ಸೌತ್ ನಟಿ ಸಮಂತಾ (Samantha) ಅವರ ಮಾಜಿ ಪತಿ ನಾಗಚೈತನ್ಯ (Nagachaitanya) ಜೊತೆ ಶೋಭಿತಾ (Sobhita) ಎಂಗೇಜ್‌ಮೆಂಟ್ ಆದ್ಮೇಲೆ ಭಾರೀ ಸುದ್ದಿಯಲ್ಲಿದ್ದಾರೆ. ಈ ಬೆನ್ನಲ್ಲೇ ಬಂಪರ್ ಆಫರ್‌ವೊಂದನ್ನು ಬಾಚಿಕೊಂಡಿದ್ದಾರೆ. ಹೊಸ ಚಿತ್ರದಲ್ಲಿ ರಣ್‌ವೀರ್ ಸಿಂಗ್ ಜೊತೆ ನಟಿ ಶೋಭಿತಾ ಹೆಜ್ಜೆ ಹಾಕಲಿದ್ದಾರೆ. ಇದನ್ನೂ ಓದಿ:ಶಾರ್ಟ್ ಡ್ರೆಸ್‌ನಲ್ಲಿ ಕುಣಿದ ರೀಲ್ಸ್ ರಾಣಿ ಸೋನು
ನಾಗಚೈತನ್ಯ ಜೊತೆ ನಿಶ್ಚಿತಾರ್ಥ ಆದ್ಮೇಲೆ ಎಲ್ಲರ ಗಮನ ಶೋಭಿತಾ ಮೇಲಿದೆ. ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗ್ತಿರೋ ನಟಿಗೆ ಈಗ ‘ಡಾನ್ 3’ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಈ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ಶೋಭಿತಾನೇ ಸೂಕ್ತ ಅಂತ ಫರ್ಹಾನ್ ಅಖ್ತರ್ ತಂಡ ನಟಿಯನ್ನು ಸಂಪರ್ಕಿಸಿದೆ.
ಇನ್ನೂ ರಣ್‌ವೀರ್ (Ranveer Singh) ಮತ್ತು ನಾಯಕಿ ಕಿಯಾರಾ (Kiara Advani) ಜೊತೆ ಶೋಭಿತಾಗೂ ಪ್ರಾಮುಖ್ಯತೆ ಇದ್ದು, ಸಾಂಗ್ ಕೂಡ ಪಡ್ಡೆಹುಡುಗರಿಗೆ ಕಿಕ್ ಕೊಡುವಂತಿದೆಯಂತೆ. ಹಾಗಾಗಿ ‘ಡಾನ್ 3’ ಸಿನಿಮಾದ ಭಾಗವಾಗಲು ಶೋಭಿತಾ ಕೂಡ ಓಕೆ ಎಂದಿದ್ದಾರೆ ಎಂಬುದು ಇನ್‌ಸೈಡ್ ಸುದ್ದಿ. ಆದರೆ ಇದು ನಿಜನಾ ಎಂಬುದುನ್ನು ಚಿತ್ರತಂಡವೇ ತಿಳಿಸಬೇಕಿದೆ.
ಇನ್ನೂ ವಿಭಿನ್ನ ಕಥೆಯಲ್ಲಿ ಎಂದೂ ನಟಿಸಿರದ ರೋಲ್‌ನಲ್ಲಿ ರಣ್‌ವೀರ್ ಮತ್ತು ಕಿಯಾರಾ ಕಾಣಿಸಿಕೊಳ್ತಿದ್ದಾರೆ. ಮುಂದಿನ ವರ್ಷ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ.