ಜಗತ್ತಿನಾದ್ಯಂತ ಈಗ ಹಿಜಬ್ (Hijab) ವಿರೋಧದದ್ದೇ ಸದ್ದು. ಅದರಲ್ಲೂ ಇರಾನ್ ಮಹಿಳೆಯರು ಹಿಜಬ್ ವಿರೋಧಿಸಿ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಇರಾನ್ ಮಹಿಳೆಯರ ಈ ಹೋರಾಟಕ್ಕೆ ವಿಶ್ವದ ನಾನಾ ಕಡೆಯ ಮಹಿಳೆಯರು ಕೂಡ ತಮ್ಮದೇ ಆದ ರೀತಿಯಲ್ಲಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಕೂಡ ವಿಭಿನ್ನ ರೀತಿಯಲ್ಲೇ ಆ ಮಹಿಳೆಯರ ಪರ ನಿಂತಿದ್ದಾರೆ.
Advertisement
ಹಿಜಬ್ ವಿರುದ್ಧದ ಹೋರಾಟ ಇರಾನ್ ನಲ್ಲಿ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಮಹಿಳೆಯರಿಗೆ ಸ್ವತಂತ್ರವಾಗಿ ಬದುಕಲು ಬಿಡಿ, ಹಿಜಬ್ ನಾವು ಧರಿಸುವುದಿಲ್ಲ. ನಮ್ಮ ಬಟ್ಟೆ ನಮ್ಮ ಹಕ್ಕು ಎನ್ನುತ್ತಾ ಸತತ ಒಂದು ತಿಂಗಳಿಂದ ಇರಾನ್ ಮಹಿಳೆಯರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಈ ಬೆಳವಣಿಗೆಯ ಕುರಿತು ಬಾಲಿವುಡ್ ನಟ ಊರ್ವಶಿ ಕೂಡ ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ
Advertisement
Advertisement
ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬೆರೆದುಕೊಂಡಿದ್ದು, ‘ಹಿಜಬ್ ಕುರಿತಾಗಿ ಹಲವು ಹತ್ಯೆಗಳು ನಡೆದಿವು. ಮಹ್ಸಾ ಅಮಿನಿ ಹತ್ಯೆಯ ನಂತರ ಹಿಜಬ್ ವಿರುದ್ಧದ ಹೋರಾಟ ಶುರುವಾಯಿತು. ಅಲ್ಲದೇ, ಅನೇಕರಿಗೆ ತೊಂದರೆ ನೀಡಿದರು. ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಹಿಜಬ್ ವಿರೋಧಿಸುವೆ. ಮಹಿಳೆಯರು ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಯಾರೂ ಹೇಳಬೇಕಿಲ್ಲ. ತಮಗಿಷ್ಟ ಬಂದಂತೆ ಅವರನ್ನು ಬದುಕಲು ಬಿಡಿ’ ಎಂದು ಊರ್ವಶಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
Advertisement
ಕೂದಲು (Hair) ಮಹಿಳೆಯರಿಗೆ ಸೌಂದರ್ಯದ ಸಂಕೇತ. ಹಾಗಾಗಿ ಅದನ್ನೇ ಬಳಸಿಕೊಂಡು ಆ ಹೋರಾಟಕ್ಕೆ ಬೆಂಬಲ ಸೂಚಿಸಿದ್ದೇನೆ ಎಂದೂ ಬರೆದುಕೊಂಡಿರುವ ಊರ್ವಶಿ, ಇರಾನ್ ನಲ್ಲಿ ಹೋರಾಟ ಮಾಡುತ್ತಿರುವ ಮಹಿಳೆಯರಿಗೆ ಜಯ ಸಿಗಲಿ ಎಂದು ಹಾರೈಸಿದ್ದಾರೆ. ಇಂತಹ ವಿಷಯಗಳಿಗೆ ಜಗತ್ತಿನ ಹೆಣ್ಣು ಮಕ್ಕಳು ಒಂದಾಗಬೇಕು ಎಂದೂ ಅವರು ಕರೆ ನೀಡಿದ್ದಾರೆ. ಊರ್ವಶಿಯ ನಡೆಗೆ ಕೆಲವರು ಬೆಂಬಲ ಸೂಚಿಸಿದ್ದರೆ, ಇನ್ನೂ ಕೆಲವರು ಕಾಲೆಳೆದಿದ್ದಾರೆ.