ಬೆಂಗಳೂರು: ಮೈಸೂರ್ ಸ್ಯಾಂಡಲ್ ಸೋಪ್ (Mysore Sandal Soap) ರಾಯಭಾರಿಯಾಗಿ ಬಹುಭಾಷಾ ನಟಿಗೆ ಸರ್ಕಾರ ಮಣೆ ಹಾಕಿದೆ. ಕರ್ನಾಟಕ ಸೋಪ್ಸ್ ಆಂಡ್ ಡಿಟರ್ಜೆಂಟ್ ಲಿಮಿಟೆಡ್ ಅಧಿಕೃತ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾರನ್ನ (Tamanna Bhatia) ನೇಮಕ ಮಾಡಿ ಸರ್ಕಾರ ಆದೇಶಿಸಿದೆ. 6.20 ಕೋಟಿ ರೂ.ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ನಡೆಗೆ ಕನ್ನಡ ಚಿತ್ರರಂಗದ ಕಲಾವಿದರೂ ಬೇಸರ ಹೊರಹಾಕಿದ್ದಾರೆ.
ಈ ಕುರಿತು ʻಪಬ್ಲಿಕ್ ಟಿವಿʼ (Public TV) ಜೊತೆಗೆ ಮಾತನಾಡಿರುವ ನಟಿ ತಾರಾ ಅನುರಾಧ, ನಮ್ಮಲ್ಲಿ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅಂತಹವರು ನಂದಿನಿ ಬ್ರ್ಯಾಂಡ್‌ಗೆ ಒಂದು ರೂಪಾಯಿ ಪಡೆಯದೇ ಜಾಹೀರಾತು ಮಾಡಿಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಅದು ಖ್ಯಾತಿಯಾಗಿತ್ತು. ಇತ್ತೀಚೆಗೆ ಡಾಲಿ ಧನಂಜಯ್ ಅವರೂ ಒಂದು ರೂಪಾಯಿ ಪಡೆಯದೇ ಜಾಹೀರಾತು ಮಾಡಿದ್ರು. ಮೈಸೂರು ಸ್ಯಾಂಡಲ್ ನಮ್ಮ ರಾಜ್ಯದ್ದು, ನಮ್ಮ ರಾಜ್ಯದ ಕಲಾವಿದೆಯರಿಗೆ ಒಂದು ಅವಕಾಶ ಕೊಡಲಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತದ್ದಾಗಲಿ, ಉಚಿತವಾಗಿ ಮಾಡುವವರು ನಮ್ಮಲ್ಲಿದ್ದಾರೆ. ಈಗ ಯಾರದ್ದೋ ಮಾತು ಕೇಳಿ ಉಚ್ಚಾಟದಲ್ಲಿ ಕೊಚ್ಚಿಕೊಂಡು ಹೋಗಿದಂತಾಗಿದೆ. ಈ ಹಣದಿಂದ ರಾಜ್ಯಕ್ಕೆ, ರಾಜ್ಯದ ಜನರಿಗೆ ಸಹಾಯ ಮಾಡಬಹುದಲ್ಲವೇ ಅಂತ ನಟಿ ತಾರಾ ಹೇಳಿದ್ದಾರೆ. ಈ ಕುರಿತ ವಿಡಿಯೋ ಇಲ್ಲಿದೆ..