ಊರ್ವಶಿ ರೌಟೇಲಾ ತೊಟ್ಟ ಬಟ್ಟೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ.!

Public TV
1 Min Read
urvashi

ದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ‘ಐರಾವತ’ ಬೆಡಗಿ ಊರ್ವಶಿ ರೌಟೇಲಾ (Urvashi Rautela) ಅವರು ಇದೀಗ ದುಬಾರಿ ಡ್ರೆಸ್ ಧರಿಸಿರುವ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಊರ್ವಶಿ ತೊಟ್ಟ ಬಟ್ಟೆಯ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತಿರಾ.

ಕನ್ನಡದ ‌’ಐರಾವತ’ ನಟಿ ಊರ್ವಶಿ ರೌಟೇಲಾ ಅವರು ಇತ್ತೀಚಿಗೆ ಅವಾರ್ಡ್ ಫಂಕ್ಷನ್‌ವೊಂದರಲ್ಲಿ ಭಾಗವಹಿಸಿದ್ದರು. ದುಬಾರಿ ಬೆಲೆಯ ಗೋಲ್ಡನ್ ಕಲರ್ ಡ್ರೆಸ್‌ನಲ್ಲಿ ಊರ್ವಶಿ ರಾಯಲ್ ಆಗಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಫ್ಯಾಷನ್ ಈವೆಂಟ್‌ನಲ್ಲಿ ಡಿಸೈನರ್ ಮೋನಿಶಾ ಜೈಸಿಂಗ್ ಅವರ ಸ್ಪೆಷಲ್ ಕಲೆಕ್ಷನ್‌ನಲ್ಲಿ ಈ ಉಡುಪನ್ನು ನಟಿ ಆಯ್ಕೆ ಮಾಡಿದ್ದಾರೆ.

ಊರ್ವಶಿ ರೌಟೇಲಾ ಚಿನ್ನದಂತೆ ಹೊಳೆಯುತ್ತಿರುವ ಈ ಉಡುಪಿನಲ್ಲಿ ಮಿಂಚಿದ್ದಾರೆ. ಬೀಜ್ ಧೋತಿ ಶೈಲಿಯ ಸ್ಕರ್ಟ್ ನೋಡಲು ಆಕರ್ಷಕವಾಗಿ ಊರ್ವಶಿ ಕಾಣಿಸಿಕೊಂಡಿದ್ದಾರೆ. ಈ ಡ್ರೆಸ್ ತೊಟ್ಟು ನಟಿ ಎಲ್ಲರನ್ನು ಬೆರಗುಗೊಳಿಸಿದ್ದಾರೆ.

ಊರ್ವಶಿ ರೌಟೇಲಾ ಧರಿಸಿದ್ದ ಈ ಗೋಲ್ಡ್ ಕಲರ್ ಡ್ರೆಸ್ ಬೆಲೆ ನಿಜಕ್ಕೂ ದುಬಾರಿಯಾಗಿದೆ. ಮೂಲಗಳ ಪ್ರಕಾರ, ಊರ್ವಶಿ ರೌಟೇಲಾ ಅವರ ಐಷಾರಾಮಿ ಗೋಲ್ಡನ್ ಡ್ರೆಸ್ ಬೆಲೆ 30 ಲಕ್ಷ ಎಂದು ಹೇಳಲಾಗುತ್ತಿದೆ. ಈ ಉಡುಪಿನ ಅಸಲಿ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.

Share This Article