ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಅವರಿಗೆ ಈಗ ಡಿಮ್ಯಾಂಡ್ ಜಾಸ್ತಿಯಾಗಿದೆ. ಬಾಲಿವುಡ್- ಟಾಲಿವುಡ್ ಎರಡು ಕಡೆ ಮಿಲ್ಕಿ ಬ್ಯೂಟಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ‘ಭೋಲಾ ಶಂಕರ್’ (Bhola Shankar) ಸಿನಿಮಾದಲ್ಲಿ ಮೆಗಾಸ್ಟಾರ್ ನಾಯಕಿಯಾಗಿರುವ ತಮನ್ನಾ ಅವರು ಈಗ ಸಹನಟ ಚಿರಂಜೀವಿ ಬಗ್ಗೆ ಸೀಕ್ರೆಟ್ ಒಂದನ್ನ ಬಿಚ್ಚಿಟ್ಟಿದ್ದಾರೆ. ಸಿನಿಮಾ ಕಾರ್ಯಕ್ರಮವೊಂದರಲ್ಲಿ ನಟಿ ಮೆಗಾಸ್ಟಾರ್ ಅವರನ್ನು ಹಾಡಿ ಹೊಗಳಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ನಟನೆಯ ಭೋಲಾ ಶಂಕರ್ ಸಿನಿಮಾ ಆಗಸ್ಟ್ 11ಕ್ಕೆ ತೆರೆ ಕಾಣುತ್ತಿದೆ. ಮೆಗಾಸ್ಟಾರ್ ತಂಗಿಯಾಗಿ ಮಹಾನಟಿ ಕೀರ್ತಿ ಸುರೇಶ್, ನಾಯಕಿಯಾಗಿ ತಮನ್ನಾ ನಟಿಸಿದ್ದಾರೆ. ಸಿನಿಮಾದ ಟ್ರೈಲರ್, ಫಸ್ಟ್ ಲುಕ್ ಎಲ್ಲವೂ ಅಭಿಮಾನಿಗಳ ಗಮನ ಸೆಳೆದಿದೆ. ಮೆಗಾಸ್ಟಾರ್ ಭರ್ಜರಿ ಆ್ಯಕ್ಷನ್ ನೋಡೋದ್ದಕ್ಕೆ ಫ್ಯಾನ್ಸ್ ಕಾಯ್ತಿದ್ದಾರೆ. ಇದನ್ನೂ ಓದಿ:18 ವರ್ಷಗಳ ದಾಂಪತ್ಯಕ್ಕೆ ನಟ ಫರ್ದೀನ್ ಖಾನ್ ವಿದಾಯ?
ಈ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ತಮನ್ನಾ (Tamannah) ಅವರು ಚಿರಂಜೀವಿ ಬಗ್ಗೆ ಮಾತನಾಡಿದ್ದಾರೆ. ಸೆಟ್‌ನಲ್ಲಿ ನಡೆದ ಘಟನೆಯೊಂದನ್ನ ಅವರು ಶೇರ್ ಮಾಡಿದ್ದಾರೆ. ಚಿರಂಜೀವಿ ಅವರು ಶ್ರಮಜೀವಿ. ಯಾಕೆಂದರೆ ನಾವು ಹಾಡೊಂದರ ಚಿತ್ರೀಕರಣ ಮಾಡುವಾಗ ಅವರಿಗೆ ಮೊಣಕಾಲು ನೋವು ಕಾಣಿಸಿಕೊಂಡಿತ್ತು. ಇದರಿಂದ ಅವರು ತೀವ್ರವಾಗಿ ಬಳಲುತ್ತಿದ್ದರು. ಹೀಗಿದ್ದರೂ ಸಹ ನೋವಿನ ನಡುವೆಯೇ ಶೂಟಿಂಗ್ ಮುಂದುವರೆಸಿದರು. ಸಿನಿಮಾ ಶೂಟಿಂಗ್ ಮುಂದುವರೆಯಲು ಏನು ಮಾಡಬೇಕೋ ಅದನ್ನು ಚಿರು ಅವರು ಮಾಡಿದರು.
ಈಗ ತಾನೇ ಹೆಜ್ಜೆಯಿಟ್ಟವರಂತೆ ಮೆಗಾ ಸ್ಟಾರ್ ಸದಾ ಉತ್ಸಾಹ, ಬದ್ಧತೆಯನ್ನು ಹೊಂದಿರುತ್ತಾರೆ. ಅವರ ಪಯಣವನ್ನು ನೋಡಿ ನಾನು ಸ್ಫೂರ್ತಿ ಪಡೆದಿದ್ದೇನೆ ಎಂದು ನಟನನ್ನು ತಮನ್ನಾ ಹೊಗಳಿದ್ದಾರೆ. ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ನಂತರ ಚಿರಂಜೀವಿ ಜೊತೆ ತಮನ್ನಾಗೆ ಇದು ಎರಡನೇ ಸಿನಿಮಾವಾಗಿದೆ.
‘ಜೈಲರ್ʼ (Jailer) ಸಿನಿಮಾ ಕೂಡ ಇದೇ ಆಗಸ್ಟ್ 10ಕ್ಕೆ ತೆರೆಗೆ ಬರಲಿದೆ. ತಲೈವಾ- ಶಿವಣ್ಣ ಕಾಂಬೋ ಸಿನಿಮಾದಲ್ಲಿ ತಮನ್ನಾ ಸೊಂಟ ಬಳುಕಿಸಿರುವ ಕಾವಾಲಾ ಸಾಂಗ್ ಸೂಪರ್ ಹಿಟ್ ಆಗಿದೆ. ರಜನಿಕಾಂತ್ (Rajanikanth) ಜೊತೆ ಮಿಲ್ಕಿ ಬ್ಯೂಟಿ ಹೆಜ್ಜೆ ಹಾಕಿದ್ದಾರೆ. ಒಂದು ದಿನದ ಅಂತರದಲ್ಲಿ ಜೈಲರ್ ಮತ್ತು ಭೋಲಾ ಶಂಕರ್ ತೆರೆಕಾಣುತ್ತಿದೆ. ಯಾವ ಸಿನಿಮಾಗೆ ಪ್ರೇಕ್ಷಕರ ಬೆಂಬಲವಿರಲಿದೆ ಕಾದುನೋಡಬೇಕಿದೆ.