ಸಿಖ್, ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ ನಟಿ ತಾಪ್ಸಿ ಪನ್ನು

Public TV
1 Min Read
taapsee pannu 2

ಟಿ ತಾಪ್ಸಿ ಪನ್ನು ಮದುವೆಯ ಸಡಗರದಲ್ಲಿದ್ದಾರೆ. ಬಾಲಿವುಡ್ ಅಂಗಳದಲ್ಲಿ ಮದುವೆಯ ಸಂಭ್ರಮ ಜೋರಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ರಕುಲ್ (Rakul Preet Singh) ಮತ್ತು ಜಾಕಿ ಭಗ್ನಾನಿ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಗೂಗ್ಲಿ ಬೆಡಗಿ ಕೃತಿ ಕರಬಂಧ ಮಾರ್ಚ್‌ನಲ್ಲಿ ಮದುವೆ ಆಗೋದಾಗಿ ಅನೌನ್ಸ್ ಮಾಡಿದ್ದರು. ಇದೀಗ ತಾಪ್ಸಿ ಸರದಿ.

taapsee pannu 1

ತಾಪ್ಸಿ (Taapsee Pannu) ತಮ್ಮ ಬಹುಕಾಲದ ಗೆಳೆಯನ ಜೊತೆ ಮದುವೆಗೆ ರೆಡಿಯಾಗಿದ್ದು, ಮಾರ್ಚ್ ಅಂತ್ಯದಲ್ಲಿ ಉದಯಪುರದಲ್ಲಿ ಮದುವೆ (Wedding) ನಡೆಯಲಿದೆ. ಕ್ರಿಶ್ಚಿಯನ್ ಮತ್ತು ಸಿಖ್ ಸಂಪ್ರದಾಯದಂತೆ ಈ ಜೋಡಿ ಮದುವೆ ಆಗಲಿದೆ. ‌

taapsee pannu 1

ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ (Mathias Boe) ಜೊತೆ 10 ವರ್ಷಗಳ ಕಾಲ ಡೇಟಿಂಗ್ ಮಾಡ್ತಿದ್ದರು ತಾಪ್ಸಿ. ಈಗ ಗುರುಹಿರಿಯರ ಸಮ್ಮತಿಯ ಮೇರೆಗೆ ಮದುವೆಯಾಗುತ್ತಿದ್ದಾರೆ. ಮದುವೆಗೆ 2 ಕುಟುಂಬದವರು ಮತ್ತು ಆಪ್ತರಷ್ಟೇ ಭಾಗಿಯಾಗಲಿದ್ದಾರೆ. ಹಾಗಾಗಿ ಬಾಲಿವುಡ್ ಮತ್ತು ಸೌತ್ ಸಿನಿಮಾರಂಗದ ಸೆಲೆಬ್ರಿಟಿಗಳಿಗೆ ಮದುವೆಗೆ ಆಹ್ವಾನವಿಲ್ಲ ಎನ್ನಲಾಗುತ್ತಿದೆ.

 

ಸದ್ಯ ಪಡ್ಡೆಹುಡುಗರ ನೆಚ್ಚಿನ ನಟಿ ತಾಪ್ಸಿ ಮದುವೆಗೆ ಸಿದ್ಧತೆ ಮಾಡಿಕೊಳ್ತಿರೋದಕ್ಕೆ ನಿರಾಸೆಯಾಗಿದ್ದಾರೆ. ಏನೇ ಆಗಲಿ ನಮ್ಮ ನಾಯಕಿಗೆ ಶುಭವಾಗಲಿ ಎಂದು ಹಾರೈಸುತ್ತಿದ್ದಾರೆ ಫ್ಯಾನ್ಸ್.

Share This Article