ಬರೋಬ್ಬರಿ ಐದು ವರ್ಷಗಳ ಬಳಿಕ ಬಾಲಿವುಡ್ ನಟಿ ಶ್ರೀದೇವಿ (Sridevi) ಅವರ ಸಾವಿನ ರಹಸ್ಯ ಬಯಲಾಗಿದೆ. ಭಾರತೀಯ ಸಿನಿಮಾ ರಂಗ ಕಂಡ ಲೇಡಿ ಸೂಪರ್ ಸ್ಟಾರ್ ದುಬೈನಲ್ಲಿ (Dubai) 2018ರಂದು ಹಠಾತ್ ಸಾವನ್ನಪ್ಪಿದ್ದರು. ತಾವು ಉಳಿದುಕೊಂಡಿದ್ದ ಹೋಟೆಲ್ ನ ಬಾತ್ ಟಬ್ ನಲ್ಲಿ ಶ್ರೀದೇವಿ ಅವರ ಮೃತದೇಹ ಪತ್ತೆಯಾಗಿತ್ತು.
ಆರೋಗ್ಯವಾಗಿದ್ದ ಶ್ರೀದೇವಿ ಹಠಾತ್ ನಿಧನರಾದ ಸುದ್ದಿಯನ್ನು ಸಹಜ ಸಾವು ಎಂದು ಯಾರೂ ನಂಬಲು ತಯಾರಿರಲಿಲ್ಲ. ಹಾಗಾಗಿ ಆ ಸಾವಿಗೆ ರೆಕ್ಕಪುಕ್ಕಗಳು ಹುಟ್ಟುಕೊಂಡವು. ಅತಿಯಾದ ಮದ್ಯ ಸೇವನೆಯಿಂದ ಶ್ರೀದೇವಿ ನಿಧನರಾಗಿದ್ದಾರೆ ಎಂದು ಕೆಲವರು ಪುಕಾರು ಹಬ್ಬಿಸಿದರೆ, ಇನ್ನೂ ಕೆಲವರು ಬಾತ್ ಟಬ್ ನಲ್ಲಿ ಮುಳುಗಿಸಿ ಸಾಯಿಸಲಾಗಿದೆ ಎಂದೂ ಮಾತನಾಡಿಕೊಂಡರು. ಹಾಗಾಗಿ ಅವರ ಸಾವು ನಿಗೂಢವಾಗಿ ಉಳಿದಿತ್ತು.
ಇದೇ ಮೊದಲ ಬಾರಿಗೆ ಪತ್ನಿಯ ಸಾವಿನ ಬಗ್ಗೆ ಬೋನಿ ಕಪೂರ್ (Boney Kapoor) ಮಾತನಾಡಿದ್ದಾರೆ. ಶ್ರೀದೇವಿ ಅವರ ಸಾವಿಗೆ ವಿಪರೀತವಾಗಿ ಅವರು ಪಥ್ಯ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಸದಾ ತಾನು ಸುಂದರವಾಗಿಯೇ ಇರಬೇಕು ಎಂದು ಶ್ರೀದೇವಿ ಪಥ್ಯ ಮಾಡುತ್ತಿದ್ದರು. ಹಲವಾರು ಬಾರಿ ಉಪವಾಸ ಇರುತ್ತದೆ. ಕಡಿಮೆ ರಕ್ತದೊತ್ತಡವಿದೆ ಎಂದು ವೈದ್ಯರು ತಿಳಿಸಿದ್ದರು ಅದನ್ನು ಶ್ರೀದೇವಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದಿದ್ದಾರೆ.
ಶ್ರೀದೇವಿ ಅವರ ನಿಧನರಾದಾಗ ತಮ್ಮನ್ನು ದುಬೈ ಪೊಲೀಸರು ಹಲವು ಗಂಟೆಗಳ ಕಾಲ ತನಿಖೆಗೆ ಒಳಪಡಿಸಿದ್ದರು ಎನ್ನುವ ಸಂಗತಿಯನ್ನೂ ಅವರು ಹಂಚಿಕೊಂಡಿದ್ದಾರೆ. ಸುಳ್ಳು ಪತ್ತೆ ಸೇರಿದಂತೆ ಹಲವಾರು ರೀತಿಯ ತನಿಖೆಗಳನ್ನೂ ಪೊಲೀಸರು ಮಾಡಿದ್ದಾರೆ ಎನ್ನವ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ ಬೋನಿ ಕಪೂರ್.
ಶ್ರೀದೇವಿ ಅವರು ಹಾಗೆ ಕುಸಿದು ಬೀಳುವುದು ಅದೇ ಮೊದಲೇನೂ ಆಗಿರಲಿಲ್ಲ ಎನ್ನುವ ಸಂಗತಿಯನ್ನೂ ಹಂಚಿಕೊಂಡಿದ್ದಾರೆ. ಹಲವಾರು ಬಾರಿ ಶೂಟಿಂಗ್ ಸಂದರ್ಭದಲ್ಲಿ ಹಾಗೆ ಕುಸಿದು ಬಿದ್ದಿದ್ದರು ಎಂದು ಹೇಳಿಕೊಂಡಿದ್ದಾರೆ. ನಿರ್ಮಾಪಕ ನಾಗಾರ್ಜುನ ಕೂಡ ತಮ್ಮದೇ ಸಿನಿಮಾದ ಶೂಟಿಂಗ್ ನಲ್ಲಿ ಶ್ರೀದೇವಿ ನಿಶ್ಯಕ್ತಿಯಿಂದ ಬಿದ್ದಿದ್ದ ಸಂಗತಿಯನ್ನೂ ತಮಗೆ ತಿಳಿಸಿದ್ದರು ಎಂದು ಬೋನಿ ಕಪೂರ್ ಮಾತನಾಡಿದ್ದಾರೆ.
Web Stories