ತೆಲುಗಿನ ಖ್ಯಾತ ನಟರ ಜತೆ ತೆರೆ ಹಂಚಿಕೊಳ್ಳುವ ಮೂಲಕ ಬಹುಬೇಡಿಕೆಯ ನಟಿಯಾಗುತ್ತಿದ್ದಾರೆ ಶ್ರುತಿ ಹಾಸನ್. ಸದ್ಯ ಭಾರೀ ಬಜೆಟ್ ಸಿನಿಮಾ ಸಲಾರ್ ದಲ್ಲಿ ಪ್ರಭಾಸ್ ಜತೆ ನಟಿಸಿದ್ದಾರೆ. ಬಾಲಯ್ಯ ಅವರು ಹೊಸ ಚಿತ್ರಕ್ಕೂ ಶ್ರುತಿಯೇ ಹೀರೋಯಿನ್. ಈ ಹಿಂದೆ ಪವನ್ ಕಲ್ಯಾಣ್ ಅವರ ಚಿತ್ರದಲ್ಲೂ ಶ್ರುತಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಇದೀ ಮೆಗಾಸ್ಟಾರ್ ಚಿರಂಜೀವಿ ಅವರ ಹೊಸ ಚಿತ್ರಕ್ಕೂ ಇವರೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ : ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವರ್ಣರಂಜಿತ ತೆರೆ
ಚಿರಂಜೀವಿ ಅವರ ಹೊಸ ಚಿತ್ರಕ್ಕೆ ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಹೆಸರಾಂತ ನಟಿಯರ ಹೆಸರುಗಳೇ ಕೇಳಿ ಬಂದಿದ್ದರೂ, ಚಿರಂಜೀವಿ ಅವರ ಎದುರು ನಿಂತು ನಟಿಸಲು ಯಾರಿಗೆ ಅವಕಾಶ ಸಿಗಲಿದೆ ಎನ್ನುವ ಚರ್ಚೆ ಶುರುವಾಗಿತ್ತು. ಅದಕ್ಕೀಗ ಫುಲ್ ಸ್ಟಾಪ್ ಬಿದ್ದಿದೆ. ಇದನ್ನೂ ಓದಿ : ಮಾ.13ಕ್ಕೆ ಅರಮನೆ ಮೈದಾನದಲ್ಲಿ ಜೇಮ್ಸ್ ಪ್ರೀ ಇವೆಂಟ್, ಹೊಸಪೇಟೆಯಲ್ಲಿ ಸಕ್ಸಸ್ ಸಂಭ್ರಮ
ಶ್ರುತಿ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರ ಮಾಡಲಿದ್ದಾರೆ. ಒಂದು ರೀತಿಯಲ್ಲಿ ರಗಡ್ ಆಗಿಯೇ ಆ ಪಾತ್ರ ಇರಲಿದೆಯಂತೆ. ಕೆ.ಎಸ್. ರವೀಂದ್ರ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಮೈತ್ರಿ ಮೋವಿ ಮೇಕರ್ಸ್ ಬ್ಯಾನರ್ ನಲ್ಲಿ ಚಿತ್ರ ಮೂಡಿ ಬರಲಿದೆ. ಇದನ್ನೂ ಓದಿ : ಬೆಂಗಳೂರಿನಿಂದ ಗಡಿಭಾಗಕ್ಕೆ ಆರ್.ಆರ್.ಆರ್ ಅದ್ಧೂರಿ ಕಾರ್ಯಕ್ರಮ ಶಿಫ್ಟ್
ಚಿರಂಜೀವಿ ಅವರ 154ನೇ ಸಿನಿಮಾ ಇದಾಗಿದ್ದು, ಮಹಿಳಾ ದಿನಚರಣೆಯ ದಿನದಂದೇ ಶ್ರುತಿ ಅವರನ್ನು ಚಿತ್ರತಂಡಕ್ಕೆ ಬರಮಾರಿಕೊಂಡಿದ್ದಾರಂತೆ ಚಿರಂಜೀವಿ. ಈ ಮೂಲಕ ಅವರು ಮಹಿಳಾ ದಿನಾಚರಣೆಯನ್ನು ಆಚರಿಸಿದ್ದಾರೆ.