`ಹಿಟ್ಲರ್ ಕಲ್ಯಾಣ’ ಸೀರಿಯಲ್‌ ಅಭಿನಯಾ ಜಾಗಕ್ಕೆ ಎಂಟ್ರಿ ಕೊಟ್ಟ ನಟಿ ಇವರೇ

Public TV
1 Min Read
abhinaya

ಸ್ಯಾಂಡಲ್‌ವುಡ್ (Sandalwood) ನಟಿ ಅಭಿನಯಾಗೆ (Abhinaya) ವರದಕ್ಷಿಣೆ ಕಿರುಕುಳ ವಿಚಾರದಲ್ಲಿ 2 ವರ್ಷ ಜೈಲು ಶಿಕ್ಷೆ, ಮತ್ತು ನಟಿಯ ತಾಯಿಗೆ 5 ವರ್ಷ ಜೈಲು ಶಿಕ್ಷೆ ನೀಡಿ ಹೈಕೋರ್ಟ್ ಏಕಸದಸ್ಯ ಪೀಠ ಇತ್ತೀಚೆಗೆ ತೀರ್ಪು ನೀಡಿತ್ತು. ಈ ಬೆನ್ನಲ್ಲೇ ʻಹಿಟ್ಲರ್ ಕಲ್ಯಾಣʼ (Hitler Kalyana) ಸೀರಿಯಲ್‌ನ ಕೌಸಲ್ಯ ಪಾತ್ರದಿಂದ ಅಭಿನಯಾ ಔಟ್ ಆಗಿದ್ದಾರೆ. ಅವರ ಪಾತ್ರಕ್ಕೆ ಬೇರೆ ನಟಿಯ ಎಂಟ್ರಿಯಾಗಿದೆ.

abhinaya 1

ಅಣ್ಣನ ಪತ್ನಿ ಲಕ್ಷ್ಮಿದೇವಿಗೆ (Lakshmidevi) ವರದಕ್ಷಿಣೆ ಕಿರುಕುಳ ನೀಡಿದ್ದಕ್ಕಾಗಿ ನಟಿ ಅಭಿನಯಾಗೆ ಶಿಕ್ಷೆ ಪ್ರಕಟವಾಗಿದೆ. ಇದಾದ ಕೆಲವೇ ದಿನಗಳಲ್ಲಿ ಸೂಪರ್ ಹಿಟ್ `ಹಿಟ್ಲರ್ ಕಲ್ಯಾಣ’ ಸೀರಿಯಲ್‌ನಿಂದ ನಟಿ ಔಟ್ ಆಗಿದ್ದಾರೆ. ಎಡವಟ್ಟು ಲೀಲಾಳ ಮಲತಾಯಿ ಪಾತ್ರಕ್ಕೆ ಜೀವತುಂಬಿದ್ದ ಅಭಿನಯಾ ಈಗ ಈ ಸೀರಿಯಲ್ ಗುಡ್ ಬೈ ಹೇಳಿದ್ದಾರೆ. ಅಭಿನಯಾ ನಟಿಸುತ್ತಿದ್ದ ಪಾತ್ರಕ್ಕೆ ನಟಿ ವಾಣಿಶ್ರೀ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಬೀಚ್ ಫೋಟೋ: ದೇವರಕೊಂಡ ಕ್ಲಿಕ್ಕಿಸಿದ್ದಾ ಎಂದ ನೆಟ್ಟಿಗರು

vanishree

ಸಿನಿಮಾರಂಗದಲ್ಲಿ 25 ವರ್ಷಗಳನ್ನ ಪೂರೈಸಿರುವ ವಾಣಿಶ್ರೀ 300ಕ್ಕೂ ಅಧಿಕ ಸೀರಿಯಲ್, 90ಕ್ಕೂ ಹೆಚ್ಚು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಇದೀಗ ಅಭಿನಯಾ ಜಾಗಕ್ಕೆ ವಾಣಿಶ್ರೀ (Vanishree) ಎಂಟ್ರಿ ಕೊಟ್ಟಿದ್ದಾರೆ.

abhinaya 2

1998ರಲ್ಲಿ ಸಹೋದರ ಶ್ರೀನಿವಾಸ್ ಜೊತೆ ಲಕ್ಷ್ಮಿದೇವಿ ಅವರ ವಿವಾಹವಾಗಿತ್ತು. ಮದುವೆ ಸಂದರ್ಭದಲ್ಲಿ ವರದಕ್ಷಿಣೆಯನ್ನ ಅಭಿನಯಾ ಕುಟುಂಬದವರು ಪಡೆದಿದ್ದರು. ಬಳಿಕ ಮತ್ತೆ ವರದಕ್ಷಿಣೆ ತಂದು ಕೊಡುವಂತೆ ಪೀಡಿಸಿದ್ದರು. ಬಳಿಕ ಈ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಏಕಸದಸ್ಯ ಪೀಠ ಅಭಿನಯಾಗೆ 2 ವರ್ಷ, ಅವರ ತಾಯಿಗೆ 5 ವರ್ಷ ಶಿಕ್ಷೆ ಪ್ರಕಟ ಮಾಡಿತ್ತು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *