ಬಾಲಿವುಡ್ನಲ್ಲಿ (Bollywood) ಬಾಲನಟಿಯಾಗಿ ಮಿಂಚಿದ್ದ ಚೆಲುವೆ ಸ್ವಿನಿ ಖಾರಾ (Swini Khara) ಅವರು ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದಾರೆ. ಅಮಿತಾಭ್ ಬಚ್ಚನ್ ಜೊತೆ ನಟಿಸಿದ್ದ ನಟಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
Advertisement
2007ರಲ್ಲಿ `ಚೀನಿ ಕಮ್’ ಚಿತ್ರದಲ್ಲಿ ಬಿಗ್ ಬಿ (Bigg b) ಜೊತೆ ಸ್ವಿನಿ ಬಾಲ ನಟಿಯಾಗಿ ನಟಿಸಿದ್ದರು. ಇಡೀ ಸಿನಿಮಾ ಅವರ ಜೊತೆಯೇ ಸಾಗುವ ಪಾತ್ರ ಅವರದಾಗಿದ್ದು, ಈ ಚಿತ್ರ ಪ್ರೇಕ್ಷಕರ ಪ್ರಭುಗಳಿಗೆ ಮೆಚ್ಚುಗೆಯಾಗಿತ್ತು. ಈಗ ಬಾಲ ನಟಿ ಸ್ವಿನಿ ಅವರು ಬೆಳೆದು ದೊಡ್ಡವಳಾಗಿದ್ದಾಳೆ. ಬಹುಕಾಲದ ಗೆಳೆಯನ ಎಂಗೇಜ್ ಆಗಿದ್ದಾರೆ. ಇದನ್ನೂ ಓದಿ: ‘ಆಸ್ಕರ್’ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೀಪಿಕಾ ಪಡುಕೋಣೆ ನಿರೂಪಕಿ
Advertisement
View this post on Instagram
Advertisement
ಗೆಳೆಯ ಉರ್ವಿಶ್ ದೇಸಾಯಿ (Urvish Desai) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಕುರಿತ ಫೋಟೋವನ್ನ ನಟಿ ಸ್ವಿನಿ ಖಾರಾ ಅವರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 24 ವರ್ಷದ ನಟಿ ಸ್ವಿನಿ ಲ್ಯಾವೆಂಡರ್ ಲೆಹೆಂಗಾ ಚೋಲಿ ಧರಿಸಿ ಮಿಂಚಿದ್ದಾರೆ.
Advertisement
ಇನ್ನೂ ಸ್ವಿನಿ ಮತ್ತು ಉರ್ವಿಶ್ ಜೋಡಿ ಈ ವರ್ಷದ ಅಂತ್ಯದಲ್ಲಿ ಹಸೆಮಣೆ ಏರಲಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಹೊಸ ಬಾಳಿಗೆ ಕಾಲಿಡಲಿದ್ದಾರೆ.