ಸೌತ್ ಬ್ಯೂಟಿ ತಮನ್ನಾ ಭಾಟಿಯಾ (Tamannah Bhatia) ಅವರು ಸದ್ಯ ಬಾಲಿವುಡ್ (Bollywood) ಸಿನಿಮಾಗಳಲ್ಲಿ ಮಿಂಚ್ತಿದ್ದಾರೆ. ಸಿನಿಮಾ, ವೆಬ್ ಸಿರೀಸ್ ಅಂತಾ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ನಲ್ಲಿ ನಟಿ ಸದ್ದು ಮಾಡ್ತಿದ್ದಾರೆ. ಕಾವಾಲಾ (Kavaala) ಸಾಂಗ್ಗೆ ಸೊಂಟ ಬಳುಕಿಸಿದ ಮೇಲೆ ತಮನ್ನಾ ನೇಮು ಫೇಮು ಮತ್ತಷ್ಟು ಜಾಸ್ತಿಯಾಗಿದೆ. ಹೀಗಿರುವಾಗ ಈ ನಡುವೆ ನಯಾ ಫೋಟೋಶೂಟ್ನಲ್ಲಿ ನಟಿ ಮಿಂಚಿದ್ದಾರೆ.
ಲಸ್ಟ್ ಸ್ಟೋರಿಸ್ 2, ಜೀ ಕರ್ದಾ (Jee Kardha) ಪ್ರಾಜೆಕ್ಟ್ನಲ್ಲಿ ನಟಿ ತಮನ್ನಾ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸಂಚಲನ ಮೂಡಿಸಿದ್ದರು. ತಮನ್ನಾ ಹಸಿ ಬಿಸಿ ದೃಶ್ಯಕ್ಕೆ ಕೆಲವರು ವಿರೋಧಿಸಿದ್ರೆ, ಇನ್ನೂ ಕೆಲವರು ಮೆಚ್ಚುಗೆ ಸೂಚಿಸಿದ್ದರು. ಇತ್ತೀಚಿಗೆ ರಜನಿಕಾಂತ್ ನಟನೆಯ ‘ಜೈಲರ್’ (Jailer) ಸಿನಿಮಾದಲ್ಲಿ ತಮನ್ನಾ ಸಾಥ್ ನೀಡಿದ್ದರು. ಚಿತ್ರದ ಕಾವಾಲಾ ಹಾಡಿಗೆ ಅದ್ಭುತವಾಗಿ ಹೆಜ್ಜೆಗೆ ಹಾಕಿದ್ದರು. ಅವರ ಲುಕ್ಗೆ ಪಡ್ಡೆಹುಡುಗರು ಕಳೆದು ಹೋಗಿದ್ದರು.
ಅಷ್ಟರ ಮಟ್ಟಿಗೆ ತಮನ್ನಾ ‘ಕಾವಾಲಾ’ ಸಾಂಗ್ ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಚಿಕ್ಕವರಿಂದ ದೊಡ್ಡವರ ತನಕ ಈ ಸಾಂಗ್ಗೆ ರೀಲ್ಸ್ ಮಾಡ್ತಿದ್ದಾರೆ. ಸದ್ಯ ಜೈಲರ್ ಸಿನಿಮಾದ ಆಡಿಯೋ ರಿಲೀಸ್ ಈವೆಂಟ್ಗೆ ತಮನ್ನಾ ಭಾಗಿಯಾಗಿದ್ದಾರೆ. ಅದಕ್ಕಾಗಿ ಸಖತ್ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಶ್ರೀಲೀಲಾಗೆ ಸೆಡ್ಡು ಹೊಡೆದ ವೈಷ್ಣವಿ- ‘ಬೇಬಿ’ ನಾಯಕಿಗೆ ಬಂಪರ್ ಆಫರ್ಸ್
ಕೆಂಪು ಬಣ್ಣದ ಉಡುಗೆಯಲ್ಲಿ ಸಖತ್ ಗ್ಲ್ಯಾಮರಸ್ ಆಗಿ ತಮನ್ನಾ ಪೋಸ್ ನೀಡಿದ್ದಾರೆ. ಕಾವಾಲಾ ಬ್ಯೂಟಿಯ ನಯಾ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ತಮನ್ನಾ ನಯಾ ಫೋಟೋ ನೋಡ್ತಿದ್ದಂತೆ ಫ್ಯಾನ್ಸ್, ಪ್ಲೀಸ್ ಮೇಡಂ ಹೀಗೆಲ್ಲಾ ಸೀರೆ ಉಡಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ. ಕಾವಾಲಾ ಬ್ಯೂಟಿಯ ಹೊಸ ಅವತಾರಕ್ಕೆ ಫಿದಾ ಆಗಿದ್ದಾರೆ. ಇದನ್ನೂ ಓದಿ:ಶ್ರೀಲೀಲಾಗೆ ಸೆಡ್ಡು ಹೊಡೆದ ವೈಷ್ಣವಿ- ‘ಬೇಬಿ’ ನಾಯಕಿಗೆ ಬಂಪರ್ ಆಫರ್ಸ್
ತಮನ್ನಾ ಸಿನಿ ಜಗತ್ತಿಗೆ ಎಂಟ್ರಿ ಕೊಟ್ಟು 18 ವರ್ಷಗಳಾಯ್ತು. 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ಸದ್ಯ ತಮನ್ನಾ ಮುಂಬರುವ ಸಿನಿಮಾಗಾಗಿ ಸಿನಿಪ್ರಿಯರು ಎದುರು ನೋಡ್ತಿದ್ದಾರೆ.