ಕನ್ನಡತಿ ಶ್ರೀಲೀಲಾ (Sreeleela) ಅವರು ಟಾಲಿವುಡ್ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅಪಾರ ಅಭಿಮಾನಿಗಳ ಬಳಗ ಹೊಂದಿರುವ ಶ್ರೀಲೀಲಾ ಅವರು ಬಾಲಯ್ಯ ನಿರೂಪಣೆಯ ಶೋಗೆ ಗೆಸ್ಟ್ ಆಗಿ ಹೋಗಿದ್ದರು. ಈ ವೇಳೆ, ಶ್ರೀಲೀಲಾಗೆ ಮದುವೆ ಮಾಡುವ ಹೊಣೆ ನನ್ನದು ಎಂದು ಬಾಲಯ್ಯ ತಿಳಿಸಿದ್ದಾರೆ.
Advertisement
ಸದ್ಯ ‘ಕಿಸ್ಸಿಕ್’ ಹೀರೋಯಿನ್ ಆಗಿ ಸದ್ದು ಮಾಡುತ್ತಿರುವ ಶ್ರೀಲೀಲಾ ಅವರ ಮದುವೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ನಟಿಯ ಕುರಿತು ಬಾಲಯ್ಯ ನೀಡಿರುವ ಹೇಳಿಕೆ ಸಖತ್ ಸದ್ದು ಮಾಡುತ್ತಿದೆ. ‘ಅನ್‌ಸ್ಟಾಪೆಬಲ್ ವಿತ್ ಬಾಲಯ್ಯ’ ಕಾರ್ಯಕ್ರಮಕ್ಕೆ ನವೀನ್ ಪೋಲಿಶೆಟ್ಟಿ ಜೊತೆ ಶ್ರೀಲೀಲಾ ಅತಿಥಿಯಾಗಿ ಆಗಮಿಸಿದರು. ಈ ವೇಳೆ, ಶ್ರೀಲೀಲಾ ನನ್ನ ಮಗಳಿದ್ದಂತೆ, ಆಕೆಯನ್ನು ನೋಡಿದರೆ ನನ್ನ ಮಗಳು ನೆನಪಾಗುತ್ತಾಳೆ. ತಂದೆಯ ಸ್ಥಾನದಲ್ಲಿದ್ದು, ಆಕೆಗೆ ಮದುವೆ (Wedding) ಮಾಡಿಸುವ ಜವಾಬ್ದಾರಿ ನನ್ನದು ಎಂದು ಬಾಲಯ್ಯ (Balayya) ಮಾತನಾಡಿದ್ದಾರೆ.
Advertisement
Advertisement
ಕಳೆದ ವರ್ಷ ತೆರೆಕಂಡ ‘ಭಗವಂತ ಕೇಸರಿ’ ಸಿನಿಮಾದಲ್ಲಿ ಬಾಲಯ್ಯ ಮಗಳಾಗಿ ಶ್ರೀಲೀಲಾ ನಟಿಸಿದರು. ಹಾಗಾಗಿ ಇಬ್ಬರ ನಡುವೆ ಉತ್ತಮ ಒಡನಾಟವಿದೆ. ತೆರೆಯ ಹಿಂದೆ ಕೂಡ ತಂದೆ ಮತ್ತು ಮಗಳಂತೆಯೇ ಬಾಂಧವ್ಯ ಹೊಂದಿದ್ದಾರೆ. ಹಾಗಾಗಿ ನಟಿಯ ಮೇಲೆ ನಂದಮೂರಿ ಬಾಲಕೃಷ್ಣಗೆ ವಿಶೇಷ ಪ್ರೀತಿಯಿದೆ.
Advertisement
ಅಂದಹಾಗೆ, ಡಿ.5ರಂದು ತೆರೆಕಂಡ ‘ಪುಷ್ಪ 2’ ಸಿನಿಮಾದಲ್ಲಿ ನಟಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಇನ್ನೂ ನಿತಿನ್ ಜೊತೆಗಿನ ಶ್ರೀಲೀಲಾ ನಟನೆಯ ‘ರಾಬಿನ್‌ಹುಡ್’ ಸಿನಿಮಾ ಡಿ.25ರಂದು ರಿಲೀಸ್‌ಗೆ ಸಜ್ಜಾಗಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ.