ದಕ್ಷಿಣ ಭಾರತ ಚಿತ್ರರಂಗ ನಟಿ ಜಮುನಾ (Actress Jamuna) ಅವರ ಅಗಲಿಕೆ ಚಿತ್ರರಂಗಕ್ಕೆ ಶಾಕ್ ನೀಡಿದೆ. ಈ ಬೆನ್ನಲ್ಲೇ ಹೊಸದೊಂದು ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಜಮುನಾ ಅವರ ಜೀವನ ಚರಿತ್ರೆಯನ್ನ (Biopic) ಸಿನಿಮಾ ಮಾಡಲು ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಜಮುನಾ ಅವರ ಪಾತ್ರವನ್ನ ಮಿಲ್ಕಿ ಬ್ಯೂಟಿ ತಮನ್ನಾ ನಟಿಸುವ ಕುರಿತು ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಮಗುವಾದ ಬಳಿಕ ಮಾಲಿವುಡ್ನತ್ತ ಪ್ರಣಿತಾ ಸುಭಾಷ್
ಚಿತ್ರರಂಗದಲ್ಲಿ ತಮ್ಮದೇ ಶೈಲಿಯಲ್ಲಿ ನಟಿ ಜಮುನಾ ಅವರು ಗುರುತಿಸಿಕೊಂಡಿದ್ದಾರೆ. ಬಹುಭಾಷೆಗಳಲ್ಲಿ 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ವರನಟ ರಾಜ್ಕುಮಾರ್ (Rajakumar) ಜೊತೆ 2 ಸಿನಿಮಾಗಳಲ್ಲಿ ನಟಿ ಜಮುನಾ ನಟಿಸಿರೋದು ವಿಶೇಷ. ಪುಟ್ಟಣ್ಣ ಕಣಗಾಲ್ ನಿರ್ದೇಶನದ `ಸಾಕ್ಷಾತ್ಕಾರ’ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ಸೌತ್ ಸಿನಿರಂಗದಲ್ಲಿ ಬಯೋಪಿಕ್ ಹಾವಳಿ ಜೋರಾಗಿರುವ ಬೆನ್ನಲ್ಲೇ ಜಮುನಾ ಅವರ ಜೀವನ ಚರಿತ್ರೆ ವಿಷ್ಯ ಸದ್ದು ಮಾಡ್ತಿದೆ. ಸಿಲ್ಕ್ ಸ್ಮಿತಾ, ಜಯಲಲಿತಾ, ಬಯೋಪಿಕ್ ತೆರೆಗೆ ಮೇಲೆ ಮೋಡಿ ಮಾಡಿತ್ತು. ಈಗ ಖ್ಯಾತ ನಟಿ ಜಮುನಾ ಸಿನಿಮಾ ತೆರೆಗೆ ಬರೋದ್ದಕ್ಕೆ ರೆಡಿಯಾಗುತ್ತಿದೆ ಎನ್ನಲಾಗುತ್ತಿದೆ.
ಜಮುನಾ ಅವರ ಪಾತ್ರಕ್ಕೆ ತಮನ್ನಾ ಭಾಟಿಯಾ (Tamanna Bhatia) ಅವರು ಸೆಲೆಕ್ಟ್ ಆಗಿದ್ದಾರಂತೆ. ನಟಿಯ ಬಯೋಪಿಕ್ನಲ್ಲಿ ತಮನ್ನಾ ನಟಿಸುವ ಬಗ್ಗೆ ಕಾಲಿವುಡ್ ಅಂಗಳದಲ್ಲಿ ಸಖತ್ ಚರ್ಚೆ ನಡೆಯುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k