ಐರಾವತ ನಟಿ ಊರ್ವಶಿ ರೌಟೇಲಾ (Urvashi Rautela) ಗರಂ ಆಗಿದ್ದಾರೆ. ಐಶ್ವರ್ಯಾ ರೈ (Aishwarya Rai) ಜೊತೆ ಹೋಲಿಸಿ ಟ್ರೋಲ್ ಮಾಡಿದ್ದಕ್ಕೆ ನಾನು ಯಾರ ಕಾಪಿನೂ ಅಲ್ಲ ಅಂತ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ತಮಿಳಿನಿಂದ ಕನ್ನಡ ಎಂದ ಕಮಲ್ ಹಾಸನ್‌ಗೆ ಸಂಕಷ್ಟ- ಕ್ಷಮೆಯಾಚಿಸುವಂತೆ ಆಗ್ರಹ
ಕಾನ್ ಚಿತ್ರೋತ್ಸವದಲ್ಲಿ (Cannes 2025) ಊರ್ವಶಿ ಲುಕ್ ಅನ್ನು ಐಶ್ವರ್ಯಾ ರೈಯೊಂದಿಗೆ ಹೋಲಿಸಿ ಕೆಲ ಸುದ್ದಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿದೆ. ಜೀರೋ ವರ್ಚಸ್ಸಿನೊಂದಿಗೆ ಐಶ್ವರ್ಯಾ ರೈ ಆಗಲು ಪ್ರಯತ್ನಿಸುತ್ತಿದ್ದಾರೆ ಎಂದವರಿಗೆ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ, ಐಶ್ವಯಾ ರೈ ಐನಾನಿಕ್. ನಾನು ಅವರ ಕಾಪಿ ಆಗಲು ಬಂದಿಲ್ಲ. ನಾನೇ ಬ್ಲೂಪ್ರಿಂಟ್. ಕಾನ್ ಚಿತ್ರೋತ್ಸವದಲ್ಲಿ ನನ್ನನ್ನು ಎಲ್ಲರೊಂದಿಗೆ ಬೆರೆಯಲು ಆಹ್ವಾನಿಸಲಿಲ್ಲ. ನಾನು ಎಲ್ಲರಂತೆ ಎದ್ದು ಕಾಣಲು ಬಂದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘ಕೂಲಿ’ ಮಾಡಿದ ತಲೈವಾಗೆ 150 ಕೋಟಿ, ನಿರ್ದೇಶಕನಿಗೆ 20 ಕೋಟಿ!
ನಾನು ಎಲ್ಲರಿಗೂ ಸಿಗುವವಳಲ್ಲ. ನಾನು ಪಟಾಕಿಯೊಂದಿಗಿರುವ ಶಾಂಪೇನ್‌ನಂತೆ. ನೀವು ವರ್ಚಸ್ಸು ಅಳೆಯಲು ಸಾಧ್ಯವಾದರೆ, ನಾನು ಅದರ ಮಾಪಕವನ್ನು ಮುರಿಯಬಲ್ಲೆ ಎಂದಿದ್ದಾರೆ. ಸದ್ಯ ನಟಿಯ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಊರ್ವಶಿ ರೌಟೇಲಾ ಅವರು ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಹುಭಾಷೆಗಳಲ್ಲಿ ನಟಿಗೆ ಭಾರೀ ಬೇಡಿಕೆಯಿದೆ.