ಬಿಗ್ ಬಾಸ್ ಬೆಡಗಿ(Bigg Boss) ಉರ್ಫಿ ಜಾವೇದ್ (Urfi Javed) ಇದೀಗ ಬಿಗ್ ಸ್ಕ್ರೀನ್‌ಗೆ ಎಂಟ್ರಿ ಕೊಡ್ತಿದ್ದಾರೆ. ಸದಾ ಚಿತ್ರ- ವಿಚಿತ್ರ ಫ್ಯಾಷನ್‌ಗಳ ಮೂಲಕ ಸುದ್ದಿಯಾಗ್ತಿದ್ದ ನಟಿ ಉರ್ಫಿ ಇದೀಗ ನಾಯಕಿಯಾಗಿ ಬೆಳ್ಳಿಪರದೆಯ ಮೇಲೆ ರೊಮ್ಯಾನ್ಸ್ ಮಾಡೋಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ನೆಲದ ಘಮಲಿನ ಕಥೆಯೊಂದಿಗೆ ‘ಕೆರೆಬೇಟೆ’ಗಿಳಿದ ಡೈರೆಕ್ಟರ್ ರಾಜ್ ಗುರು
ಬಾಲಿವುಡ್ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಅವರು ‘ಲವ್ ಸೆಕ್ಸ್ ಔರ್ ಧೋಕಾ’ ಸೀಕ್ವೆಲ್‌ಗೆ (Love Sex Aur Dhokha 2) ಉರ್ಫಿ ಜಾವೇದ್ ನಾಯಕಿಯಾಗಿದ್ದಾರೆ. ಇಂದಿನ ಪೀಳಿಗೆಯ ಅನುಭವಗಳ ಮೇಲೆ ಈ ಸಿನಿಮಾದ ಕಥೆ ಆಧರಿಸಿದೆಯಂತೆ. ಕಥೆಯು ಸೋಷಿಯಲ್ ಮೀಡಿಯಾ ಮೇಲಿನ ಪ್ರೀತಿ ಆಧರಿಸಿದೆಯಂತೆ.
ಈ ಚಿತ್ರಕ್ಕೆ ಉರ್ಫಿನೇ ಸೂಕ್ತ ನಟಿ ಎಂದು ಚಿತ್ರತಂಡ ಆಯ್ಕೆ ಮಾಡಿದೆ. ಈ ಚಿತ್ರಕ್ಕೆ ದಿಬಾಕರ್ ಬ್ಯಾನರ್ಜಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೇ ಏಪ್ರಿಲ್ 19ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾದಲ್ಲಿನ ನಟನೆ, ಹಾಟ್ ಅವತಾರ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಸದಾ ವಿಚಿತ್ರ ಡ್ರೆಸ್ ಮತ್ತು ಟ್ರೋಲ್, ಕಾಂಟ್ರವರ್ಸಿಯಿಂದ ಸದ್ದು ಮಾಡ್ತಿದ್ದ ನಟಿ ಈಗ ಸಿನಿಮಾದಲ್ಲಿ ಕಾಣಿಸಿಕೊಳ್ತಾರೆ ಎಂದು ತಿಳಿದ ಮೇಲೆ ಪಡ್ಡೆಹುಡುಗರು ಖುಷಿಯಾಗಿದ್ದಾರೆ. ‘ಲವ್ ಸೆಕ್ಸ್ ಔರ್ ಧೋಕಾ’ 2 ಸಿನಿಮಾ ಉರ್ಫಿ ಕೈ ಹಿಡಿಯುತ್ತಾ? ಕಾಯಬೇಕಿದೆ.
ಉರ್ಫಿ ಜಾವೇದ್ ಅವರು ‘ಬೇಪನ್ಹಾ’, ‘ಡಿಯಾನ್’, ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’, `ಬಡೆ ಭಯ್ಯಾ’, ‘ಐ ಮೇರೆ ಹಮ್ಸಾಫರ್’, ‘ಚಂದ್ರ ನಂದಿನಿ’ ಮತ್ತು ‘ಮೇರಿ ದುರ್ಗಾ’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ನಟನೆಯೇನು ಹೊಸದಲ್ಲ.