ಶಿವನ ದೇಗುಲದಲ್ಲಿ ಮಂಡಿಯೂರಿ 108 ಮೆಟ್ಟಿಲು ಹತ್ತಿದ ಉರ್ಫಿ

Public TV
1 Min Read
urfi javed

‘ಬಿಗ್ ಬಾಸ್’ ಬೆಡಗಿ (Bigg Boss) ಉರ್ಫಿ ಜಾವೇದ್ (Urfi Javed) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಶಿವನ ದೇಗುಲದಲ್ಲಿ ಮಂಡಿಯೂರಿ 108 ಮೆಟ್ಟಿಲು ಹತ್ತುತ್ತಿರುವ ವಿಡಿಯೋವೊಂದನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಉಗ್ರರ ಬಗ್ಗೆ ಕರುಣೆ ಹೊಂದಿದ್ದರೆ ನೀವು ಕೂಡ ಭಯೋತ್ಪಾದಕರೇ: ಧ್ರುವ ಸರ್ಜಾ ಹೇಳಿದ್ಯಾರಿಗೆ?

Urfi Javed

ಮುಂಬೈನ ಪ್ರಸಿದ್ಧ ದೇವಸ್ಥಾನ ಬಾಬುಲನಾಥ ದೇಗುಲಕ್ಕೆ ನಟಿ ಭೇಟಿ ನೀಡಿದ್ದಾರೆ. ಈ ವೇಳೆ, ಮುಖಕ್ಕೆ ದುಪ್ಪಟ್ಟಾ ಸುತ್ತಿಕೊಂಡು ಮಂಡಿಯೂರಿ 108 ಮೆಟ್ಟಿಲು ಹತ್ತಿದ್ದಾರೆ. ಇದರ ವಿಡಿಯೋವನ್ನು ನಟಿ ಶೇರ್ ಮಾಡಿ, ‘ಮಂಡಿಯೂರಿಯೇ ಹತ್ತಿ ಬಾಬುಲನಾಥ ದೇಗುಲಕ್ಕೆ ತಲುಪಿದೆ. ಆದರೆ ಒಂದೇ ಒಂದು ಸಮಸ್ಯೆಯಿತ್ತು. ಅದು ನನ್ನ ದುಪ್ಪಟ್ಟಾ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಉಗ್ರರ ಬಗ್ಗೆ ಕರುಣೆ ಹೊಂದಿದ್ದರೆ ನೀವು ಕೂಡ ಭಯೋತ್ಪಾದಕರೇ: ಧ್ರುವ ಸರ್ಜಾ ಹೇಳಿದ್ಯಾರಿಗೆ?

urfi

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಉರ್ಫಿ ಮತ್ತಷ್ಟು ಟ್ರೋಲ್ ಆಗಿದ್ದಾರೆ. ಪ್ರಚಾರಕ್ಕಾಗಿ ಹೀಗೆಲ್ಲಾ ಮಾಡಬೇಡಿ ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಜೀನ್ಸ್ ಮತ್ತು ಟಾಪ್‌ನಲ್ಲಿ ಬಂದಿದ್ದ ನಟಿಗೆ ನಿಮ್ಮ ನಂಬಿಕೆ ನಿಜವಾಗಿದ್ದರೆ ಸೂಕ್ತ ಉಡುಪು ಧರಿಸಬೇಕು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Share This Article