ರಶ್ಮಿಕಾ ಮಂದಣ್ಣಗೆ ಬಿಟ್ಟುಕೊಟ್ಟ ಆ ಚಾನ್ಸ್‌ನಿಂದ ಸ್ಟಾರ್ ಪಟ್ಟ ಕಳೆದುಕೊಂಡ್ರಾ ಶ್ರೀಲೀಲಾ?

Public TV
2 Min Read
sreeleela 1 2

ಚಿತ್ರರಂಗದಲ್ಲಿ ನ್ಯಾಶನಲ್ ಕ್ರಶ್ ಆಗಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ದು ಮಾಡ್ತಿದ್ದಾರೆ. ಕೊಡಗಿನ ಕುವರಿಯ ಕೈಯಲ್ಲಿ ಅರ್ಧ ಡಜನ್ ಸಿನಿಮಾ ಇದ್ರೂ ನಟಿಯ ಮೇಲಿರುವ ಕ್ರೇಜ್ ಅಭಿಮಾನಿಗಳಿಗೆ ಕಮ್ಮಿಯಾಗಿಲ್ಲ. ಹೀಗಿರುವಾಗ ರಶ್ಮಿಕಾ ಮತ್ತು ಶ್ರೀಲೀಲಾ (Sreeleela) ಬಗ್ಗೆ ಹೊಸ ವಿಚಾರವೊಂದು ಚರ್ಚೆಯಾಗುತ್ತಿದೆ. ಶ್ರೀಲೀಲಾ, ಚಲೋ ಸಿನಿಮಾದ ಆಫರ್ ಬಿಟ್ಟು ಕೊಟ್ಟು ನ್ಯಾಶನಲ್ ಕ್ರಶ್ ಪಟ್ಟ ಬಿಟ್ಟು ಕೊಟ್ರಾ.? ಎಂಬ ವಿಷ್ಯ ಚರ್ಚೆಗೆ ಗ್ರಾಸವಾಗಿದೆ.

sreeleela

ಕನ್ನಡದ ‘ಕಿಸ್’ (Kiss Kannda Film) ಬೆಡಗಿ ಶ್ರೀಲೀಲಾ ಅವರು ಇಂದು ಟಾಲಿವುಡ್‌ನಲ್ಲಿ ಬ್ಯುಸಿ ನಾಯಕಿಯಾಗಿ ರಶ್ಮಿಕಾಗೆ ಸೆಡ್ಡು ಹೊಡೆಯುತ್ತಿದ್ದಾರೆ. 10ಕ್ಕೂ ಹೆಚ್ಚು ಚಿತ್ರಗಳು ಶ್ರೀಲೀಲಾ ಕೈಯಲ್ಲಿದೆ. ರಶ್ಮಿಕಾ ಕೈಯಲ್ಲಿ 3ರಿಂದ 4 ಸಿನಿಮಾಯಿದೆ. ಆದ್ರೂ ಶ್ರೀಲೀಲಾಗೆ ಸ್ಟಾರ್ ಪಟ್ಟ, ನ್ಯಾಶನಲ್ ಕ್ರಶ್ ಪಟ್ಟ ಸಿಗ್ತಿಲ್ಲ ಯಾಕೆ ಎಂಬ ಚರ್ಚೆ ಶುರುವಾಗಿದೆ. ಶ್ರೀಲೀಲಾ, ಗೋಲ್ಡನ್ ಆಫರ್ ಮಿಸ್ ಮಾಡಿಕೊಂಡಿದ್ದರ ಬಗ್ಗೆ ಚರ್ಚೆಯಾಗುತ್ತಿದೆ.

sreeleela

‘ಚಲೋ’ (Challo)ಸಿನಿಮಾದ ಹೀರೊ ನಾಗಶೌರ್ಯ (Nagashaurya) ಇತ್ತೀಚಿನ ಸಂದರ್ಶನದಲ್ಲಿ ರಶ್ಮಿಕಾಗೂ ಮುನ್ನ ಚಿತ್ರತಂಡ ಶ್ರೀಲೀಲಾರನ್ನು ಸಂಪರ್ಕ ಮಾಡಿತ್ತು. ಆದರೆ, ಶ್ರೀಲೀಲಾ ಕಾರಣಾಂತರಗಳಿಂದ ಈ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರು. ಅವರ ಸ್ಥಾನಕ್ಕೆ ಕನ್ನಡದ ಮತ್ತೊಬ್ಬ ನಟಿ ರಶ್ಮಿಕಾ ಮಂದಣ್ಣರನ್ನು ಆಯ್ಕೆ ಮಾಡಲಾಯ್ತು ಎಂದಿದ್ದಾರೆ. ಈ ಹೇಳಿಕೆ ಬಳಿಕ ಶ್ರೀಲೀಲಾ ಬಿಟ್ಟುಕೊಟ್ಟ ಗೋಲ್ಡನ್ ಚಾನ್ಸ್ ಬಗ್ಗೆ ಅನೇಕರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ ಪೂಜಾ ಭಟ್

chalo

‘ಚಲೋ’ ಸಿನಿಮಾ ತೆರೆಕಂಡ ಮೂರು ವರ್ಷಗಳ ಬಳಿಕ ಟಾಲಿವುಡ್‌ಗೆ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದರು. ‘ಪೆಳ್ಳಿ ಸಂದಡಿ’ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಈಗ ಶ್ರೀಲೀಲಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೈಯಲ್ಲಿ ಬರೋಬ್ಬರಿ 10ಕ್ಕೂ ಹೆಚ್ಚು ಸಿನಿಮಾಗಳಿವೆ.

ರಶ್ಮಿಕಾ ಮಂದಣ್ಣ ‘ಪುಷ್ಪ’ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಪ್ಯಾನ್ ಇಂಡಿಯಾ ಸ್ಟಾರ್ ಆಗ್ಬಿಟ್ರು. ತಕ್ಷಣಕ್ಕೆ ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇಲ್ಲಿಂದ ರಶ್ಮಿಕಾ ತೆಲುಗು ಸಿನಿಮಾಗಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ‘ಪುಷ್ಪ 2’ ರಶ್ಮಿಕಾ ಕೈಯಲ್ಲಿರೋ ಏಕೈಕ ತೆಲುಗು ಬಿಗ್ ಬಜೆಟ್ ಸಿನಿಮಾ. ಆದರೂ ಶ್ರೀವಲ್ಲಿ ಮೇಲಿನ ಕ್ರೇಜ್ ಕಮ್ಮಿಯಾಗಿಲ್ಲ. ರಶ್ಮಿಕಾಗೆ ಅರಸಿ ಬರುತ್ತಿದ್ದ ಪಾತ್ರಗಳು ಈಗ ಶ್ರೀಲೀಲಾ ಆಫರ್ ಸಿಗುತ್ತಿದೆ. ಆದ್ರೂ ರಶ್ಮಿಕಾ ಸ್ಥಾನ ಭದ್ರವಾಗಿದೆ. ಸ್ಟಾರ್ ಹೀರೋಗಳಿಗೆ ನಾಯಕಿಯಾಗಿ ಮಿಂಚ್ತಿರೋ ಶ್ರೀಲೀಲಾ ಲಕ್ ಹೇಗೆಲ್ಲಾ ಬದಲಾಗಬಹುದು ಎಂದು ಮುಂದಿನ ದಿನಗಳವರೆಗೂ ಕಾಯಬೇಕಿದೆ.

Share This Article