‘ಹೃದಯಾಘಾತವಾದಾಗ (Heart Attack) ನನಗೂ ಆತಂಕವಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಾದೆ. ನನಗೆ ಆಗ ಆಂಜಿಯೋಪ್ಲ್ಯಾಸ್ಟಿ ಮಾಡಿ, ಸ್ಟಂಟ್ ಹಾಕಿದ್ದಾರೆ. ವೈದ್ಯರು ನನ್ನೊಂದಿಗೆ ಮಾತನಾಡುತ್ತಾ ನನ್ನ ಹೃದಯ ವಿಶಾಲವಾಗಿದೆ ಮತ್ತು ಪ್ರೀತಿಯಿಂದ ತುಂಬಿದೆ ಎಂದಿದ್ದಾರೆ. ಹಾಗಾಗಿ ನಾನು ನೆಮ್ಮದಿಯಿಂದ ಇದ್ದೇನೆ. ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ’ ಎಂದಿದ್ದಾರೆ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್.
ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿಯೂ (Bhuvanasundari) ಆಗಿರುವ ಸುಶ್ಮಿತಾ ಸೇನ್ (Sushmita Sen) ಗೆ ಹೃದಯಾಘಾತ ಆಗಿರುವ ವಿಚಾರ ನಿನ್ನೆಯಷ್ಟೇ ತಿಳಿದಿತ್ತು. ಎರಡ್ಮೂರು ದಿನಗಳ ಹಿಂದೆಯೇ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ವಿಷಯವನ್ನು ಸ್ವತಃ ಸುಶ್ಮಿತಾ ಅವರೇ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು.
ಡೇಟಿಂಗ್, ಡಿವೋರ್ಸ್ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಿದ್ದ ಸುಶ್ಮಿತಾ, ಇಂಥದ್ದೊಂದು ವಿಷಯವನ್ನು ಹಂಚಿಕೊಂಡಾಗ ಅಭಿಮಾನಿಗಳಿಗೆ ಆತಂಕವಾಗಿದ್ದು ಸಹಜ. ಈಗ ನಿಮ್ಮ ಆರೋಗ್ಯ ಹೇಗಿದೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಹೃದಯಾಘಾತಕ್ಕೆ ಕಾರಣವನ್ನೂ ಹಲವರು ಕೇಳಿದ್ದಾರೆ. ತಡವಾಗಿ ಸುದ್ದಿ ಹಂಚಿಕೊಂಡಿದ್ದನ್ನೂ ಹಲವರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಮಾರ್ಚ್ 4ಕ್ಕೆ ‘ಕಬ್ಜ’ ಸಿನಿಮಾ ಟ್ರೈಲರ್: ಕಾಯುತ್ತಿದ್ದ ಅಭಿಮಾನಿಗಳಲ್ಲಿ ಸಂಭ್ರಮ
ಸುಶ್ಮಿತಾ ಅವರೇ ಹೇಳಿಕೊಂಡಂತೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದಿದ್ದಾರೆ. ಆರೋಗ್ಯದ ಬಗ್ಗೆ ಆತಂಕ ಪಡಬೇಕಿಲ್ಲ ಎಂದು ಅಭಿಮಾನಿಗಳಿಗೂ ಅವರು ಹೇಳಿದ್ದಾರೆ. ವೈದ್ಯರು ಸೂಕ್ತ ರೀತಿಯಲ್ಲಿ ಸ್ಪಂದಿಸಿ ಚಿಕಿತ್ಸೆ ನೀಡಿದ್ದರಿಂದ ಗುಣಮುಖರಾಗುತ್ತಿರುವ ವಿಚಾರವನ್ನೂ ಅವರು ತಿಳಿಸಿದ್ದಾರೆ. ತಮ್ಮ ತಂದೆಯು ಈ ಸಮಯದಲ್ಲಿ ಧೈರ್ಯ ನೀಡಿದ್ದನ್ನೂ ಅವರು ಸ್ಮರಿಸಿಕೊಂಡಿದ್ದಾರೆ.