ರಾಮ್ ಚರಣ್ ಪತ್ನಿ ಕಡೆಯಿಂದ ತಮನ್ನಾಗೆ 2 ಕೋಟಿ ರೂ. ವಜ್ರದುಂಗುರ ಗಿಫ್ಟ್

Public TV
2 Min Read
upasana

ಸೌತ್‌ನ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamanaah Bhatia) ಅವರು ಬಾಲಿವುಡ್ ರಂಗದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಲಸ್ಟ್ ಸ್ಟೋರಿಸ್ 2, ಜೀ ಕರ್ದಾ ಎರಡು ಪ್ರಾಜೆಕ್ಟ್ ಈ ನಟಿಗೆ ಸಕ್ಸಸ್ ಕೊಟ್ಟಿದೆ. ಹೀಗಿರುವಾಗ ನಟಿ ತಮ್ಮ ಹಳೆಯ ಸಿನಿಮಾ ಬಗ್ಗೆ ಮೆಲುಕು ಹಾಕಿದ್ದಾರೆ. ‘ಸೈರಾ ನರಸಿಂಹ ರೆಡ್ಡಿ’ (Saira Narasimha Reddy) ಸಿನಿಮಾದಲ್ಲಿನ ತಮನ್ನಾ ಆಕ್ಟಿಂಗ್ ನೋಡಿ ರಾಮ್ ಚರಣ್ (Ram Charan) ಪತ್ನಿ ಉಪಾಸನಾ (Upasana) ದುಬಾರಿ ಗಿಫ್ಟ್‌ವೊಂದನ್ನ ನೀಡಿದ್ದರು. ಈ ಬಗ್ಗೆ ನಟಿ ಹಳೆಯ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ.

tamanna 1 3

ಸಿನಿಮಾದ ಸಕ್ಸಸ್ ವಿಚಾರವಾಗಿಯೂ ಸಖತ್ ಸುದ್ದಿಯಾಗುತ್ತಿದ್ದಾರೆ. ಜೊತೆಗೆ ವಿಜಯ್ ವರ್ಮ ಜೊತೆಗಿನ ಡೇಟಿಂಗ್ ವಿಷ್ಯಕ್ಕೆ ತಮನ್ನಾ ಹೈಲೆಟ್ ಆಗಿದ್ದಾರೆ. ಇದರ ನಡುವೆ ಅಚ್ಚರಿ ವಿಚಾರವೊಂದು ಬಹಿರಂಗ ಆಗಿದೆ. ತಮನ್ನಾ ಭಾಟಿಯಾ ಬಳಿ 2 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರ ಇದೆ. ಸೋಶಿಯಲ್ ಮೀಡಿಯಾದಲ್ಲಿ ಇದರ ಫೋಟೋ ವೈರಲ್ ಆಗಿದೆ. ಈ ದುಬಾರಿ ವಸ್ತು ತಮನ್ನಾಗೆ ಸಿಕ್ಕಿದ್ದು ಉಡುಗೊರೆಯ ರೂಪದಲ್ಲಿ ಅದು ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಕಡೆಯಿಂದ. ಈ ಉಂಗುರವನ್ನು ತಮನ್ನಾಗೆ ಗಿಫ್ಟ್ ಆಗಿ ನೀಡಿದ್ದರು. ಇದನ್ನೂ ಓದಿ:ಚಿರು ಕೊನೆಯ ಸಿನಿಮಾದಲ್ಲಿ ರಾಯನ್- ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಮೇಘನಾ ರಾಜ್

tamannah

ತಮನ್ನಾ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಫ್ಯಾನ್ಸ್ ಮಾತ್ರವಲ್ಲದೇ ಸೆಲೆಬ್ರಿಟಿಗಳಿಗೂ ತಮನ್ನಾ ಎಂದರೆ ಇಷ್ಟ. ಉಪಾಸನಾ ಅವರ ಜೊತೆ ತಮನ್ನಾ ಉತ್ತಮ ಬಾಂಧವ್ಯ ಹೊಂದಿದ್ದಾರೆ. 2019ರಲ್ಲಿ ರಾಮ್ ಚರಣ್ ನಿರ್ಮಿಸಿದ್ದ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ತಮನ್ನಾ ನಟಿಸಿದ್ದರು. ಆ ಚಿತ್ರದಲ್ಲಿನ ಅವರ ಅಭಿನಯ ನೋಡಿ ಖುಷಿಯಾಗಿದ್ದ ಉಪಾಸನಾ ಅವರು ಈ ವಜ್ರದ ಉಂಗುರ ನೀಡಿದ್ದರು. ಈಗ ಆ ವಿಚಾರದ ಬಗ್ಗೆ ಫ್ಯಾನ್ಸ್ ವಲಯದಲ್ಲಿ ಚರ್ಚೆ ಆಗುತ್ತಿದೆ.

ತಮನ್ನಾ ಅವರು ಚಿತ್ರರಂಗಕ್ಕೆ ಕಾಲಿಟ್ಟು ಬಹಳ ವರ್ಷಗಳಾಗಿದೆ. ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಆಗಸ್ಟ್ 10ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದ ‘ಕಾವಾಲಾ’ ಹಾಡು ಧೂಳೆಬ್ಬಿಸುತ್ತಿದೆ. ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article