ಆಕ್ಟರ್‌ ಆಗಿರೋ ಶ್ರೀಲೀಲಾ ಮೆಡಿಕಲ್‌ ಓದಿದ್ದೇಕೆ ಗೊತ್ತಾ? ಇಲ್ಲಿದೆ ಸೀಕ್ರೆಟ್

Public TV
1 Min Read
sreeleela 3

ಟಾಲಿವುಡ್‌ನಲ್ಲಿ(Tollywood) ಶ್ರೀಲೀಲಾ ಮಾಡುತ್ತಿರುವ ಅಬ್ಬರ ಇದೆಯಲ್ಲ. ಅದು ಸುಮ್ಮನೆ ಎಲ್ಲರಿಗೂ ದಕ್ಕುವುದಿಲ್ಲ. ಇದೀಗ ಕಿಸ್ (Kiss) ಬೆಡಗಿ ಅದೊಂದು ರಹಸ್ಯ ಬಿಚ್ಚಿಟ್ಟಿದ್ದಾರೆ. ಸಿನಿಮಾದಲ್ಲಿ ಅವಕಾಶ ಸಿಕ್ಕ ಮೇಲೂ ಯಾಕೆ ಮೆಡಿಕಲ್ ಕಲಿಯಲು ಒದ್ದಾಡಿದರು? ಅದ್ಯಾವ ಕಾರಣಕ್ಕೆ ಡಾಕ್ಟರ್ ಆಗುವುದಕ್ಕೆ ನಿರ್ಧಾರ ಮಾಡಿದರು? ಇಲ್ಲಿದೆ ಮಾಹಿತಿ.

sreeleela 6ಕನ್ನಡದ ಈ ಹುಡುಗಿ ಶ್ರೀಲೀಲಾ(Sreeleela) ಈಗ ಟಾಲಿವುಡ್‌ನ ಸೆನ್ಸೇಶನಲ್ ಸ್ಟಾರ್. ಅಪ್ ಕಮ್ಮಿಂಗ್ ಹೀರೋಯಿನ್ ಪಟ್ಟ ಕಿತ್ತೋಗೆದು ಸ್ಟಾರ್ ಹೀರೋಯಿನ್ ಸಿಂಹಾಸನದಲ್ಲಿ ಕೂಡಲು ಸಜ್ಜಾಗಿದ್ದಾರೆ. ಕೈಯಲ್ಲಿ ಸಾಲು ಸಾಲು ಸಿನಿಮಾ ಇವೆ. ಹೀಗಿದ್ದರೂ ಶ್ರೀಲೀಲಾ ಈ ವರ್ಷದ ಕೊನೆಗೆ ಮೆಡಿಕಲ್ ಪರೀಕ್ಷೆ ಬರೆಯಲಿದ್ದಾರೆ. ಅದಕ್ಕಾಗಿ ಶೂಟಿಂಗ್‌ನಿಂದ ಬಿಡುವು ಪಡೆಯಲಿದ್ದಾರೆ. ಅದಕ್ಕೆ ಕಾರಣ ಏನು ಗೊತ್ತೆ? ಅದು ಶ್ರೀಲೀಲಾ ಅಮ್ಮ ಸ್ವರ್ಣಲತಾ. ಇದನ್ನೂ ಓದಿ:ನಮ್ರತಾ ಜೊತೆ ‘ರಾಜಾ ಶಿವರಾಜ’ ಹಾಡಿಗೆ ಸ್ಟೆಪ್ ಹಾಕಿದ ತುಕಾಲಿ ಸಂತು

ಶ್ರೀಲೀಲಾ ಅಮ್ಮನಿಗೆ (Mother) ಅದೊಮ್ಮೆ ಆರೋಗ್ಯ ತೀವ್ರವಾಗಿ ಕೈ ಕೊಟ್ಟಿತ್ತು. ಪಕ್ಕದಲ್ಲಿದ್ದ ಶ್ರೀಲೀಲಾಗೆ ಏನು ಮಾಡಬೇಕೆಂದು ತೋಚಲಿಲ್ಲ. ಡಾಕ್ಟರ್ ಬರೋವರೆಗೂ ತಾನೊಬ್ಬ ಯುಸ್‌ಲೆಸ್ ಹುಡುಗಿ ಎಂದು ಫೀಲ್ ಆಯಿತು. ಅಂದೇ ಮೆಡಿಕಲ್ ಕಲಿಯಲು ನಿರ್ಧರಿಸಿದರು. ಕಿಸ್ ಸಿನಿಮಾ ಶೂಟಿಂಗ್ ಬಿಡುವಿನ ವೇಳೆಯಲ್ಲಿ ಆಸ್ಪತ್ರೆಗೆ ಹಾಜರಾದರು. ವಾರಕ್ಕೆ ಇಪ್ಪತ್ತು ಗಂಟೆ ಟ್ರೇನಿಂಗ್ ಪಡೆದರು. ಈಗ ಡಾಕ್ಟರ್ ಶ್ರೀಲೀಲಾ ಆಗುವ ಹಾದಿಯಲ್ಲಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article