ಸೌತ್ ಬ್ಯೂಟಿ ತಮನ್ನಾ ಭಾಟಿಯಾ, ವಿಜಯ್ ವರ್ಮಾ (Vijay Varma) ಜೊತೆ ಬ್ರೇಕಪ್ ಬಳಿಕ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ವಿಜಯ್ ಜೊತೆಗಿನ ರಿಲೇಷನ್‌ಶಿಪ್‌ಗೆ ಬ್ರೇಕ್ ಬಿದ್ಮೇಲೆ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ:‘ಆಂಧ್ರ ಕಿಂಗ್’ ಆದ ಉಪೇಂದ್ರ ಕಟೌಟ್ ಮುಂದೆ ರಾಮ್ ಪೋತಿನೇನಿ ಸಂಭ್ರಮ- ಟೀಸರ್ ಔಟ್
ಸಮಂತಾ (Samantha) ಅವರು ಡಿವೋರ್ಸ್ ಬಳಿಕ ಸಿನಿಮಾ ಕೆರಿಯರ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ನಟನೆಯ ಬಳಿಕ ‘ಶುಭಂ’ ಚಿತ್ರಕ್ಕೆ ನಿರ್ಮಾಪಕಿಯಾಗಿ ಸಕ್ಸಸ್ ಕಂಡಿದ್ದಾರೆ. ಅದೇ ಹಾದಿಯಲ್ಲಿ ತಮನ್ನಾ ಕೂಡ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ನಿರ್ಮಾಣದ ಕಡೆ ತಮನ್ನಾ (Tamannaah Bhatia) ಹೊಸ ಹೆಜ್ಜೆ ಇಟ್ಟಿದ್ದಾರೆ. ಇದನ್ನೂ ಓದಿ:ದೇವರಕೊಂಡ ಸಹೋದರನ ಸಿನಿಮಾಗೆ ಕ್ಲ್ಯಾಪ್- ಶುಭ ಕೋರಿದ ರಶ್ಮಿಕಾ
ತಮನ್ನಾ ಭಾಟಿಯಾ 2 ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ಬಗೆ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಹೀಗಾಗಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಲು ನಿರ್ಧರಿಸಿದ್ದಾರೆ. ಹೊಸ ನಿರ್ಮಾಣ ಸಂಸ್ಥೆ ಶುರು ಮಾಡಿದ್ದು, ಇದರಲ್ಲಿ ವೆಬ್ ಸರಣಿ, ಸೀರಿಯಲ್, ಸಣ್ಣ ಬಜೆಟ್ ಸಿನಿಮಾಗಳನ್ನು ನಿರ್ಮಿಸಲು ನಟಿ ಪ್ಲಾö್ಯನ್ ಮಾಡಿದ್ದಾರೆ. ಈ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.
ತಮನ್ನಾಗೆ ಈಗ ಬಾಲಿವುಡ್ ಬೇಡಿಕೆ ಹೆಚ್ಚಾಗಿದೆ. ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಅವರ ಕೈಯಲ್ಲಿವೆ.