ಬಾಲಿವುಡ್‌ಗೆ ಹಾರಿದ ಕನ್ನಡದ ಹುಡುಗಿ ಸೋನಲ್: ಸರೋಜಿನಿ ದೇವಿ ನಾಯ್ಡು ಆದ ಕರಾವಳಿ ಬೆಡಗಿ

Public TV
2 Min Read
FotoJet 116

ರಾವಳಿ ಚೆಲುವೆ ಸೋನಲ್ ಮೊಂತೆರೋ ತಮ್ಮ ಅಭಿಮಾನಿಗಳು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅಚ್ಚರಿ ಎನ್ನುವಂತೆ ಅವರು ಬಾಲಿವುಡ್ ಗೆ ಹಾರಿದ್ದು, ಅಲ್ಲಿ ಭಾರತದ ಕೋಗಿಲೆ ಸರೋಜಿನಿ ನಾಯ್ಡು ಅವರ ಜೀವನಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈವರೆಗೂ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ವಿನಯ್ ಚಂದ್ರ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಚಿತ್ರದ ಫಸ್ಟ್ ಲುಕ್ ಇದೀಗ ರಿಲೀಸ್ ಆಗಿದೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

sonal

ಸೋನಲ್ ಈ ಸಿನಿಮಾಲ್ಲಿ ಶಾಂತಿಪ್ರಿಯ ಹೆಸರಿನ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಫಸ್ಟ್ ಲುಕ್ ಪೋಸ್ಟರ್ ಅನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಸರೋಜಿನಿ ನಾಯ್ಡು ಯುವತಿ ಆಗಿದ್ದಾಗಿನ ಪಾತ್ರ ಎಂದು ಹೇಳಲಾಗುತ್ತಿದೆ. “ಬಾಲಿವುಡ್ ನಲ್ಲಿ ಸಿನಿಮಾ ಮಾಡಬೇಕು ಎನ್ನುವುದು ನನ್ನ ಕನಸಾಗಿತ್ತು. ಅದು ಈ ಸಿನಿಮಾದ ಮೂಲಕ ಈಡೇರಿದ್ದು ಖುಷಿ ತಂದಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

sonal monteiro c

ಇದು ಬಾಲಿವುಡ್ ಸಿನಿಮಾವಾಗಿದ್ದರೂ, ಕರ್ನಾಟಕದಲ್ಲೂ ಶೂಟಿಂಗ್ ಮಾಡುವ ಪ್ಲ್ಯಾನ್ ಮಾಡಿದೆ ಚಿತ್ರತಂಡ. ಬೆಂಗಳೂರು, ಕೊಡಗಿನಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ಅಲ್ಲದೇ ಮುಂಬೈ ಮತ್ತು ಉತ್ತರ ಪ್ರದೇಶದ ಕೆಲವು ಸ್ಥಳಗಳಲ್ಲಿ ಶೂಟಿಂಗ್ ಮಾಡುವ ಪ್ಲ್ಯಾನ್ ಮಾಡಿದ್ದಾರಂತೆ ನಿರ್ದೇಶಕ ವಿನ್ಯ ಚಂದ್ರ. ಅಂದಹಾಗೆ ಈ ಸಿನಿಮಾ ಜೂನ್ ನಲ್ಲಿ ಆರಂಭವಾಗಲಿದೆ. ಇದನ್ನೂ ಓದಿ: ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್

sonal monteiro

ಸದ್ಯ ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾದಲ್ಲಿ ಸೋನಲ್ ನಟಿಸುತ್ತಿದ್ದು, ಯಶಸ್ ಸೂರ್ಯನ ಜೋಡಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ನೆನ್ನೆಯಷ್ಟೇ ಈ ಸಿನಿಮಾದ ಎರಡನೇ ಹಂತದ ಶೂಟಿಂಗ್ ಬಾದಾಮಿಯಲ್ಲಿ ಮುಗಿದಿದೆ. ಪ್ರಮುಖ ಹಾಡೊಂದರ ಚಿತ್ರೀಕರಣ ಮಾಡಿದ್ದಾರೆ ಯೋಗರಾಜ್ ಭಟ್. ಇದೇ ಭಟ್ಟರ ಪಂಚತಂತ್ರ ಸಿನಿಮಾದಿಂದ ಸೋನಲ್ ಕನ್ನಡ ಸಿನಿಮಾ ರಂಗಕ್ಕೆ ಪರಿಚಯವಾದವರು. ಸಿನಿಮಾ ರಂಗಕ್ಕೆ ಬಂದಿದ್ದು ಕೋಸ್ಟಲ್ ವುಡ್ ನಿಂದ ಎನ್ನುವುದು ವಿಶೇಷ. ಇದನ್ನೂ ಓದಿ: ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

sonal monteiro b

ಶಂಭೋ ಶಿವಶಂಕರ್, ಬುದ್ದಿವಂತ 2, ಪದವಿಪೂರ್ವ, ಬನಾರಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸೋನಲ್ ನಟಿಸಿದ್ದು, ಇವಿನ್ನೂ ಬಿಡುಗಡೆ ಆಗಬೇಕಾದ ಸಿನಿಮಾಗಳಾಗಿವೆ.

Share This Article
Leave a Comment

Leave a Reply

Your email address will not be published. Required fields are marked *