ಮಜಾಟಾಕೀಸ್ ರಾಣಿ ಶ್ವೇತಾ ಚೆಂಗಪ್ಪ ಅವರ ಫ್ಯಾಮಿಲಿಗೆ ತುಂಬಾ ಹತ್ತಿರವಾದ ಗೆಳತಿ ಸುಹಾನಿ ದಿವ್ಯ ಗಿರೀಶ್ ಉಕ್ರೇನ್ ನಲ್ಲಿ ಸಿಲುಕಿದ್ದರು. ಹೀಗಾಗಿ ಶ್ವೇತಾ ಕುಟುಂಬ ಆತಂಕದಲ್ಲಿತ್ತು. ಆದರೆ ಯುದ್ಧ ಪ್ರಾರಂಭವಾದ ೧೦ ದಿನಗಳ ನಂತರ ಸುಹಾನಿ ತಾಯ್ನಾಡಿಗೆ ಮರಳಿದ್ದು, ಇಡೀ ಕುಟುಂಬಕ್ಕೆ ಸಂತಸ ತಂದಿದೆ.
Advertisement
ಉಕ್ರೇನ್ ನಿಂದ ಬಂದ ಗೆಳತಿಯ ಬಗ್ಗೆ ಶ್ವೇತಾ ಭಾವನಾತ್ಮಕವಾಗಿ ಬರೆದುಕೊಂಡಿದ್ದು, ನಮ್ಮ ಲಿಟಲ್ ಹನಿ ಸುಹಾನಿ ತಾಯ್ನಾಡಿಗೆ ಮತ್ತೆ ಮರಳಿದ್ದಾಳೆ. ಈ ೧೦ ದಿನಗಳಲ್ಲಿ ನಾವೆಲ್ಲರೂ ತುಂಬಾ ಆಘಾತ ಅನುಭವಿಸಿದ್ದೇವೆ. ಅದನ್ನು ವಿವರಿಸಲು ನನಗೆ ಪದಗಳೇ ಸಿಗುತ್ತಿಲ್ಲ. ಕೊನೆಗೂ ನಮ್ಮ ಮನೆಯ ಭವಿಷ್ಯದ ಪುಟ್ಟ ಡಾಕ್ಟರ್ ತನ್ನ ಹೆತ್ತವರ ತೋಳುಗಳಿಗೆ ಮರಳಿದ್ದಾಳೆ. ನನ್ನ ಪ್ರಕಾರ ಸುಹಾನಿ ನೀನು ೧೯ ನೇ ವಯಸ್ಸಿನಲ್ಲಿಯೇ ನಿಜವಾದ ಯೋಧೆ. ನಿದ್ದೆಯಿಲ್ಲದ ರಾತ್ರಿಗಳು, ಫೋನ್ ಕರೆಗೂ ಸಿಗದೆ ನಿನ್ನ ಒದ್ದಾಟ. ಉದ್ವೇಗ, ಒತ್ತಡ, ಯುದ್ಧದ ಆತಂಕ ಎಲ್ಲವನ್ನು ನೆನಪಿಸಿಕೊಂಡರೆ ಈಗಲೂ ಭಯ ಆಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ಉಕ್ರೇನ್ ನಲ್ಲಿ ಸಿಲುಕಿಕೊಂಡ ನಟಿ ಶ್ವೇತಾ ಚೆಂಗಪ್ಪ ಗೆಳತಿ
Advertisement
View this post on Instagram
Advertisement
ಸುಹಾನಿ ಎಷ್ಟು ಕಿಲೋಮೀಟರ್ ನಡೆದಿದ್ದಾಳೆ. ಆಕೆಯ ಧೈರ್ಯವನ್ನು ನೋಡಿದರೆ ಖುಷಿಯಾಗುತ್ತೆ. ಉಕ್ರೇನ್ ಯುದ್ಧದ ಜಾಗದಿಂದ ಹೊರಬರಲು ಒಂದು ದೊಡ್ಡ ಹೆಜ್ಜೆಯನ್ನು ತೆಗೆದುಕೊಂಡು, ತುಂಬಾ ಶ್ರಮದಿಂದ ತನ್ನ ತಾಯ್ನಾಡಿಗೆ ಮರಳಿದ್ದಾಳೆ. ಈ ವೇಳೆ ಸುಹಾನಿ ತುಂಬಾ ಕಷ್ಟ ಅನುಭವಿಸಿದ್ದಾಳೆ. ಯುದ್ಧದಿಂದ ಕೆಲವು ಪ್ರೋಟೋಕಾಲ್ಗಳಿಂದ ಸ್ನೇಹಿತರಿಂದ ಬೇರ್ಪಟ್ಟಿದ್ದಾಳೆ. ಅಪರಿಚಿತರೊಂದಿಗೆ ಉಳಿಯುವುದು, ಜೀವವನ್ನು ಉಳಿಸಿಕೊಳ್ಳಲು ಸಿಕ್ಕ ಆಹಾರ ತಿನ್ನುವುದು. ಒಂದು ಕಡೆಯಿಂದ ಒಂದು ಕಡೆ ಹೋಗುವುದು. ಈ ಎಲ್ಲ ತೊಂದರೆಗಳಿಂದ ನಮ್ಮ ಹನಿ ಈಗ ಮುಕ್ತಳಾಗಿದ್ದಾಳೆ. ಅಂತಿಮವಾಗಿ ಪೋಷಕರ ಬಳಿಗೆ ಹಿಂತಿರುಗಿದ್ದಾಳೆ. ಈ ಎಲ್ಲದಕ್ಕೂ ನಾನು ಸಾಕ್ಷಿಯಾಗಿದ್ದೇನೆ. ನನ್ನ ಪ್ರೀತಿಯ ಹುಡುಗಿಯೇ ನಿನ್ನ ಬಗ್ಗೆ ತುಂಬಾ ಹೆಮ್ಮೆ ಪಡುತ್ತೇನೆ. ನೀನು ನಮ್ಮೆಲ್ಲರನ್ನೂ ಹೆಮ್ಮೆ ಪಡುವಂತೆ ಮಾಡಿದ್ದೀಯ ಎಂದು ಗೆಳತಿಯ ಬಗ್ಗೆ ಶ್ವೇತಾ ಸುದೀರ್ಘವಾಗಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.
Advertisement
ಸುಹಾನಿ ನಿನ್ನ ಚಿಕ್ಕ ಕುಟುಂಬಕ್ಕೆ ಒಳ್ಳೆಯದಾಗಲಿ. ನನ್ನ ಸ್ನೇಹಿತೆಗೊಸ್ಕರ ಪ್ರಾಥನೆ ಮಾಡಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ ಹೇಳುತ್ತೇನೆ. ನನ್ನ ಸ್ನೇಹಿತೆ ಸುಹಾನಿ ಕಷ್ಟದ ಸಮಯದಲ್ಲಿ ಜೊತೆಗಿದ್ದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಲವ್ ಯೂ ಆಲ್ ಎಂದು ಬರೆದು ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆಗೆ ಬರಲಿ ಎಂದು ಕೇಳಿಕೊಂಡಿದ್ದಾರೆ.
ಶ್ವೇತಾ ಚೆಂಗಪ್ಪ ಇನ್ಸ್ಟಾದಲ್ಲಿ ಶೇರ್ ಮಾಡಿರುವ ವೀಡಿಯೋದಲ್ಲಿ ಸುಹಾನಿ ಏರ್ಪೋಟ್ನಿಂದ ಮರಳಿ ಬರುತ್ತಿರುವುದನ್ನು ಸೆರೆ ಹಿಡಿಯಾಲಾಗಿದೆ. ಈ ವೇಳೆ ಶ್ವೇತಾ ಕುಟುಂಬ ಮತ್ತು ಸುಹಾನಿ ಕುಟುಂಬ ಆಕೆಯನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿರುವುದು ಸಹ ರೆಕಾರ್ಡ್ ಆಗಿದೆ. ಕೊನೆಗೆ ಸುಹಾನಿ ಬರುವುದನ್ನು ನೋಡಿದ ಆಕೆಯ ಅಮ್ಮ ಹೋಗಿ ಅತ್ತು ಅಪ್ಪಿಕೊಳ್ಳುತ್ತಾರೆ. ನಂತರ ಶ್ವೇತಾ ಸಹ ಹೋಗಿ ಆಕೆಯನ್ನು ಅಪ್ಪಿಕೊಂಡು ತಾಯ್ನಾಡಿಗೆ ಸ್ವಾಗತ ಎಂದು ಹೇಳುತ್ತಿರುವ ಭಾವನಾತ್ಮಕ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಭಾಸ್ಗೆ ಮಿರ್ಚಿ ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ!