ಕನ್ನಡದ ನಟಿ ಶ್ರೀಲೀಲಾ (Sreeleela) ಇದೀಗ ಟಾಲಿವುಡ್‌ನಲ್ಲಿ (Tollywood) ಬಹುಬೇಡಿಕೆಯ ನಟಿಯಾಗಿದ್ದಾರೆ. ಸಕ್ಸಸ್‌ಗಾಗಿ ರಶ್ಮಿಕಾ ಮಂದಣ್ಣ (Rashmika Mandanna) ಹಾದಿಯಲ್ಲಿ ನಟಿ ಕೂಡ ಹೆಜ್ಜೆ ಇಡ್ತಿದ್ದಾರೆ. ಇದೀಗ ಸೂಪರ್ ಸ್ಟಾರ್ ಬಾಲಯ್ಯ ಪುತ್ರನಿಗೆ ‘ಕಿಸ್’ ನಟಿ ಹೀರೋಯಿನ್ ಆಗಿದ್ದಾರೆ. ಇದನ್ನೂ ಓದಿ:ಡಾರ್ಲಿಂಗ್ ಜಾಗಕ್ಕೆ ಬಂದ ನಟ ರಾಕ್ಷಸ: ಹಲಗಲಿ ಚಿತ್ರಕ್ಕೆ ಧನಂಜಯ್ ಹೀರೋ
ತೆಲುಗಿನ ಜೊತೆ ತಮಿಳಿನಲ್ಲಿ ನಟಿಸುವ ಅವಕಾಶ ಸಿಕ್ತಿದೆ. ಬಾಲಿವುಡ್‌ನಿಂದ ಕೂಡ ಬುಲಾವ್ ಬಂದಿದೆ. ಇದರ ನಡುವೆ ಬಾಲಯ್ಯ ಪುತ್ರ ಮೋಕ್ಷಜ್ಞ (Mokshagna) ಬೆಳ್ಳಿಪರದೆಯಲ್ಲಿ ನಾಯಕ ನಟನಾಗಿ ಮಿಂಚಲು ವೇದಿಕೆ ಕೂಡ ಸಿದ್ಧವಾಗಿದೆ. ನಾಯಕನಾಗಿ ಪಳಗಲು ಏನೆಲ್ಲಾ ತಯಾರಿ ಬೇಕೋ ಅದನ್ನೇಲ್ಲಾ ಮಾಡಿಕೊಂಡೇ ಅಖಾಡಕ್ಕೆ ಇಳಿಯುತ್ತಿದ್ದಾರೆ. ಬಾಲಯ್ಯ ಮಗನ ಚೊಚ್ಚಲ ಚಿತ್ರಕ್ಕೆ ಪ್ರತಿಭಾನ್ವಿತ ನಟಿ ಶ್ರೀಲೀಲಾನೇ ಸೂಕ್ತ ಎಂದು ನಟಿಗೆ ಆಫರ್ ಕೊಡಲಾಗಿದೆ.
ಮೊದಲ ಸಿನಿಮಾವಾಗಿರುವ ಕಾರಣ, ಉತ್ತಮ ಕಥೆ ಪ್ರತಿಷ್ಟಿತ ನಿರ್ಮಾಣ ಸಂಸ್ಥೆಯಡಿ ಮೋಕ್ಷಜ್ಷ ಲಾಂಚ್ ಆಗ್ತಿದ್ದಾರೆ. ‘ಭಗವಂತ ಕೇಸರಿ’ (Bhagawantha Kesari) ಸಿನಿಮಾದಲ್ಲಿ ಶ್ರೀಲೀಲಾ ಅವರು ಬಾಲಯ್ಯ ಮಗಳ ಪಾತ್ರದಲ್ಲಿ ನಟಿಸಿದ್ದರು. ಆಗಲೇ ನಟಿಗೆ ನಟನೆಯ ಮೇಲಿರುವ ಶ್ರದ್ಧೆ ನೋಡಿ ಈಕೆಯೇ ಸೂಕ್ತ ಎಂದು ಮಗನ ಚಿತ್ರಕ್ಕೆ ನಾಯಕಿಯಾಗಿ ಬಾಲಯ್ಯ ಸೂಚಿಸಿದ್ದಾರೆ ಎನ್ನಲಾಗಿದೆ. ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಬೇಕಿದೆ.
ಇದೀಗ ನಿತಿನ್ ಜೊತೆ ‘ರಾಬಿನ್‌ಹುಡ್’ (Robinhood) ಸಿನಿಮಾ ಮಾಡುತ್ತಿರೋದು ಅಧಿಕೃತ ಘೋಷಣೆ ಆಗಿದೆ. ರವಿತೇಜ ಜೊತೆ ಸಿನಿಮಾಗೆ ಚಾಲನೆ ಸಿಕ್ಕಿದೆ. ಪವನ್ ಕಲ್ಯಾಣ್ ಜೊತೆಗಿನ ‘ಉಸ್ತಾದ್ ಭಗತ್ ಸಿಂಗ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದ ‘ಜ್ಯೂನಿಯರ್’ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಲು ಸಿದ್ಧತೆ ಮಾಡಿಕೊಳ್ತಿದೆ ಚಿತ್ರತಂಡ.
ಅದಷ್ಟೇ ಅಲ್ಲ, ತಮಿಳಿನ ಅಜಿತ್ ಕುಮಾರ್ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗೂ ಶ್ರೀಲೀಲಾ ನಾಯಕಿ ಎನ್ನಲಾಗಿದೆ. ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ನಟನೆಯ ಹೊಸ ಸಿನಿಮಾಗೂ ಇವರೇ ಹೀರೋಯಿನ್ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ನಲ್ಲಿ ಕಿಸ್ ನಟಿಗೆ ಚಿತ್ರರಂಗದಲ್ಲಿ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗೋದು ಗ್ಯಾರಂಟಿ.