ತೆಲುಗಿನಲ್ಲಿ ಮತ್ತೆ ಶ್ರೀಲೀಲಾ ಧಮಾಕ- ಸ್ಟಾರ್ ನಟನಿಗೆ ‘ಕಿಸ್’ ಬೆಡಗಿ ಜೋಡಿ

Public TV
1 Min Read
sreeleela

ಬೆಂಗಳೂರಿನ ಬೆಡಗಿ ಶ್ರೀಲೀಲಾ (Sreeleela) ಈಗ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಿದ್ದಾರೆ. ಸಾಲು ಸಾಲು ಸಿನಿಮಾಗಳು ಮಕಾಡೆ ಮಲಗಿದ ಬೆನ್ನಲ್ಲೇ ನಟಿ ಸೈಲೆಂಟ್ ಆಗಿದ್ದರು. ಈಗ ಮತ್ತೆ ನಟಿ ಸ್ಟಾರ್ ನಟನಿಗೆ ನಾಯಕಿಯಾಗುವ ಮೂಲಕ ಫ್ಯಾನ್ಸ್‌ಗೆ ಶ್ರೀಲೀಲಾ ಗುಡ್ ನ್ಯೂಸ್ ಕೊಟ್ಟಿದ್ದಾರೆ.

sreeleela 2

‘ಪೆಳ್ಳಿ ಸಂದಡಿ’ ಚಿತ್ರದಿಂದ ತೆಲುಗಿನಲ್ಲಿ ಸಿನಿಮಾ ಕೆರಿಯರ್ ಶುರು ಮಾಡಿದ ಶ್ರೀಲೀಲಾ. ‘ಧಮಾಕ’ (Dhamaka) ಚಿತ್ರದ ಮೂಲಕ ಸಕ್ಸಸ್ ಕಂಡರು. ರವಿತೇಜ (Raviteja) ಮತ್ತು ಕಿಸ್ ನಟಿಯ ಜೋಡಿ ಅಭಿಮಾನಿಗಳಿಗೆ ಹಿಡಿಸಿತ್ತು. ಈಗ ಇದೇ ಜೋಡಿ 2ನೇ ಬಾರಿ ಒಂದಾಗುತ್ತಿದ್ದಾರೆ. ಇದನ್ನೂ ಓದಿ:ಮಲಯಾಳಂ ಖ್ಯಾತ ನಿರ್ದೇಶಕನ ವಿರುದ್ಧ ಅತ್ಯಾಚಾರ ದೂರು ದಾಖಲು

sreeleela 3ಹೊಸ ಸಿನಿಮಾಗಾಗಿ ರವಿತೇಜ ಜೊತೆ ನಟಿ ಕೈಜೋಡಿಸಿದ್ದಾರೆ. ಗೋಪಿಚಂದ್ ಮಲಿನೇನಿ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಶ್ರೀಲೀಲಾ ಕೂಡ ಕಥೆ ಕೇಳಿ ಓಕೆ ಎಂದಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ.

‘ಗುಂಟೂರು ಖಾರಂ’ ಸಿನಿಮಾ ಬಳಿಕ ನಟಿ ಓದಿನತ್ತ ಗಮನ ನೀಡಿದ್ದರು. ಈಗ ಗ್ಯಾಪ್‌ ನ ನಂತರ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಮತ್ತೆ ಯಶಸ್ಸು ನಟಿ ಪಾಲಾಗುತ್ತಾ ಕಾದುನೋಡಬೇಕಿದೆ.

Share This Article