ಕನ್ನಡತಿ ಶ್ರೀಲೀಲಾ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಿದ ಮೇಲೆ ಬೇಡಿಕೆ ಹೆಚ್ಚಾಗಿದೆ. ಸದ್ಯ ಕರಾವಳಿ ನಟಿ ಪೂಜಾ ಹೆಗ್ಡೆಗೆ (Pooja Hegde) ಠಕ್ಕರ್ ಕೊಟ್ಟು ಶ್ರೀಲೀಲಾ ಬಿಗ್ ಆಫರ್‌ವೊಂದನ್ನು ಬಾಚಿಕೊಂಡಿದ್ದಾರೆ. ಸಮಂತಾ ಮಾಜಿ ಪತಿ ನಾಗಚೈತನ್ಯ ಸಿನಿಮಾಗೆ ನಾಯಕಿಯಾಗಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಪಿಎಂ ಮೋದಿರನ್ನು ಭೇಟಿಯಾದ ಕರೀನಾ ಕಪೂರ್ ಕುಟುಂಬ
Advertisement
ಟಾಲಿವುಡ್‌ನಲ್ಲಿ ನಟನೆ, ಡ್ಯಾನ್ಸ್, ಬ್ಯೂಟಿ ಮೂಲಕ ಎಲ್ಲರ ಮನಗೆದ್ದಿರುವ ಸುಂದರಿ ಶ್ರೀಲೀಲಾ ಸಾಲು ಸಾಲು ಅವಕಾಶಗಳು ಅರಸಿ ಬರುತ್ತಿವೆ. ನಾಗಚೈತನ್ಯ (Naga Chaitanya) ನಟನೆಯ 24ನೇ ಸಿನಿಮಾಗೆ ಪೂಜಾ ಹೆಗ್ಡೆರನ್ನು ಆಯ್ಕೆ ಮಾಡಿದೆ ಎಂಬ ಸುದ್ದಿ ಇತ್ತು. ಈಗ ಪೂಜಾರನ್ನು ನಾಯಕಿ ಪಾತ್ರಕ್ಕೆ ಕೈಬಿಡಲಾಗಿದ್ದು, ಶ್ರೀಲೀಲಾರನ್ನು ತಂಡ ಫೈನಲ್ ಮಾಡಿದೆ ಎನ್ನಲಾಗಿದೆ. ಚಿತ್ರತಂಡದಿಂದ ಈ ಕುರಿತು ಅಧಿಕೃತ ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ.
Advertisement
Advertisement
ಇನ್ನೂ ‘ಪುಷ್ಪ 2’ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಜೊತೆ ಶ್ರೀಲೀಲಾ ಡ್ಯಾನ್ಸ್ ಮಾಡುವ ಮೂಲಕ ಹೈಪ್ ಕ್ರಿಯೆಟ್ ಆಗಿದೆ. ಜೊತೆಗೆ ನಿತಿನ್ ಜೊತೆಗಿನ ‘ರಾಬಿನ್‌ಹುಡ್’ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ.