ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಮತ್ತು ವಿಜಯ್ ವರ್ಮಾ (Vijay Varma) ನಡುವೆ ಬ್ರೇಕಪ್ ಆಗಿದೆ ಎನ್ನಲಾದ ವಿಚಾರ ಸಾಕಷ್ಟು ದಿನಗಳಿಂದ ಚರ್ಚೆಗೆ ಗ್ರಾಸವಾಗಿದೆ. ಆದರೆ ಇದುವರೆಗೂ ಇಬ್ಬರೂ ಇದರ ಬಗ್ಗೆ ಸ್ಪಷ್ಟನೆ ನೀಡುವ ಗೋಜಿಗೆ ಹೋಗಿರಲಿಲ್ಲ. ಇದೀಗ ಕಾರ್ಯಕ್ರಮವೊಂದರಲ್ಲಿ ನಟಿ ಬ್ರೇಕಪ್ (Break Up) ಬಗ್ಗೆ ಮೌನ ಮುರಿದಿದ್ದಾರೆ. ಇದನ್ನೂ ಓದಿ:ಮಗಳ ಆರೈಕೆಯ ನಡುವೆ ಮತ್ತೆ ಸಿನಿಮಾಗೆ ಮರಳುವ ಬಗ್ಗೆ ದೀಪಿಕಾ ಪಡುಕೋಣೆ ಓಪನ್ ಟಾಕ್
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಹರಿದಾಡುತ್ತಿರುವ ಬ್ರೇಕಪ್ ಸುದ್ದಿ ಬಗ್ಗೆ ಮಾತನಾಡಿದ ತಮನ್ನಾ, ಇಲ್ಲಿ ನಾನು ನನ್ನ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡಲು ಬಯಸುತ್ತೇನೆ. ನನಗೆ ಅದು ಸರಿ ಎಂದು ಅನಿಸಿದರೆ ಮಾತ್ರ ಹಂಚಿಕೊಳ್ಳುತ್ತೇನೆ. ಎಲ್ಲಿ ಯಾವ ವಿಷಯವನ್ನು ಹೇಳಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ. ನನ್ನ ಕಡೆಯಿಂದ ಯಾರ ಬಗ್ಗೆಯೂ ಹಾಗೂ ಯಾವುದರ ಬಗ್ಗೆಯೂ ದೂರುಗಳಿಲ್ಲ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬ್ರೇಕಪ್ ಸುದ್ದಿ ನನ್ನ ವೈಯಕ್ತಿಕ ವಿಚಾರ ಎಂದಿದ್ದಾರೆ.
ಅಂದಹಾಗೆ, ಇತ್ತೀಚೆಗೆ ರವೀನಾ ಟಂಡನ್ ಮನೆಯಲ್ಲಿ ಹೋಳಿ ಹಬ್ಬ ಆಯೋಜಿಸಿದ್ದರು. ಈ ವೇಳೆ, ವಿಜಯ್ ಮತ್ತು ತಮನ್ನಾ ಪ್ರತ್ಯೇಕವಾಗಿ ಭಾಗಿಯಾಗಿದ್ದರು. ಇದು ಇಬ್ಬರ ಬ್ರೇಕಪ್ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು.
ಇನ್ನೂ ಇತ್ತೀಚೆಗೆ ವಿಜಯ್ ಮತ್ತು ತಮನ್ನಾ 2 ವರ್ಷಗಳ ಡೇಟಿಂಗ್‌ಗೆ ಬ್ರೇಕ್ ಬಿದ್ದಿದೆ ಎಂದು ವರದಿಯಾಗಿದೆ. ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆ. ಆದರೆ ಮುಂದಿನ ದಿನಗಳಲ್ಲಿ ಈ ಜೋಡಿ ಬ್ರೇಕಪ್ ಬಗ್ಗೆ ಮಾತನಾಡ್ತಾರಾ? ಎಂದು ಕಾದುನೋಡಬೇಕಿದೆ.