ಬೆಂಗಳೂರು: ಒಬ್ಬ ಕಲಾವಿದೆಯಾಗಿದ್ದ ನಾನು ರಾಜಕೀಯ ಪ್ರವೇಶ ಪಡೆದ ನಂತರ ನನಗೆ ಗಣ್ಯ ರಾಜಕೀಯ ವ್ಯಕ್ತಿಗಳ ಹಿಂದಿನ ಶ್ರಮ ಅರಿವಾಯಿತು. ಇತ್ತೀಚೆಗೆ ಅನಂತ್ ಕುಮಾರ್ ಅವರ ಆತ್ಮಕಥೆಯ ಪುಸ್ತಕವನ್ನು ಅವರಿಂದಲೇ ಪಡೆದಿದ್ದೆ. ಅಲ್ಲದೇ ಅಣ್ಣ ಎಂಬ ಮಾತಿಗೆ ಅನಂತ್ ಕುಮಾರ್ ಅನ್ವರ್ಥರಾಗಿದ್ದರು ಎಂದು ಮಾಜಿ ವಿಧಾನಪರಿಷತ್ ಸದಸ್ಯೆ, ನಟಿ ತಾರಾ ಅವರು ಹೇಳಿದ್ದಾರೆ.
ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಅಂತಿಮ ದರ್ಶನ ಪಡೆದ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ತಾರಾ ಅವರು ಅನಂತ್ ಕುಮಾರ್ ಅವರ ಬಗೆಗಿನ ನೆನಪುಗಳನ್ನು ಬಿಚ್ಚಿಟ್ಟರು. ಕಳೆದ 6 ತಿಂಗಳ ಹಿಂದೆಯಷ್ಟೇ ಅನಂತ್ ಕುಮಾರ್ ಅವರ ಮನೆಗೆ ಭೇಟಿ ನೀಡಿದ್ದೆ. ಅವರೇ ತಮ್ಮ ಆತ್ಮಕಥೆಯ ಪುಸ್ತಕವನ್ನು ನನಗೆ ನೀಡಿ ಓದು ಎಂದು ತಿಳಿಸಿದರು. ಅವರ ಪುಸ್ತಕ ಓದಿದ ಬಳಿಕ ನನಗೆ ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಾಯಿತು ಎಂದರು.
Advertisement
Advertisement
ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ ಹೆಗ್ಗಳಿಕೆಯಲ್ಲಿ ಅವರ ಪಾಲು ದೊಡ್ಡದು. ರಾಜಕೀಯ ಹೊರತು ಪಡಿಸಿ ಅವರ ಮನಸ್ಸು ಸೂಕ್ಷ್ಮವಾಗಿತ್ತು. ಯಾರನ್ನಾದರು ನೋಡಿದರೆ ಮನಸ್ಸಿನಿಂದ ನಗು ತೋರುತ್ತಿದ್ದರು. ದೆಹಲಿಗೆ ಹೋಗಿದ್ದ ವೇಳೆ ಕರೆ ಮಾಡಿದರೆ ತಾರಾ ಜೀ ಎಂದು ಕರೆಯುತ್ತಿದ್ದರು. ಆಗ ನನಗೆ ಅವರು ದೆಹಲಿಯಲಿದ್ದಾರೆ ಎಂದು ತಿಳಿಯುತ್ತಿತ್ತು. ಕರ್ನಾಟಕದಲ್ಲಿ ಇರುವ ವೇಳೆ ತಾರಾಮ್ಮ ಎಂದು ಕರೆಯುತ್ತಿದ್ದಾಗಿ ತಿಳಿಸಿದರು.
Advertisement
ಅಣ್ಣ ಎಂಬ ಮಾತಿಗೆ ಅನಂತ್ ಕುಮಾರ್ ಅವರು ಅನ್ವರ್ಥರಾಗಿದ್ದರು. ಅವರನ್ನು ಕೊನೆ ಬಾರಿಗೆ ನೋಡಿದ್ದು, ಸಾವಿತ್ರಿ ಬಾಯಿ ಪುಲೆ ಅವರ ಸಿನಿಮಾ ಟ್ರೇಲರ್ ಬಿಡುಗಡೆಯ ವೇಳೆ ನಾನು ದೆಹಲಿಗೆ ತೆರಳಿದ್ದೆ. ಆಗ ಅವರು ನಮ್ಮೊಂದಿಗೆ ಹೆಚ್ಚು ಸಮಯ ಇದ್ದರು. ಪಕ್ಷದ ಕಾರ್ಯದಲ್ಲಿ ನಮಗೇ ಮುಂದೇ ಇರುವಂತೆ ಮಾಡುತ್ತಿದ್ದರು. ಅವರ ಈ ಅನಿರೀಕ್ಷತ ಸಾವು ನಮಗೇ ಹೆಚ್ಚಿನ ನೋವು. ಹೆಬ್ಬೆಟ್ಟು ರಾಮಕ್ಕ ಸಿನಿಮಾ ಸಿಡಿ ನೀಡುವಂತೆ ಇಂಗ್ಲೆಂಡ್‍ಗೆ ತೆರಳುವ ಮುನ್ನ ಮನವಿ ಮಾಡಿದ್ದರು. ಆದರೆ ನಾನು ಸಿಡಿ ನೀಡಲು ಸಾಧ್ಯವಾಗಿರಲಿಲ್ಲ. ನನ್ನ ಅಣ್ಣ ಕಳೆದುಕೊಂಡ ನೋವು ಆಗುತ್ತಿದೆ ಎಂದು ಭಾವುಕರಾದರು.
Advertisement
https://www.youtube.com/watch?v=tqWFvDrVIAs
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews