ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶುಭ್ರಾ ಅಯ್ಯಪ್ಪ ದಾಂಪತ್ಯ ಜೀವನಕ್ಕೆ ಕಾಲಿಡಲು ತಯಾರಿ ನಡೆಸಿದ್ದಾರೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಶುಭ್ರಾ ಅಯ್ಯಪ್ಪ ಅವರು ತಮ್ಮ ಮದುವೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಹುಡುಗನ ಪ್ರೀತಿಯನ್ನು ಒಪ್ಪಿಕೊಂಡಿರುವುದಾಗಿ ಶುಭ್ರಾ ಅಯ್ಯಪ್ಪ ಅವರು ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಗಳ ವಿಚಾರದಲ್ಲಿ ನಮ್ಮ ನಿರ್ಧಾರ, ಮನವಿ ಮೊದಲಿನಂತೆಯೇ ಇರಲಿದೆ: ಅನುಷ್ಕಾ ಶರ್ಮಾ
ಶುಭ್ರಾ ಅವರ ಕೈ ಹಿಡಿಯುತ್ತಿರುವ ಹುಡುಗನ ಹೆಸರು ವಿಶಾಲ್ ಶಿವಪ್ಪ. ಭಾವಿ ಪತಿಯ ಫೋಟೋ ಹಂಚಿಕೊಂಡ ನಟಿ ನಾನು ನನ್ನ ಪಾಂಡಾಗೆ ಎಸ್ ಎಂದು ಹೇಳಿದೆ ಎಂದು ಬರೆದುಕೊಂಡು ಹಾರ್ಟ್ ಮತ್ತು ಉಂಗುರದ ಸಿಂಬಲ್ ಹಾಕಿದ್ದಾರೆ. ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲವಾಗಿ ಶುಭ್ರಾ ಅಯ್ಯಪ್ಪ ಅವರಿಗೆ ಶುಭ ಕೋರುತ್ತಿದ್ದಾರೆ. ಇದನ್ನೂ ಓದಿ: ಐಪಿಎಲ್ ಹರಾಜಿಗೆ ಆಟಗಾರರ ಪಟ್ಟಿ ಪ್ರಕಟ – ಶಾರೂಕ್ ಖಾನ್, ಅವೇಶ್ ಖಾನ್ ಬೆಲೆ ಕಂಡು ದಂಗಾದ ಕ್ರಿಕೆಟ್ ಪ್ರಿಯರು
View this post on Instagram
ಶುಭ್ರಾ ಅಯ್ಯಪ್ಪ ಅವರ ರೀತಿಯಲ್ಲೇ, ವಿಶಾಲ್ ಶಿವಪ್ಪ ಅವರು ಕೂಡ ಫೋಟೊ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರೀತಿ ಪೂರ್ವಕ ಸಾಲುಗಳನ್ನು ಬರೆದು ಶುಭ್ರಾ ಅಯ್ಯಪ್ಪ ಅವರಿಗೆ ಟ್ಯಾಗ್ ಮಾಡಿದ್ದಾರೆ. ಪ್ರೀತಿಯಿಂದ ತುಂಬಿದ ಜೀವನಕ್ಕಾಗಿ ಹಾಗೂ ನಮ್ಮ ಕನಸುಗಳನ್ನು ಮುಂದಕ್ಕೆ ಸಾಗಿಸಲು ದೇವರು ನಮ್ಮನ್ನು ಎಲ್ಲಾ ರೀತಿಯಲ್ಲಿ ಆಶೀರ್ವದಿಸಲಿ. ನನ್ನ ಕನಸಿನ ಹುಡುಗಿ ಪ್ರೀತಿಗೆ ಒಪ್ಪಿಗೆ ಸೂಚಿಸಿದಳು ಎಂದು ವಿಶಾಲ್ ಶಿವಪ್ಪ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಮದುವೆ ಯಾವಾಗ ಎಂದು ಎಲ್ಲರೂ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡುವ ಮೂಲಕ ಪ್ರಶ್ನಿಸಿದ್ದಾರೆ. ಆದರೆ ಈ ಬಗ್ಗೆ ಶುಭ್ರಾ ಅವರು ಸ್ಪಷ್ಟ ಪಡಿಸಿಲ್ಲ.
View this post on Instagram
ಶಿವರಾಜ್ ಕುಮಾರ್ ಅವರು ನಟಿಸಿರುವ ವಜ್ರಕಾಯ ಸಿನಿಮಾದಲ್ಲಿ ನಟಿಸುವ ಮೂಲವಾಗಿ ಸ್ಯಾಂಡಲ್‍ವುಡ್‍ಗೆ ಪರಿಚಯವಾಗಿದ್ದಾರೆ. ಶುಭ್ರಾ ಅಯ್ಯಪ್ಪ ಅವರು ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾತ್ರ ಮಾಡಿದ್ದಾರೆ. ಸಿನಿಮಾಗಿಂತಲೂ ಶುಭ್ರಾ ಅಯ್ಯಪ್ಪ ಅವರು ಮಾಡಲಿಂಗ್ ಪ್ರಪಂಚದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿದ್ದಾರೆ.