ಹೊಸ ಫೋಟೋಶೂಟ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ಶ್ರೀಲೀಲಾ

Public TV
1 Min Read
sreeleela

‘ಕಿಸ್’ ಬೆಡಗಿ ಶ್ರೀಲೀಲಾ (Sreeleela) ಸದ್ಯ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಸದ್ದು ಮಾಡುತ್ತಿರುವ ಶ್ರೀಲೀಲಾ ಹೊಸ ಫೋಟೋಶೂಟ್‌ನಿಂದ ಸದ್ದು ಮಾಡುತ್ತಿದ್ದಾರೆ.

sreeleela 6

ಲೈಟ್ ಬಣ್ಣದ ಡ್ರೆಸ್‌ನಲ್ಲಿ ನಟಿ ಅಪ್ಸರೆಯಂತೆ ಕಂಗೊಳಿಸಿದ್ದಾರೆ. ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ನಟಿ ಪೋಸ್ ನೀಡಿದ್ದಾರೆ. ನಟಿಯ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಪ್ಸರೆಯಂತೆ ಮಿಂಚಿರುವ ಶ್ರೀಲೀಲಾರನ್ನು ನೆಟ್ಟಿಗರು ಹಾಡಿಹೊಗಳುತ್ತಿದ್ದಾರೆ.

sreeleela 3

ತೆಲುಗಿನಲ್ಲಿ ‘ಪೆಳ್ಳಿ ಸಂದಡಿ’ ಸಿನಿಮಾದ ಮೂಲಕ ನಟಿ ಎಂಟ್ರಿ ಕೊಟ್ಟರು. ಬಳಿಕ ‘ಧಮಾಕ’ (Dhamaka) ಚಿತ್ರದಿಂದ ಅವರಿಗೆ ಯಶಸ್ಸು ಸಿಕ್ಕಿತ್ತು. ಅಲ್ಲಿಂದ ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಸಿಕ್ಕಿದ್ರು ಹೇಳಿಕೊಳ್ಳುವಂತ ಬ್ರೇಕ್ ಸಿಗಲಿಲ್ಲ. ಹಾಗಂತ ಅವರಿಗೆ ಬೇಡಿಕೆಯೇನು ಕಮ್ಮಿಯಾಗಲಿಲ್ಲ.

sreeleela 4

ಕಳೆದ ವರ್ಷ ತೆರೆಕಂಡ ‘ಭಗವಂತ ಕೇಸರಿ’, ಗುಂಟೂರು ಖಾರಂ ಚಿತ್ರದ ಅಭಿನಯ ಮತ್ತು ಶ್ರೀಲೀಲಾ ಡ್ಯಾನ್ಸ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಇದನ್ನೂ ಓದಿ:ಕಿರುತೆರೆ ನಟ ವರುಣ್ ಆರಾಧ್ಯ ವಿರುದ್ಧ FIR ದಾಖಲು

sreeleela 8

ಇನ್ನೂ ಪವನ್ ಕಲ್ಯಾಣ್ ಜೊತೆಗಿನ ಸಿನಿಮಾ, ನಿತಿನ್ ಜೊತೆ ರಾಬಿನ್‌ಹುಡ್, ಮಾಸ್ ಮಹಾರಾಜ್ ರವಿತೇಜ ಜೊತೆಗೆ ಹೊಸ ಚಿತ್ರ ಸೇರಿದಂತೆ ಹಲವು ಸಿನಿಮಾಗಳನ್ನು ನಟಿ ಒಪ್ಪಿಕೊಂಡಿದ್ದಾರೆ.

sreeleela 9

ತೆಲುಗು ಮಾತ್ರವಲ್ಲ, ಇದೀಗ ಬಾಲಿವುಡ್‌ಗೂ ಕೂಡ ಪಾದಾರ್ಪಣೆ ಮಾಡೋಕೆ ರೆಡಿಯಾಗಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾಗೆ ನಾಯಕಿಯಾಗಿ ನಟಿಸಲು ಶ್ರೀಲೀಲಾಗೆ ಅವಕಾಶ ಸಿಕ್ಕಿದೆ.

sreeleela 5

ಅಂದಹಾಗೆ, ಬೆಂಗಳೂರಿನ ಬೆಡಗಿ ಶ್ರೀಲೀಲಾ ಕನ್ನಡದ ‘ಕಿಸ್’ (Kiss Kannada) ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಭರಾಟೆ, ಬೈಟು ಲವ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು.

Share This Article