ಬೆಂಗಳೂರು: ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಖ್ಯಾತಿಯ ಶ್ವೇತಾ ಚೆಂಗಪ್ಪ ಅವರು ತಮ್ಮ ಮಗನ ನಾಮಕರಣವನ್ನು ಅದ್ಧೂರಿಯಾಗಿ ಮಾಡಿದ್ದಾರೆ.
ಶ್ವೇತಾ ಅವರು ತಮ್ಮ ಮಗನಿಗೆ ಜಿಯಾನ್ ಅಯ್ಯಪ್ಪ ಎಂಬ ಹೆಸರಿಟ್ಟಿದ್ದಾರೆ. ಕೊಡಗಿನ ಇಗ್ಗುಟ್ಟಪ್ಪ ದೇವಸ್ಥಾನದಲ್ಲಿ ಮಗನಿಗೆ ನಾಮಕರಣವನ್ನು ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಶ್ವೇತಾ ಕುಟುಂಬದವರು ಮಾತ್ರ ಭಾಗಿಯಾಗಿದ್ದರು. ಮಗನ ನಾಮಕರಣದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕೊಡಗಿನ ಉಡುಪನ್ನು ಧರಿಸಿಕೊಂಡು ಪತಿ ಮತ್ತು ಮಗನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಮಗನಿಗೆ ಇಟ್ಟಿರುವ ಹೆಸರಿನ ಅರ್ಥವನ್ನು ತಿಳಿಸಿದ್ದಾರೆ. ಅಭಿಮಾನಿಗಳು ತಮ್ಮ ಮಗನಿಗೆ ಇಟ್ಟಿರುವ ಹೆಸರಿನ ಅರ್ಥವನ್ನು ಕೇಳಿದ್ದರು. ಹೀಗಾಗಿ ತಮ್ಮ ಪುತ್ರನಿಗೆ ಇಟ್ಟಿರುವ ಹೆಸರಿನ ಅರ್ಥವನ್ನು ತಿಳಿಸಿದ್ದಾರೆ.
ಜಿಯಾನ್ ಎಂದರೆ “ಯಾವಾಗಲೂ ಸಂತೋಷದಿಂದ ಇರುವವರು ಮತ್ತು ಸಂತೋಷವನ್ನು ಹರಡುವ ವ್ಯಕ್ತಿ”. ಅಯ್ಯಪ್ಪ ಎಂಬುದು ಅವರ ಮತ್ತು ಪತಿಯ ಸರ್ ನೇಮ್ ಆಗಿದೆ.
https://www.instagram.com/p/B8GhHQ8DMkw/
ಶ್ವೇತಾ ಅವರು ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇತ್ತೀಚೆಗೆ ಮಗನಿಗೆ ಕೊಡಗಿನ ಉಡುಪನ್ನು ಧರಿಸಿ ಫೋಟೋಶೂಟ್ ಮಾಡಿದ್ದರು.
ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಕಿರುತೆರೆಯಲ್ಲಿ ಸಾಕಷ್ಟು ಹೆಸರು ಪಡೆದಿರುವ ಶ್ವೇತಾ ಚಂಗಪ್ಪ ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಪಾತ್ರದ ಮೂಲಕ ಮನೆ ಮಾತಾಗಿದ್ದರು.