್ ಜೊತೆಗಿನ ಮದುವೆ ಕೂಡ ಮುರಿದುಬಿತ್ತು.