ಬಾಲಿವುಡ್‌ನ ಖ್ಯಾತ ನಟ ಶತ್ರುಘ್ನ ಸಿನ್ಹಾ (Shatrughan Sinha) ಪುತ್ರಿ ಸೋನಾಕ್ಷಿ ಸಿನ್ಹಾ (Sonakshi Sinha) ಜೂನ್ 23ರಂದು ಬಹುಕಾಲದ ಗೆಳೆಯ ಝಹೀರ್ (Zaheer Iqbal) ಜೊತೆ ಸಿಂಪಲ್ ಆಗಿ ಮದುವೆ ಆಗಿದ್ದಾರೆ. ಮದುವೆ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಸಮಂತಾ ಜೊತೆ ಶಾರುಖ್ ಖಾನ್ ರೊಮ್ಯಾನ್ಸ್
7 ವರ್ಷಗಳ ಹಿಂದೆ 23-06-2017ರಂದು ಪರಸ್ಪರ ನಾವು ಪರಿಶುದ್ಧ ಪ್ರೀತಿಯನ್ನು ಕಂಡೆವು ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದ್ದೇವು. ಈಗ ಅದೇ ಪ್ರೀತಿ ನಮಗೆ ಸವಾಲುಗಳನ್ನು ಎದುರಿಸಲು ದಾರಿ ತೋರಿಸಿದೆ. ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ ಎಂದು ಸೋನಾಕ್ಷಿ ಮತ್ತು ಝಹೀರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಎರಡು ಕುಟುಂಬದ ಮತ್ತು ದೇವರ ಹಾರೈಕೆಯಿಂದ ನಾವು ಇಂದು ಸತಿ- ಪತಿ ಆಗಿದ್ದೇವೆ ಎಂದು ಕೂಡ ಬರೆದುಕೊಂಡಿದ್ದಾರೆ. ಮಗಳ ಮದುವೆಯ ವೇಳೆ, ಸೋನಾಕ್ಷಿ ಜೊತೆ ನಿಂತು ತಂದೆ ಶತ್ರುಘ್ನ ಸಂಭ್ರಮಿಸಿದ್ದಾರೆ. ಈ ಮೂಲಕ ಮಗಳ ಮದುವೆ ಅವರಿಗೆ ಇಷ್ಟವಿಲ್ಲ ಎಂಬ ಗಾಸಿಪ್‌ಗೆ ಬ್ರೇಕ್ ಹಾಕಿದ್ದಾರೆ.
ಅಂದಹಾಗೆ, ಸೋನಾಕ್ಷಿ ಮತ್ತು ಝಹೀರ್ ಹಿಂದೂ ಅಥವಾ ಇಸ್ಲಾಂ ಸಂಪ್ರದಾಯದಂತೆ ಮದುವೆಯಾಗದೇ ತಮ್ಮ ಮದುವೆಯನ್ನು ಕಾನೂನಾತ್ಮಕವಾಗಿ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಈ ವೇಳೆ, ಕ್ರೀಮ್ ಬಣ್ಣದ ಉಡುಗೆಯಲ್ಲಿ ನವಜೋಡಿ ಮಿಂಚಿದ್ದಾರೆ. ಸೋನಾಕ್ಷಿ ದಂಪತಿಗೆ ಅಭಿಮಾನಿಗಳು ಶುಭಕೋರಿದ್ದಾರೆ.